ಮಹಾರಾಷ್ಟ್ರ ಸ್ಟೈಲ್ ಸೀರೆಯುಟ್ಟು ಕಣ್ಣಲ್ಲೇ ಕಿಚ್ಚು ಹಚ್ಚಿದ ಭೂಮಿ ಶೆಟ್ಟಿ

First Published | Nov 7, 2023, 10:58 AM IST

ಬಿಗ್ ಬಾಲ್ ಸ್ಪರ್ಧಿಯಾಗಿದ್ದ ಹಾಗೂ ಕಿನ್ನರಿ ಸೀರಿಯಲ್ ೂಲಕ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿದ ನಟಿ ಭೂಮಿ ಶೆಟ್ಟಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ, ಈ ಬಾರಿ ಸೀರೆಯುಟ್ಟು ಸಖತ್ತಾಗಿ ಮಿಂಚಿದ್ದಾರೆ ನಟಿ. 
 

ಬಿಗ್ ಬಾಸ್ ಬಳಿಕ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಭೂಮಿ ಶೆಟ್ಟಿ (Bhoomi Shetty) ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತುಂಬಾನೆ ಆಕ್ಟಿವ್ ಆಗಿರ್ತಾರೆ. ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಸುದ್ದಿ ಮಾಡ್ತಿರ್ತಾರೆ. 
 

ಕಿನ್ನರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕ ಪ್ರವೇಶಿಸಿದ ಭೂಮಿ ಶೆಟ್ಟಿ ಕಿನ್ನರಿಯಾಗಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಇದಾದ ನಂತರ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸಹ ನಟಿಸಲು ಆರಂಭಿಸಿದರು. 

Tap to resize

ಕಿನ್ನರಿಯಾಗಿದ್ದ ಭೂಮಿ ಶೆಟ್ಟಿಯನ್ನು ಜನರು ರಿಯಲ್ ಆಗಿ ನೋಡಿದ್ದು, ಬಿಗ್ ಬಾಸ್ (Bigg Boss) ಬಂದ ಮೇಲೆ. ಆಕೆಯ ರಿಯಲ್ ಲೈಫ್, ಮುಗ್ಧತೆ, ಆಟ ಎಲ್ಲವೂ ಸೇರಿ ಭೂಮಿ ಶೆಟ್ಟಿಯನ್ನು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಮಾಡಿದ್ದಂತೂ ನಿಜ. 
 

ಸದ್ಯಕ್ಕೆ ಭೂಮಿ ಶೆಟ್ಟಿ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಸಹ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಭೂಮಿ ಕಿರುತೆರೆಯ ಜೊತೆಗೆ ಹಿರಿತೆರೆಯ ಫೇವರಿಟ್ ನಟಿ ಕೂಡ ಆಗಿದ್ದಾರೆ. 
 

ಇದೀಗ ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ (Social Media) ಫೋಟೋಗಳನ್ನು ಶೇರ್ ಮಾಡಿದ್ದು, ಆಕೆಯ ಸ್ಟೈಲ್ ಜೊತೆಗೆ ಕಣ್ಣೋಟ ನೋಡಿದ್ರೆ ಅಭಿಮಾನಿಗಳ ಹೃದಯದಲ್ಲಿ ಕಿಚ್ಚು ಹಚ್ಚಿದಂತೆ ಕಾಣ್ಸುತ್ತೆ. 
 

ಮುಂಬೈನ ಬೀದಿಗಳಲ್ಲಿ ಫೋಟೋ ಶೂಟ್ ಮಾಡಿಸಿರುವ ಭೂಮಿ ಶೆಟ್ಟಿ ಮಹಾರಾಷ್ಟ್ರಿಯನ್ ಶೈಲಿಯಲ್ಲಿ ಬಿಳಿ ಬಣ್ಣದ ಅದರ ಮೇಲೆ ಕೆಂಪು ಫ್ಲೋರಲ್ ಡಿಸೈನ್ ಇರುವ ಸೀರೆಯುಟ್ಟಿದ್ದಾರೆ. ಜೊತೆಗೆ ಕೆಂಪು ಬಣ್ಣದ ಬ್ಲೌಸ್ ಕೂಡ ಧರಿಸಿದ್ದಾರೆ. 

ಸ್ಟೈಲ್ ಆಗಿ ಸೀರೆಯುಟ್ಟು, ಅದರ ಜೊತೆ ವೈಟ್ ಸ್ನೀಕರ್ಸ್ ಧರಿಸಿ, ಬನ್ ಹೇರ್ ಸ್ಟೈಲ್ ಜೊತೆಗೆ ಗೋಲ್ಡನ್ ಇಯರಿಂಗ್ಸ್, ಜೊತೆ ಡಿಸೈನರ್ ಬ್ಲೌಸ್, ಕುತ್ತಿಗೆ ಹಿಂದಿನ ಟ್ಯಾಟೂ ಜೊತೆಗೆ ಭೂಮಿಯ ಕಣ್ಣೋಟ ಕಿಚ್ಚು ಹಚ್ಚಿರೋದಂತೂ ಖಚಿತ. 
 

Latest Videos

click me!