‘ರಾಜಕುಮಾರಿ’ ಧಾರಾವಾಹಿ ನಟಿ ಗಗನ ಭಾರಿ ನಟನೆಯ ಕುರಿತು ವೀಕ್ಷಕರ ಅಸಮಾಧಾನ

Published : Dec 25, 2025, 05:38 PM IST

Rajakumari Serial: ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ‘ರಾಜಕುಮಾರಿ’ ಧಾರಾವಾಹಿಯಲ್ಲಿ ಲಡ್ಡು ಆಗಿ ನಟಿಸುತ್ತಿರುವ ಗಗನ ಭಾರಿ ನಟನೆಯ ಕುರಿತು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪಾತ್ರಕ್ಕೆ ಗಗನ ನ್ಯಾಯ ಒದಗಿಸುತ್ತಿಲ್ಲ ಎನ್ನುವ ಕೂಗು ವೀಕ್ಷಕ ವಲಯದಿಂದ ಕೇಳಿ ಬರುತ್ತಿದೆ.

PREV
17
ಗಗನ ಭಾರಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾನಟಿ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಗಮನ ಸೆಳೆದ ಸ್ಪರ್ಧಿ ಅಂದ್ರೆ ಅದು ಗಗನ ಭಾರಿ. ತಮ್ಮ ಕಾಮಿಡಿ, ಮುಗ್ಧತೆಯಿಂದಲೇ ಜನಮನ ಗೆದ್ದು ಕೊನೆ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು ಬಳಿಕ ಸಾಲು ಸಾಲು ರಿಯಾಲಿಟಿ ಶೋಗಳಲ್ಲಿ ಅವಕಾಶ ಪಡೆದುಕೊಂಡಿದ್ದರು.

27
ರಿಯಾಲಿಟಿ ಶೋಗಳಲ್ಲಿ ಮಿಂಚಿಂಗ್

ಮಹಾನಟಿ ಬಳಿಕ ಗಗನ ಭರ್ಜರಿ ಬ್ಯಾಚುಲರ್ಸ್, ಡಿಕೆಡಿಯಲ್ಲಿ ಭಾಗವಹಿಸಿ ಮತ್ತಷ್ಟು ಜನಪ್ರಿಯತೆ ಪಡೆದಿದ್ದರು. ಅದಾದ ನಂತರ ಗಗನ ನೇರವಾಗಿ ಸೀರಿಯಲ್ ಗೆ ನಾಯಕಿಯಾಗಿ ಆಯ್ಕೆಯಾದರು. ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ‘ರಾಜಕುಮಾರಿ’ ಧಾರಾವಾಹಿಗೆ ಗಗನ ಲೀಡ್ ರೋಲ್.

37
ರಾಜಕುಮಾರಿ ಆದ ಗಗನ

ರಾಜಕುಮಾರಿ ಧಾರಾವಾಹಿಯಲ್ಲಿ ಸಿಹಿ ತಿಂಡಿ ಮಾರುವಂತಹ ಲಡ್ಡು ಆಗಿ ಅಭಿನಯಿಸುತ್ತಿದ್ದಾರೆ. ಆರಂಭದಲ್ಲಿ ಪಟ ಪಟ ಎಂದು ಮಾತನಾಡುತ್ತ, ಮನೆಮಂದಿಯ ಗಮನ ಸೆಳೆದಿದ್ದರು. ಆದರೆ ಈಗ ಕಥೆ ಬದಲಾಗಿದೆ ಪಾತ್ರ ಬದಲಾಗಿದೆ. ಮನೆ ಮಂದಿಯೂ ಲಡ್ಡುವನ್ನು ಒಪ್ಪಿಕೊಂಡಿದ್ದಾರೆ. ಆದರೆ ವೀಕ್ಷಕರು ಮಾತ್ರ ಲಡ್ಡು ಪಾತ್ರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

47
ಗಗನಾಗೆ ನಟನೆ ಬರೋದಿಲ್ವಾ?

ಗಗನಾ ಮಹಾನಟಿ ಮೂರನೇ ರನ್ನರ್ ಅಪ್ ಆಗಿದ್ದಾಗಲೇ, ಅಪಸ್ವರ ಎದ್ದಿತ್ತು, ಆಕೆಗಿಂತ ಡಿಸರ್ವಿಂಗ್ ಸ್ಪರ್ಧಿಗಳು ಬೇರೆ ಇದ್ದರು ಎನ್ನಲಾಗುತ್ತಿತ್ತು. ಇದೀಗ ರಾಜಕುಮಾರಿ ಸೀರಿಯಲ್ ನಟನೆಯ ಕುರಿತು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಗಗನ ನಟಿಸುವುದನ್ನು ನೋಡಿದ್ರೆ ಬೇಸರ ಆಗುತ್ತೆ, ಗಗನಾ ಮುಖದಲ್ಲಿ ಎಕ್ಸ್’ಪ್ರೆಶನ್ ಇಲ್ವೇ ಇಲ್ಲ ಎನ್ನುತ್ತಿದ್ದಾರೆ.

57
ಏನಾಗುತ್ತಿದೆ ಧಾರಾವಾಹಿಯಲ್ಲಿ?

ಲಡ್ಡು ಮತ್ತು ಶೌರ್ಯನಿಗೆ ಮೊದಲಿನಿಂದ ಜಗಳ. ಆದರೆ ಪರಿಸ್ಥಿತಿಗೆ ಕಟ್ಟು ಬಿದ್ದು ಲಡ್ಡುಗೆ ಶೌರ್ಯ ತಾಳಿ ಕಟ್ಟಿದ್ದಾನೆ. ಶೌರ್ಯ ಫ್ರೆಂಡ್ ಅನು ಲಡ್ಡುವನ್ನು ಶೌರ್ಯನ ಮನೆಯಲ್ಲಿ ಬಿಟ್ಟಿದ್ದಾಳೆ. ಕಥೆ ಏನೇನೋ ತಿರುವು ಪಡೆದುಕೊಂಡು ಕೊನೆಗೆ ಶೌರ್ಯ ಲಡ್ಡು ಜೊತೆಗೆ ಅನು ಕುತ್ತಿಗೆಗೂ ತಾಳಿ ಕಟ್ಟಿದ್ದಾನೆ, ಆ ಮೂಲಕ ಇಬ್ಬರು ಹೆಂಡಿರ ಮುಂದಿನ ಗಂಡ ಆಗಿದ್ದಾನೆ ಶೌರ್ಯ.

67
ಗಗನಾಗೆ ರಾಜಕುಮಾರಿ ಸಿಕ್ಕಿದ್ದು ಹೇಗೆ?

ಜೀ ಕನ್ನಡದಿಂದಲೇ ಅವಕಾಶ. ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೂಟಿಂಗ್ ವೇಳೆ, ಜೀ ಕನ್ನಡ ಟೀಮ್ ಸೀರಿಯಲ್ ಅವಕಾಶ ಇದೆ ಎಂದು ಆಫರ್ ನೀಡಿದ್ದರಂತೆ. ಜೀ ಪ್ರತಿಬಾರಿ ಒಳ್ಳೆಯ ಅವಕಾಶ ನೀಡೋದ್ರಿಂದ ಮಾಡುವುದಾಗಿ ಒಪ್ಪಿಕೊಂಡರಂತೆ. ಕೊನೆಗೆ ಆಡಿಶನ್ ಕೊಟ್ಟಾಗ, ಆ ಪಾತ್ರಕ್ಕೂ ಸೂಟ್ ಆಗಿ, ಗಗನಾಳನ್ನೆ ಆಯ್ಕೆ ಮಾಡಿತ್ತಂತೆ ಸೀರಿಯಲ್ ತಂಡ.

77
ಗಗನಾ ಊರೆಲ್ಲಿ?

ಗಗನಾ ಭಾರಿ ಚಿತ್ರದುರ್ಗ ಮೂಲದವರು. ಎಂಜಿನಿಯರಿಂಗ್ ‍ಪದವಿಧರೆ. ಮೊದಲೇ ನಟನೆ ಮೇಲೆ ಒಲವಿದ್ದ ಗಗನಾಗೆ, ಓದು ಮುಗಿಸಿದ ನಂತರ ಪ್ರತಿಷ್ಠಿತ ಕಂಪನಿಯಲ್ಲೇ ಕೆಲಸ ಸಿಕ್ಕಿತ್ತಂತೆ. ಈ ಸಂದರ್ಭದಲ್ಲಿ ಮಹಾನಟಿಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಆದರು. ಬಳಿಕ ಐಟಿ ಕೆಲಸಕ್ಕೆ ರಿಸೈನ್ ಮಾಡಿ ನಟನೆಯಲ್ಲಿ ತೊಡಗಿಸಿಕೊಂಡರು ಗಗನಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories