5 ವರ್ಷ ಅನ್ಯೋನ್ಯವಾಗಿ ಬಾಳಲು ಪ್ರಯತ್ನಪಟ್ಟಿದ್ದೀನಿ: ಡಿವೋರ್ಸ್‌ ಬಗ್ಗೆ ಮೌನ ಮುರಿದ ಚೈತ್ರಾ ವಾಸುದೇವನ್!

First Published | Jul 31, 2023, 12:34 PM IST

ಕೊನೆಗೂ ಡಿವೋರ್ಸ್‌ ಪಡೆಯಲು ಕಾರಣ ಹಂಚಿಕೊಂಡ ಚೈತ್ರಾ ವಾಸುದೇವನ್. ಅಭಿಮಾನಿಗಳಿಂದ ಪ್ರೀತಿಯ ಸುರಿಮಳೆ... 

ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೊ ಮತ್ತು ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಜನಪ್ರಿಯ ನಿರೂಪಕಿ, ಸೋಷಿಯಲ್ ಮೀಡಿಯಾ ಸ್ಟಾರ್ ಚೈತ್ರಾ ವಾಸುದೇವನ್. 

ಕೆಲವು ದಿನಗಳ ಹಿಂದೆ ವಿಚ್ಛೇದನ ಪಡೆದಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಾಕಿ ಕಾಮೆಂಟ್ಸ್‌ ಆಫ್ ಮಾಡಿಬಿಟ್ಟರು. 

Tap to resize

ಪರ್ಸನಲ್ ಆಗಿ ಅಭಿಮಾನಿಗಳು, ಸಿನಿಮಾ ತಾರೆಯರು ಮೆಸೇಜ್ ಮಾಡಿ ನಟಿಗೆ ಸಪೋರ್ಟ್ ಮಾಡಿದ್ದಾರೆ. ಹೀಗಾಗಿ ಧೈರ್ಯ ಮಾಡಿ ಕಾರಣ ಹಂಚಿಕೊಂಡಿದ್ದಾರೆ. 

'ಹೆಚ್ಚಿನ ಜನರು ಯೋಚಿಸುವಂತೆ ನನ್ನ ಪತಿ ಸತ್ಯ ಮತ್ತು ನಾನು ಅಹಂಕಾರದ ಸಮಸ್ಯೆಗಳಿಂದ ಬೇರೆಯಾಗಿಲ್ಲ'ಎಂದು ಚೈತ್ರಾ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಹೇಳಿದ್ದಾರೆ.

'ಸತ್ಯ ಮತ್ತು ನಾನು 2017ರಲ್ಲಿ ವಿಚಾಹವಾದೆವು. ಅನ್ಯೋನ್ಯವಾಗಿ ಬಳಲು ಸುಮಾರು 5 ವರ್ಷಗಳ ಕಾಲ ತುಂಬಾ ಪ್ರಯತ್ನಪಟ್ವಿ' ಎಂದಿದ್ದಾರೆ ಚೈತ್ರಾ.

'ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಬೇರೆ ಬೇರೆಯಾಗಲು ನಿರ್ಧಾರ ಮಾಡಿದ್ವಿ. ಕೆಲವು ತಿಂಗಳ ಹಿಂದೆ ನಾವು ವಿಚ್ಛೇದನ ಪಡೆದ್ವಿ' ಎಂದು ಚೈತ್ರಾ ತಿಳಿಸಿದ್ದಾರೆ.

Latest Videos

click me!