ಜನರ ಮುಂದೆ ಬಿಗ್ ಬಾಸ್ ಗಿಮಿಕ್ ಬಯಲು; ಉಗ್ರಂ ಮಂಜು ಮಾಡಿದ್ದು ಓಕೆ ಆದ್ರೆ ಧನರಾಜ್‌ ಯಾಕೆ ಟಾರ್ಗೆಟ್?

First Published | Jan 16, 2025, 2:26 PM IST

ಯಾಕೆ ಪದೇ ಪದೇ ಧನರಾಜ್ ಟಾರ್ಗೆಟ್ ಆಗುತ್ತಿದ್ದಾರೆ? ಮಿಡ್ ವೀಕ್ ಎಲಿಮಿನೇಷನ್‌ನ ಕ್ಯಾನ್ಸಲ್ ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ ನೆಟ್ಟಿಗರು. 

 ಬಿಗ್ ಬಾಸ್ ಸೀಸನ್ 11ರ ಫಿನಾಲೆ ವಾರ ಶೀಘ್ರದಲ್ಲಿ ಆರಂಭವಾಗಲಿದೆ. ಹೀಗಾಗಿ ಮಿಡ್ ವೀಕ್ ಎಲಿಮಿನೇಷನ್‌ ಬಿಸಿ ಸ್ಪರ್ಧಿಗಳಿಗೆ ಮುಟ್ಟಿದೆ. ಇದರ ನಡುವೆ ಟಾಸ್ಕ್‌ ಮೋಸ ಬೆಳಕಿಗೆ ಬಂದಿರುವುದು ದೊಡ್ಡ ಚರ್ಚೆ ಹುಟ್ಟಿಸಿದೆ. 

ಹೌದು! ಈ ವಾರ ಬಿಗ್ ಬಾಸ್ ಸಾಲು ಸಾಲು ಟಾಸ್ಕ್‌ಗಳನ್ನು ನೀಡಿದ್ದರು. ಹಲವರು ಪಾಯಿಂಟ್ ಗೆದ್ದರು ಹಲವರು ಪಾಯಿಂಟ್ ಕಳೆದುಕೊಂಡರು. ಆದರೆ ಇಲ್ಲಿ ಟಾರ್ಗೆಟ್ ಆಗಿದ್ದು ಧನರಾಜ್ ಮಾತ್ರವೇ. 

Tap to resize

ಕೊನೆಯ ಟಾಸ್ಕ್‌ನಲ್ಲಿ ಧನರಾಜ್ ಎದುರು ಇದ್ದ ಕನ್ನಡಿಯಲ್ಲಿ ತಮ್ಮ ಗೇಮ್ ಬೋರ್ಡ್‌ ನೋಡಿಕೊಂಡು ಟಾಸ್ಕ್‌ ಮುಗಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ಅಂಕ ಪಡೆಯಲು ಸುಲಭವಾಗಿದೆ ಅನ್ನೋದು ಕೆಲವರ ಮಾತು. 

ಕನ್ನಡಿಯಲ್ಲಿ ಕಾಣಿಸುತ್ತಿತ್ತು ಎಂದು ಸ್ವತಃ ಧನರಾಜ್‌ ಒಪ್ಪಿಕೊಂಡಿದ್ದಾರೆ. ಗ್ರೇ ಏರಿಯಾ ಹುಡುಕಿಕೊಂಡೆ ಎಂದು ಉಗ್ರಂ ಮಂಜು ಕಾಮೆಂಟ್ ಮಾಡಿದ ಮೇಲೆ ಪ್ರತಿಯೊಬ್ಬರು ಏನಾಯ್ತು ಎಂದು ಡೀಟೇಲ್ ಆಗಿ ನೋಡಲು ಆರಂಭಿಸಿದ್ದರು. 

ಧನರಾಜ್ ಮಾಡಿದ್ದೇ ತಪ್ಪು ಅನ್ನೋದಾದರೆ ಯಾಕೆ ಇಷ್ಟು ದಿನ ಮಂಜು ಗ್ರೇ ಏರಿಯಾ ಹುಡುಕಿಕೊಂಡಾಗ ಯಾರು ಪ್ರಶ್ನೆ ಮಾಡಲಿಲ್ಲ? ಯಾಕೆ ಮಂಜುನ ಎಮಿಲಿನೇಷನ್‌ ಟಾರ್ಗೆಟ್‌ ಆಗಿ ಇಡಲಿಲ್ಲ ಅನ್ನೋದು ಫ್ಯಾನ್ಸ್ ಪ್ರಶ್ನೆ. 

ಅಷ್ಟೇ ಅಲ್ಲದೆ ಮಂಜು ಗ್ರೇ ಏರಿಯಾ ಹುಡುಕಿಕೊಂಡಾಗ ಅದನ್ನು ಪದೇ ಪದೇ ಎತ್ತಿ ಕೊಂಡಾಡಿ ಅದನ್ನು ನಾರ್ಮಲ್ ಪದವನ್ನಾಗಿಸಿದ್ದು ಸುದೀಪ್. ಯಾಕೆ ಗ್ರೇ ಏರಿಯಾವನ್ನು ಆರಂಭದಲ್ಲಿಯೇ ನಿಲ್ಲಿಸಲಿಲ್ಲ? 

ಹೀಗಾಗಿ ಧನರಾಜ್ ಅಭಿಮಾನಿಗಳು ಮತ್ತು ಬಿಗ್ ಬಾಸ್ ವೀಕ್ಷಕರು ಬೇಸರ ವ್ಯಕ್ತ ಪಡಿಸಿದ್ದಾರೆ. ಇಲ್ಲಿ ಟಾರ್ಗೆಟ್ ಮಾಡುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ ಎಂದು ಹೇಳಿದ್ದಾರೆ. 

Latest Videos

click me!