Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ

Published : Dec 25, 2025, 11:07 PM IST

Gowri Shankara : ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿದ್ದ ನಟಿ ಅಶ್ವಿನಿ ನಾಲ್ಕನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ಖಡಕ್ ಡಿಸಿ ಮಾಲಿನಿಯಾಗಿ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ.

PREV
17
ಅಶ್ವಿನಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ನಟಿ ಅಶ್ವಿನಿ ದೊಡ್ಮನೆಯಲ್ಲಿ ಇದ್ದದ್ದು ಕೇವಲ ಒಂದು ತಿಂಗಳ ಕಾಲ ಮಾತ್ರ, 'ಮುದ್ದು ಲಕ್ಷ್ಮೀ' ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಈ ನಟಿ ಇದೀಗ ಮತ್ತೊಂದು ಸೀರಿಯಲ್ ಮೂಲಕ ಸದ್ದು ಮಾಡಲು ಹೊರಟಿದ್ದಾರೆ.

27
ಮುದ್ದುಲಕ್ಷ್ಮೀ

ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಮುದ್ದು ಲಕ್ಷ್ಮೀ. ಈ ಧಾರಾವಾಹಿಯಲ್ಲಿ ಧ್ರುವಂತ್ ಜೊತೆ ಅಶ್ವಿನಿ ತೆರೆ ಹಂಚಿಕೊಂಡಿದ್ದರು. ಈ ಧಾರವಾಹಿ ಸುಮಾರು ನಾಲ್ಕು ವರ್ಷಗಳ ಕಾಲ ಮುಂದುವರೆದಿತ್ತು. ಮುದ್ದು ಲಕ್ಷ್ಮೀಯಾಗಿ, ಜಾಹ್ನವಿಯಾಗಿ ಅಶ್ವಿನಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು.

37
ಅಶ್ವಿನಿ ನಟಿಸಿದ ಸೀರಿಯಲ್ ಗಳು

ಅಶ್ವಿನಿ ಮುದ್ದುಲಕ್ಷ್ಮಿ, ಮುದ್ದು ಮನಸುಗಳು, ಮುದ್ದು ಮಣಿಗಳು ಅಲ್ಲದೇ ಗಿರಿಜಾ ಕಲ್ಯಾಣ ಮತ್ತು ಕುಲವಧು ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ನಟನೆಯಿಂದ ದೂರ ಉಳಿದಿದ್ದ ಅಶ್ವಿನಿ, ಸೂರ್ಯವಂಶ ಸೀರಿಯಲ್ ನಲ್ಲಿ ನಟಿಸಿದ್ದರು. ಬಳಿಕ ಬಿಗ್ ಬಾಸ್ ಮೂಲಕ ಮತ್ತೆ ಸದ್ದು ಮಾಡಿದ್ದರು.

47
ಮತ್ತೆ ಸೀರಿಯಲ್ ಗೆ ಎಂಟ್ರಿ

ಇದೀಗ ಅಶ್ವಿನಿ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ಪವರ್ ಫುಲ್ ಆಗಿರುವ ಪಾತ್ರವಾಗಿದ್ದು, ಈಗಾಗಲೇ ಪ್ರೊಮೋ ಪ್ರಸಾರವಾಗಿದೆ.

57
ಖಡಕ್ ಡಿಸಿ ಮಾಲಿನಿ

ಇಲ್ಲಿವರೆಗೆ ‘ಗೌರಿ ಶಂಕರ’ ಧಾರಾವಾಹಿಯಲ್ಲಿ ಗೌರಿ ಡಿಸಿಯಾಗಿ, ತನ್ನ ಗಂಡನನ್ನೆ ಅರೆಸ್ಟ್ ಮಾಡುವ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಇದೀಗ ಖಡಕ್ ಡಿಸಿ ಮಾಲಿನಿಯಾಗಿ ಅಶ್ವಿನಿ ಎಂಟ್ರಿ ಕೊಟ್ಟಿದ್ದಾರೆ. ಜಬರ್ ದಸ್ತ್ ಪ್ರೊಮೋ ಬಿಡುಗಡೆಯಾಗಿದೆ.

67
ಏನಾಗ್ತಿದೆ ಕಥೆ?

ಡಿಸಿ ಗೌರಿ, ಕಾರ್ಯಕ್ರಮವೊಂದರಲ್ಲಿ ಇನ್ನೇನು ದೀಪ ಬೆಳಗಬೇಕು ಎನ್ನುವಷ್ಟರಲ್ಲಿ ಅಲ್ಲಿ ಎಂಟ್ರಿ ಕೊಡುವ ಹೊಸ ಡಿಸಿ ಮಾಲಿನಿ ಐಎಎಸ್, ದೀಪ ಬೆಳಗಬೇಕಾಗಿರೋದು ನಾನು, ಎನ್ನುತ್ತಾ ಕ್ಯಾಂಡಲ್ ಆರಿಸುತ್ತಾಳೆ, ಅಷ್ಟೇ ಅಲ್ಲ ಗೌರಿ ನಾಮಫಲಕವನ್ನೇ ಆಫೀಸಿನಿಂದ ತೆಗೆದು ಗೌರಿ ಕೈಗಿಟ್ಟು ಕೆಲಸ ಇಲ್ಲದವರು ನನ್ನ ಆಫೀಸಲ್ಲಿ ಅನಗತ್ಯವಾಗಿ ಇರಬಾರದು, ಜಾಗ ಕ್ಲಿಯರ್ ಮಾಡಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಾಳೆ.

77
ಅಭಿಮಾನಿಗಳು ಖುಷ್

ಸೂರ್ಯವಂಶ ಧಾರಾವಾಹಿಯಲ್ಲಿ ಸುರಭಿ ಪಾತ್ರದಲ್ಲಿ ಮಿಂಚಿದ ಅಶ್ವಿನಿ, ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೇ ಅಶ್ವಿನಿ ಖಡಕ್ ನಟನೆ ನೋಡಿ ಸಂಭ್ರಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories