ತುಂಬು ಗರ್ಭಿಣಿ ಚಿನ್ನುಗೆ ಮುದ್ದಿನ ಗೊಂಬೆ ಅಕ್ಕನಿಂದ ಶುಭ ಹಾರೈಕೆ…. ಅಕ್ಕ-ತಂಗಿಯ ಮುದ್ದಾದ ಫೋಟೊ ವೈರಲ್

First Published | Sep 10, 2024, 2:06 PM IST

ತುಂಬು ಗರ್ಭಿಣಿಯರಾದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಕವಿತಾ ಗೌಡ ಜೊತೆಯಾಗಿರುವ ಫೋಟೊ ಹಂಚಿಕೊಂಡಿದ್ದು, ಗೊಂಬೆ, ಮುದ್ದಿನ ತಂಗಿ ಚಿನ್ನುಗೆ ಶುಭ ಕೋರಿದ್ದಾರೆ. 

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಅಕ್ಕ ತಂಗಿ ಜೋಡಿ ಅಂದ್ರೆ ಚಿನ್ನು ಮತ್ತು ಗೊಂಬೆ. ಇಂದಿಗೂ ಇವರಿಬ್ಬರ ಜೋಡಿ ಜನರಿಗೆ ತುಂಬಾನೆ ಹತ್ತಿರ. ಕಿರುತೆರೆಯ ಈ ಫೇವರಿಟ್ ಜೋಡಿಗಳು ಒಟ್ಟಿಗೆ ಶುಭ ಸುದ್ದಿ ನೀಡಿದ್ದರು. 
 

ಈ ಅಕ್ಕ ತಂಗಿಯ ಜೋಡಿ ಜೊತೆ ಜೊತೆಯಾಗಿಯೇ ಗರ್ಭಿಣಿಯರಾಗಿದ್ದು, ಇದೀಗ ಗೊಂಬೆ ಖ್ಯಾತಿಯ ನೇಹಾ ಗೌಡ (Neha Gowda), ತಮ್ಮ ಪ್ರೀತಿಯ ಚಿನ್ನು ಅಂದರೆ ಕವಿತಾ ಗೌಡ ಅವರಿಗೆ ಪ್ರೆಗ್ನೆನ್ಸಿ ಜರ್ನಿಯ ಶುಭ ಕೋರಿದ್ದಾರೆ. 
 

Tap to resize

ಕವಿತಾ (Kavitha Gowda) ಜೊತೆಗಿನ ಫೋಟೊ ಹಂಚಿಕೊಂಡಿರುವ ನೇಹಾ ಗೌಡ, ನನ್ನ ಪ್ರೆಗ್ನೆನ್ಸಿ ಜರ್ನಿಯನ್ನು ನನ್ನ ತಂಗಿ ಜೊತೆ ಸೆಲೆಬ್ರೇಟ್ ಮಾಡಿರೋದಕ್ಕೆ ಖುಷಿಯಾಗಿದ್ದೇನೆ.   ಈಗ ಅವಳು ಕೂಡ ಶೀಘ್ರದಲ್ಲೇ ಮಗುವಿನ ತಾಯಿಯಾಗಲಿದ್ದಾರೆ! ಅವಳಿಗೆ ಸಂತೋಷದ, ಆರೋಗ್ಯಕರ ಮತ್ತು ಸುರಕ್ಷಿತ ಹೆರಿಗೆ ಆಗಲೆಂದು ಹಾರೈಸುತ್ತೇನೆ. ಈ ಹೊಸ ಅಧ್ಯಾಯವು ಅವಳ ಜೀವನದಲ್ಲಿ ಅಪಾರ ಸಂತೋಷ ಮತ್ತು ಖುಷಿಯನ್ನು ತರಲಿ! ಎಂದು ಹಾರೈಸಿದ್ದಾರೆ. 
 

ಇನ್ನು ನೇಹಾ ಮತ್ತು ಕವಿತಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಹೇಳಬೇಕು ಅಂದ್ರೆ ಸೀರಿಯಲ್ ನಲ್ಲಿ ಹೇಗೆ ಎಲ್ಲವೂ ಜೊತೆ ಜೊತೆಯಾಗಿದ್ದರೂ, ರಿಯಲ್ ಲೈಫಲ್ಲೂ ಇಬ್ಬರ ಜೀವನದಲ್ಲಿ ಎಲ್ಲವೂ ಜೊತೆಯಾಗಿಯೇ ನಡೆಯುತ್ತಿದೆ. ಸೀರಿಯಲ್ ನಲ್ಲಿ (serial) ಚಿನ್ನು ಗೊಂಬೆ ಇಬ್ಬರ ಗಂಡನ ಹೆಸರು ಚಂದು ಆಗಿತ್ತು, ರಿಯಲ್ ಲೈಫಲ್ಲೂ ಇಬ್ಬರ ಗಂಡಂದಿರ ಹೆಸರು ಕೂಡ ಚಂದು, ಅಂದ್ರೆ ಚಂದನ್. 

ನಟಿ ನೇಹಾ ಗೌಡ, ಫೆಬ್ರವರಿ 18, 2018ರಂದು ತಮ್ಮ ಬಹುಕಾಲದ ಗೆಳೆಯ ಚಂದನ್ ಗೌಡ ಅವರನ್ನು ಮದುವೆಯಾಗಿದ್ದರು. ಚಂದನ್ ಗೌಡ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. 

ಇನ್ನು ಕವಿತಾ ಗೌಡ ಅವರು ಲಕ್ಷ್ಮೀ ಬಾರಮ್ಮ ಧಾರವಾಹಿ ತಮ್ಮ ಸಹ ನಟ ಚಂದನ್ ಕುಮಾರ್ ಅವರನ್ನು ಪ್ರೀತಿ ಅವರ ಜೊತೆ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕವಿತಾ ಮತ್ತು ನೇಹಾ ಇಬ್ಬರೂ ಇದೀಗ ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ. 

ಇದೀಗ ಇಬ್ಬರನ್ನು ಜೊತೆಯಾಗಿ ನೋದಿ ಅಭಿಮಾನಿಗಳು ಖುಷಿಯಾಗಿದ್ದು, ಮಗುವಿನ ಬಗ್ಗೆ ಪ್ರೆಡಿಕ್ಟ್ ಮಾಡಿದ್ದಾರೆ. ಗೊಂಬೆಗೆ ಹೆಣ್ಣು ಮಗು ಚಿನ್ನು ಗಂಡು ಮಗು ಜನ್ಮ ನೀಡುತ್ತಾರೆ ಎಂದು ಕೆಲವರು ಹೇಳಿದ್ದಾರೆ. ನಿಮ್ಮಿಬ್ಬರಿಗೂ ಸುರಕ್ಷಿತ ಹಾಗೂ ಆರೋಗ್ಯವಂತ ಹೆರಿಗೆ ಆಗಲಿ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಸಹ ಅಭಿಮಾನಿಗಳು ಹಾರೈಸಿದ್ದಾರೆ. 

Latest Videos

click me!