ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಗೌತಮಿ ಜಾಧವ್‌ ಅತಿ ಹೆಚ್ಚು ಸಂಭಾವನೆ ಪಡೆಯೋದಂತೆ: ವಾರಕ್ಕೆ ಎಷ್ಟು ಗೊತ್ತಾ?

First Published | Jan 15, 2025, 11:50 PM IST

ದೊಡ್ಮನೆಯಲ್ಲಿ ಹೆಚ್ಚಿನ ಸಮಯವನ್ನು ಗೌತಮಿ, ಉಗ್ರಂ ಮಂಜು ಜೊತೆ ಕಳೆಯುತ್ತಿದ್ದರು. ಇದೇ ಕಾರಣಕ್ಕೆ ಹಲವು ಬಾರಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮಧ್ಯೆ ಗೌತಮಿ ಬಿಗ್‌ ಬಾಸ್‌ನಲ್ಲಿ ವಾರಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಬಿಗ್ ಬಾಸ್ ಅಂದ್ರೇನೇ ಟಿಸ್ಟ್‌. ಇಲ್ಲಿ ಪ್ರತಿ ಘಳಿಗೆಯೂ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌ ಮಧ್ಯೆ ಗೌತಮಿ ಜಾಧವ್‌ ವಾರಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಹೌದು! ಗೌತಮಿ ಜಾಧವ್‌ ತಮ್ಮ ವ್ಯಕ್ತಿತ್ವದಿಂದಲೇ ಬಿಗ್‌ ಬಾಸ್‌ನಲ್ಲಿ ಸದ್ದು ಮಾಡಿದ್ದರು. ಸದಾ ಪಾಸಿಟಿವ್‌ ಆಗಿರುತ್ತೇನೆ, ಎಲ್ಲವನ್ನೂ ಪಾಸಿಟಿವ್‌ ಆಗಿಯೇ ತೆಗೆದುಕೊಳ್ಳುತ್ತೇನೆ ಎಂದು ಗೌತಮಿ ಜಾಧವ್‌ ಹೇಳಿದ್ದರು. 

Tap to resize

ಗೌತಮಿ ಜಾಧವ್‌ ಕೂಡಾ ಮನೆಯಲ್ಲಿ ಅದೇ ರೀತಿಯೇ ಇರುತ್ತಿದ್ದರು. ಜೊತೆಗೆ ಹಲವು ಬಾರಿ ಅವರು ನಾಮಿನೇಟ್‌ ಆಗಿ ಉಳಿದಿದ್ದರು. ಗೌತಮಿ ಎಲ್ಲಿಯೂ ತೀವ್ರ ವಾಗ್ವಾದ ಮತ್ತು ಜಗಳಗಳಿಗೆ ಹೋಗುತ್ತಿರಲಿಲ್ಲ.

ವಿಶೇಷವಾಗಿ ಗೌತಮಿ ಮತ್ತು ಉಗ್ರಂ ಮಂಜು ಅವರ ಗೆಳೆತನ ಕೂಡ ಬಿಗ್‌ ಬಾಸ್‌ ವೀಕ್ಷಕರ ಗಮನ ಸೆಳೆದಿತ್ತು. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಗೌತಮಿ ಜಾಧವ್ ನೇರವಾಗಿ ಹೇಳುತ್ತಿದ್ದರು. 
 

ದೊಡ್ಮನೆಯಲ್ಲಿ ಹೆಚ್ಚಿನ ಸಮಯವನ್ನು ಗೌತಮಿ, ಉಗ್ರಂ ಮಂಜು ಜೊತೆ ಕಳೆಯುತ್ತಿದ್ದರು. ಇದೇ ಕಾರಣಕ್ಕೆ ಹಲವು ಬಾರಿ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮಧ್ಯೆ ಗೌತಮಿ ಬಿಗ್‌ ಬಾಸ್‌ನಲ್ಲಿ ವಾರಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬ ಚರ್ಚೆ ಶುರುವಾಗಿದೆ.

ಬಿಗ್‌ ಬಾಸ್‌ನ ಉಳಿದೆಲ್ಲಾ ಕಂಟೆಸ್ಟೆಂಟ್‌ಗಳಿಗಿಂತ ಗೌತಮಿ ಅವರೇ ಅತಿ ಹೆಚ್ಚು ಸಂಭಾವನೆ ವಾರಕ್ಕೆ ಪಡೆಯುತ್ತಾರೆ ಎನ್ನಲಾಗಿದೆ. ಅಂದ್ರೆ ವಾರಕ್ಕೆ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. 

ಈ ಪ್ರಕಾರ ಗೌತಮಿ ಜಾಧವ್‌ 16 ವಾರಗಳಿಗೆ ಒಟ್ಟು 24,00,000 ರೂಪಾಯಿ ಸಂಭಾವನೆ ಪಡೆದಂತಾಗುತ್ತದೆ. ಜೊತೆಗೆ ಸ್ಪಾನ್ಸರ್‌ ಕಡೆಯಿಂದ ಬಹುಮಾನದ ಮೊತ್ತವು ಸಿಗಲಿದೆಯಂತೆ.

ಇನ್ನು ಗೌತಮಿ ಜಾಧವ್, ಜೀ ಕನ್ನಡದಲ್ಲಿ ಪುಸಾರವಾಗುತ್ತಿದ್ದ ಸತ್ಯ ಧಾರಾವಾಹಿಯಲ್ಲಿ ಸತ್ಯ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಟಾಮ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಕೊನೆಯಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲೂ ಮಿಂಚಿದ್ದರು. 

Latest Videos

click me!