ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ರೋಚಕ ಘಟ್ಟದಲ್ಲಿದೆ. ಕೊನೆಗೂ ಶಿವಣ್ಣನಿಗೆ ಪಾರು ತನ್ನ ಹೃದಯದ ಮಾತನ್ನು ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಬೆಟ್ಟದ ಮೇಲೆ ಸುಂದರವಾದ ಸೆಟ್ ಹಾಕಲಾಗಿತ್ತು.
ಕನ್ನಡಿ ಹಿಡಿದು ಇವನೇ ನಾನು ಪ್ರೀತಿಸುವ ಹುಡುಗ ಎಂದು ತೋರಿಸುತ್ತಾಳೆ. ಆದ್ರೆ ಒಂದು ಕ್ಷಣ ಶಿವು ಜೋರಾಗಿ ನಗುತ್ತಾನೆ. ನಕ್ಕು ತುಂಬಾ ದಿನ ಆಗಿತ್ತು. ಇದನ್ನ ಮನೆಯಲ್ಲಿಯೇ ಹೇಳಿದ್ರೆ ಅಲ್ಲೇ ನಗುತ್ತಿದ್ದೆ ಎಂದು ಹೇಳುತ್ತಾನೆ. ಆದರೂ ಪಾರು ತನ್ನ ಪ್ರೀತಿಯನ್ನು ಅರ್ಥ ಮಾಡಲು ಪ್ರಯತ್ನಿಸುತ್ತಾನೆ.
ನೀನು ಆಕಾಶದಲ್ಲಿ ತಾರೆ, ನಾನು ಮಾರಿಗುಡಿಯಲ್ಲಿರೋ ಕೆರೆ. ಈ ಕೆರೆಯಲ್ಲಿ ತಾರೆಗಳ ಪ್ರತಿಬಿಂಬ ಕಾಣೋದು ದೊಡ್ಡದು. ಆದ್ರೆ ಆ ತಾರೆಯೇ ನನ್ನ ಬಳಿಯಲ್ಲಿ ಬರಬೇಕು ಅಂತ ಆಸೆ ಪಡೋದು ತಪ್ಪಾಗುತ್ತದೆ. ನೀನೆಲ್ಲಿ, ನಾನೆಲ್ಲಿ ಎಂದು ಪಾರ್ವತಿಗೆ ಶಿವು ಹೇಳಿದ್ದಾನೆ. ಈ ಮಾತನ್ನು ಕೇಳಿದ ವೀಕ್ಷಕರು, ಶಿವು ಹೇಳಿದ ಮಾತು ಸತ್ಯ ಅಲ್ಲವಾ ಎಂದು ಹೇಳಿದ್ದಾರೆ.
ತನ್ನ ಪ್ರೀತಿಯನ್ನು ಶಿವು ಒಪ್ಪಿಕೊಳ್ಳದಿದ್ದಾಗ ನೊಂದ ಪಾರು, ಸಾಬೀತು ಮಾಡಲು ಕಲ್ಯಾಣಿಗೆ ಜಿಗಿಯುತ್ತಾಳೆ. ನಂತರ ಅಲ್ಲಿಗೆ ಬಂದು ಪಾರ್ವತಿಯನ್ನು ಶಿವು ಕಾಪಾಡುತ್ತಾನೆ. ಯಾಕೆ ಹೀಗೆ ಮಾಡ್ತೀಯಾ ಎಂದು ಕೇಳಿದಾಗ, ನೀನು ಇಲ್ಲ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಪ್ರೇಮ ನಿವೇದನೆಯನ್ನು ಹೇಳಿಕೊಂಡಾಗ ಅಣ್ಣಯ್ಯ ಶಾಕ್‌ಗೆ ಒಳಗಾಗಿ ಪ್ರೇಮಾದ ಕೋಮಾಗೆ ಹೋಗಿದ್ದಾನೆ.
ಕಲ್ಯಾಣಿಯಿಂದ ಪಾರು ಬೈಕ್ ಓಡಿಸಿಕೊಂಡು ಶಿವು ಮಾವನನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಂತರ ಮನೆಯಲ್ಲಿ ಬೆಡ್‌ಶೀಟ್ ಹೊದ್ದುಕೊಂಡು ದಿಗಿಲು ಬಡಿದವರಂತೆ ಶಿವು ಕುಳಿತಿದ್ದಾನೆ. ಪಾರು ತನ್ನನ್ನು ಪ್ರೀತಿಸುತ್ತಿರೋದು ನಿಜವೇ ಎಂದು ಪದೇ ಪದೇ ಹೇಳುತ್ತಿದ್ದಾನೆ.
Annayya
ಪಾರುಗೆ ಪ್ರಪೋಸ್ ಮಾಡುವಂತೆ ಶಿವಯ್ಯನ ತಂಗಿಯರು ಸಾಥ್ ನೀಡಿದ್ದರು. ನಾದಿನಿಯರು ಹೇಳಿದಂತೆ ಪಾರು ಸಹ ಪ್ರಪೋಸ್ ಮಾಡಿದ್ದಳು. ಆದರೆ ಅಣ್ಣ ಪ್ರೇಮದ ಕೋಮಾಗೆ ಹೋಗಿರೋದನ್ನು ಕಂಡು ತಂಗಿಯರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ನಾನು ನೀಡಿದ ಶಾಕ್‌ನಿಂದಲೇ ಶಿವು ಮಾವು ಹೀಗೆ ಆಗಿರೋದು, ಹಾಗಾಗಿ ಇದನ್ನ ನಾನೇ ಸರಿ ಮಾಡುವೆ ಎಂದು ಪಾರು ಹೇಳಿದ್ದಾಳೆ.