ಬಿಗ್ ಬಾಸ್ 17: ಸುಶಾಂತ್ -ಅಂಕಿತಾರ ಪಾಸ್ಟ್ ಲೈಫ್ ಹೊರೆ ಹೊತ್ತಿದ್ದೇನೆ ವಿಕ್ಕಿ ಜೈನ್

First Published | Jan 15, 2024, 6:38 PM IST

ವಿವಾದತ್ಮಕ ಶೋ ಬಿಗ್‌ ಬಾಸ್‌ 17ನಲ್ಲಿ (Bigg Boss 17)  ಅಂಕಿತಾ ಲೋಖಂಡೆ (Ankita Lokhande) ಮತ್ತು ವಿಕ್ಕಿ ಜೈನ್‌ (Vicky Jain) ದಂಪತಿ ವಿವಾದಗಳು ಪ್ರತಿದಿನ  ಹೊಸ ತಿರುವು ಪಡೆಯುತ್ತಲೇ ಇದೆ. ಇತ್ತೀಚಿಗೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಅಂಕಿತಾ ಲೋಖಂಡೆ ಅವರ ಸಂಬಂಧದ ಭಾರವನ್ನು ಹೊತ್ತಿರುವ ಬಗ್ಗೆ  ವಿಕ್ಕಿ ಜೈನ್ ಮಾತನಾಡಿದ್ದಾರೆ.

ಇತ್ತೀಚಿನ 'ವೀಕೆಂಡ್ ಕಾ ವಾರ್' ಸಂಚಿಕೆಯಲ್ಲಿ, ಕರಣ್ ಜೋಹರ್ ತನ್ನ ತಾಯಿಯ ಮುಂದೆ ಪತ್ನಿ ಅಂಕಿತಾ ಲೋಖಂಡೆಗಾಗಿ ನಿಲುವು ತೆಗೆದುಕೊಳ್ಳದ ವಿಕ್ಕಿ ಜೈನ್‌ಗೆ ತರಾಟೆ ತೆಗೆದು ಕೊಂಡರು.

ಅದರ ನಂತರ ವಿಕ್ಕಿ ಜೈನ್‌ ತನ್ನ ಪತ್ನಿ ಅಕಿಂತಾರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.ಅದರಲ್ಲಿ ಅವರು ಯಾವಾಗಲೂ ಅವಳೊಂದಿಗೆ ಹೇಗೆ ಇದ್ದಾರೆ ಎಂಬುದರ ಕುರಿತು ಮಾತನಾಡಿದರು. 

Tap to resize

ಅವರು ಮೂರು ವರ್ಷ ಅಂಕಿತಾರ ಜೊತೆ ಮತ್ತು ಅವರ ಕುಟುಂಬದೊಂದಿಗೆ ಮಗನಂತೆ ತಾವು ಇರುವುದಾಗಿ ವಿಕ್ಕಿ ಜೈನ್‌ ಹೇಳಿಕೊಂಡಿದ್ದಾರೆ 

ಅಂಕಿತಾ ಒಂದು ವರ್ಷದಲ್ಲಿ ಬಿಲಾಸ್‌ಪುರದ ತಮ್ಮ ಮನೆಯಲ್ಲಿ ಹದಿನೈದು ದಿನಗಳು ಕೂಡ ಉಳಿದುಕೊಂಡಿಲ್ಲ ಎಂದು ವಿಕ್ಕಿ ಈ ಸಮಯದಲ್ಲಿಯೇ ಬಹಿರಂಗಪಡಿಸಿದರು. 

ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಅಂಕಿತಾ ಅವರ ಹಿಂದಿನ ಸಂಬಂಧದ ಬಗ್ಗೆಯೂ ತರಾಟೆ ತೆಗೆದುಕೊಂಡರು ಆದರೆ ಇನ್ನೂ ಅವಳಿಗೆ ಏನನ್ನೂ ಹೇಳಲಿಲ್ಲ ಎಂದು ವಿಕ್ಕಿ ಹಂಚಿಕೊಂಡಿದ್ದಾರೆ. 

ಅಂಕಿತಾ ಮದ್ವೆಗೂ ಮುಂಚೆಗೆ ಅವರು ಸುಶಾಂತ್ ಸಿಂಗ್ ಜೊತೆಗಿನ ಸಂಬಂಧ ಜಗಜ್ಜಾಹೀರವಾಗಿತ್ತು. ಅವರನ್ನು ಮದ್ವೆಯಾಗುವಾಗಲೇ ನಂಗೆ ಎಲ್ಲವೂ ಗೊತ್ತಿದ್ದರಿಂದ ಅದರಲ್ಲಿ ಮುಚ್ಚಿಡುವ ಸಂಗತಿ ಏನೂ ಇರಲಿಲ್ಲ. ಅಂಕಿತಾ ಪತಿಯಾಗಿ, ಅವರ ಮನೆ ಮಗನಾಗಲು ನಾನು ರೆಡಿ ಇದ್ದಾಗ ಅವರ ಹಿಂದಿನ ಜೀವನ ನನಗೆ ಗೌಣ ಎನಿಸಿತು. ಎಲ್ಲವನ್ನೂ ಮನದಲ್ಲಿಟ್ಟುಕೊಂಡೇ ಅವಳನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ, ನಿಮಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ನೀವು ನನ್ನನ್ನು ಮದುವೆಯಾಗುತ್ತಿರಲಿಲ್ಲ' ಎಂದು ವಿಕ್ಕಿ ಅಂಕಿತಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಅಲ್ಲದೆ, ಅಂಕಿತಾ ಅವರ ಕೆಲಸ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಅವರ ಕುಟುಂಬವು ಎಂದಿಗೂ ಪ್ರಶ್ನಿಸಲಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ನೀವು ಏನು ಮಾಡುತ್ತೀರಿ ಅಥವಾ ಧರಿಸುತ್ತೀರಿ ಅಥವಾ ನೀವು ಹೇಗೆ ಬದುಕುತ್ತೀರಿ ಎಂಬುದರಲ್ಲಿ ನನ್ನ ಕುಟುಂಬ ಎಂದಾದರೂ ಹಸ್ತಕ್ಷೇಪ ಮಾಡುತ್ತದೆಯೇ? ಎಂದು ವಿಕ್ಕಿ ಅಂಕಿತಾರಿಗೆ ಪ್ರಶ್ನೆ ಮಾಡಿದ್ದಾರೆ.

Latest Videos

click me!