ಬಿಗ್ ಬಾಸ್ ಬಳಿಕ ಎಲ್​ಎಲ್​ಬಿ ಓದ್ತಾರಂತೆ ಚೈತ್ರಾ ಕುಂದಾಪುರ: ಜಡ್ಜ್ ಕತೆ ಅಷ್ಟೇ ಎಂದ ನೆಟ್ಟಿಗರು!

First Published | Jan 15, 2025, 10:59 PM IST

ಬಿಗ್ ಬಾಸ್ ಫಿನಾಲೆಗೆ ಇನ್ನೆರಡು ವಾರ ಬಾಕಿ ಇರುವಾಗಲೇ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ವಿಶೇಷ ಅಂದ್ರೆ ಅವರ ಬಗ್ಗೆ ಹೊಸ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದ್ದು, ಫಿನಾಲೆಗೆ ಇನ್ನೆರಡು ವಾರ ಬಾಕಿ ಇರುವಾಗಲೇ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿ ಹೊರ ಬಂದಿದ್ದರು.

105 ದಿನಗಳ ದೊಡ್ಮನೆ ಜರ್ನಿ ಮುಗಿಸಿ ಹೊರಬಂದಿರುವ ಚೈತ್ರಾ, ಟ್ರೋಫಿ ತೆಗೆದುಕೊಂಡು ಹೋಗುವಲ್ಲಿ ವಿಫಲವಾಗಿದ್ದಾರೆ. ಫಿನಾಲೆಗೆ ಎರಡೇ ವಾರ ಬಾಕಿಯಿರುವಾಗಲೇ ಆಚೆ ಬಂದಿದ್ದಾರೆ.

Tap to resize

ಸದ್ಯ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಚೈತ್ರಾ ಕುಂದಾಪುರ ಮುಂದೆ ಎಲ್‌ಎಲ್‌ಬಿ ಓದುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ನಿರಪರಾಧಿಗಳಿಗೆ ನ್ಯಾಯ ಕೊಡಿಸಬೇಕು ಎಂಬ ಹಂಬಲ ಚೈತ್ರಾ ಕುಂದಾಪುರ ಅವರಿಗಿದೆಯಂತೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಈ ಬಗ್ಗೆ ಒಂದು ಪೋಸ್ಟ್‌ನಲ್ಲಿ 'ಎಲ್‌ಎಲ್‌ಬಿ ಓದಬೇಕು ಅಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಈಗ ಮಾಡದ ತಪ್ಪಿಗೆ ಅನೇಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಪರ ನಿಲ್ಲುವುದಕ್ಕೋಸ್ಕರ ಎಲ್‌ಎಲ್‌ಬಿ ಓದುತ್ತೇನೆ ಎಂದು ಅದರಲ್ಲಿ ಬರೆಯಲಾಗಿದೆ.

ಈ ಪೋಸ್ಟ್‌ಗೆ ನೆಟ್ಟಿಗರು, ಅಲ್‌ ದಿ ಬೆಸ್ಟ್ ಮೇಡಂ, ಒಳ್ಳೆಯದಾಗಲಿ ಮೇಡಂ ಮಾಡಿ, ಏನ್ ಮೇಡಂ ಕಾಮಿಡಿ ಮಾಡ್ತೀರಾ ಅಂತ ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸಿದರೆ, ಮತ್ತೊಬ್ಬ ನೆಟ್ಟಿಗ ಜಡ್ಜ್ ಕತೆ ಅಷ್ಟೇ ಅಂತ ಕಮೆಂಟ್ ಮಾಡಿದ್ದಾರೆ.

ಇನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಚೈತ್ರಾ ಹುಟ್ಟಿದ್ದು. ಇಲ್ಲಿನ ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದಾರೆ. ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
 

ಹಿಂದುತ್ವದ ಬಗ್ಗೆ ಅಪಾರ ಜ್ಞಾನವುಳ್ಳ ಚೈತ್ರಾ ಕುಂದಾಪುರ, ತಮ್ಮ ಭಾಷಣಗಳಿಂದಲೇ ಜನರ ಗಮನ ಸೆಳೆದಿದ್ದರು. ಇನ್ನು ಹೀಗೆ ವೇದಿಕೆ ಹತ್ತಿ ಭಾಷಣ ಮಾಡುವ ಚೈತ್ರಾ ಒಂದು ರೂಪಾಯಿ ಹಣವನ್ನು ಪಡೆಯುವುದಿಲ್ಲವಂತೆ.  

Latest Videos

click me!