ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಬಿಗ್ ಬಾಸ್ ಸೀಸನ್ 9 ಆರಂಭವಾಗಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದೆ.
ಸ್ಪರ್ಧಿಗಳ ಪಟ್ಟೆಯನ್ನು ನೆಟ್ಟಿಗರು ಲೆಕ್ಕ ಮಾಡುತ್ತಿದ್ದಾರೆ. ಈಗಾಗಲೆ 8ರಿಂದ 10 ಜನರ ಹೆಸರನ್ನು ಲೆಕ್ಕ ಮಾಡಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಓಟಿಟಿಯಿಂದ ಎಂಟ್ರಿ ಕೊಟ್ಟವರು.
ರೂಪೇಶ್ ಶೆಟ್ಟಿ, ರಾಕೇಶ್, ಆರ್ಯವರ್ಧನ್ ಮತ್ತು ಸಾನ್ಯಾ ಐಯ್ಯರ್ ಬಿಗ್ ಬಾಸ್ ಓಟಿಟಿಯಿಂದ ಟಿವಿ ಎಂಟ್ರಿ ಕೊಟ್ಟಿದ್ದಾರೆ. ಇವರ ಲಿಸ್ಟ್‌ನಲ್ಲಿ ಈಗ ಕನ್ನಡ ಕಿರುತೆರೆ ಮತ್ತು ಧಾರಾವಾಹಿ ಜನರು ಎಂಟ್ರಿ ಕೊಡುತ್ತಿದ್ದಾರೆ.
ಪ್ರೇಮಾ: ಕನ್ನಡ ಚಿತ್ರರಂಗದ ವರ್ಸಟೈಲ್ ನಟಿ ಪ್ರೇಮಾ ಎಂಟ್ರಿ ಕೊಡುವ ಸಾಧ್ಯತೆಗಳಿದೆ. ಈ ಹಿಂದೆ ಪ್ರೇಮಾ ಸಹೋದರ ಅಯ್ಯಪ್ಪ ಸ್ಪರ್ಧಿಸಿದ್ದರು.
ಸುನೀಲ್: ಶನಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು ಸುನೀಲ್ ಇದೀಗ ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಸುನೀಲ್ ಕೂಡ ಎಂಟ್ರಿ ಕೊಡಬಹುದು ಎನ್ನಲಾಗಿದೆ.
ಅಮೂಲ್ಯ ಗೌಡ: ಕಮಲಿ ಧಾರಾವಾಹಿ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಅಮೂಲ್ಯ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫಾಸ್ಟ್ ಆಗಿದ್ದಾರೆ. ಅಮೂಲ್ಯ ಎಂಟ್ರಿ ಕೊಟ್ಟರೆ ಹುಡುಗರು ನೋಡುವುದು ಗ್ಯಾರಂಟಿ.
ರಾಘವೇಂದ್ರ: ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಹಾಸ್ಯ ಕಾರ್ಯಕ್ರಮದಲ್ಲಿ ಹೆಣ್ಣು ವೇಷಭೂಷಣ ಧರಿಸಿ ಖ್ಯಾತಿ ಪಡೆದಿರುವ ರಾಘವೇಂದ್ರ ಕೂಡ ಎಂಟ್ರಿ ಕೊಡಬಹುದು. ಮನೆಯಲ್ಲಿ ಎಂಟರ್‌ಟೈಮೆಂಟ್‌ಗೆಎ ಹಾಸ್ಯ ನಟ ಬೇಕೇ ಬೇಕು.
ಚಂದು: ಶಿವಣ್ಣ ಮತ್ತು ಪುನೀತ್ ಅಣ್ಣ ಅಭಿಮಾನಿ ಎನ್ನುತ್ತ ಹ್ಯಾಪಿ ಬರ್ತಡೇ ವಿಶ್ ಮಾಡುವ ಕಾಫಿ ನಾಡು ಚಂದು ಎಂಟ್ರಿ ಕೊಡಬಹುದು. ಹೀಗಾಗಿ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರ ಉಳಿದುಕೊಂಡಿರಬಹುದು.
ಮಿಮಿಕ್ರಿ ಗೋಪಿ: ನೂರಾರು ಸಿನಿಮಾಗಳು, ಸಾವಿರಾರೂ ಖಾಸಗಿ ವೇದಿಗಳು ಮತ್ತು ಹಾಸ್ಯ ಕಾರ್ಯಕ್ರಮಗಳಲ್ಲಿ ಗಣ್ಯರನ್ನು ಮಿಮಿಕ್ರಿ ಮಾಡಿ ಜನಪ್ರಿಯತೆ ಪಡೆದುಕೊಂಡಿರುವ ಗೋಪಿ.
ಸಮೀಕ್ಷಾ: ಸುಬ್ಬಲಕ್ಷ್ಮಿ ಸಂಸಾರ ಮತ್ತು ನಾಲ್ಕೈದು ಧಾರಾವಾಹಿಗಳಲ್ಲಿ ಸಮೀಕ್ಷಾ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ 99 ಸಿನಿಮಾದಲ್ಲೂ ನಟಿಸಿದ್ದಾರೆ.
ನವೀನ್ ಕೃಷ್ಣ- ಕನ್ನಡ ಚಿತ್ರರಂಗದಲ್ಲಿ ನಟ ಕಮ್ ನಿರ್ದೇಶಕನಾಗಿ ಅಭಿನಯಿಸಿರುವ ನವೀನ್ ಕೃಷ್ಣ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿದೆ. ಏಕೆಂದರೆ ಕಿರುತೆರೆ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.