ಸುಕೃತಾ ನಾಗ್ :
ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಸುಗ್ಗಿ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಬರೆದಿದ್ದಾರೆ.
ಸಾರಾ ಅಣ್ಣಯ್ಯ :
ಅಮೃತಧಾರೆ ಖ್ಯಾತಿಯ ಸಾರಾ ಅಣ್ಣಯ್ಯ ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ. ಈ ಸುಗ್ಗಿಯ ಹಬ್ಬ ನಿಮ್ಮ ಜೀವನದಲ್ಲಿ ಯಶಸ್ಸು, ಸಂತೋಷವನ್ನು ತರಲಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಐಶ್ವರ್ಯ ಬಸ್ಪುರೆ : ಸಂಕ್ರಾಂತಿ ಬಂತು ರಥೋ ರಥೋ . ವರ್ಷದ ಮೊದಲ ಹಬ್ಬ, ಸುಗ್ಗಿಯ ಹಬ್ಬ, ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
ಅಮೃತಾ ರಾಮಮೂರ್ತಿ
ಮಕರ ಸಂಕ್ರಾಂತಿ ಹಬ್ಬ ನಿಮ್ಮೆಲ್ಲಾ ದುಃಖ, ನೋವುಗಳನ್ನು ದೂರ ಮಾಡಿ ಸುಖ, ಸಂತೋಷ ನೆಮ್ಮದಿಯನ್ನಷ್ಟೇ ತರಲಿ. ನಿಮ್ಮ ಜೀವನ ಎಳ್ಳು ಬೆಲ್ಲದಂತಿರಲಿ. ಮಕರ ಸಂಕ್ರಾತಿ ಶುಭಾಶಯಗಳು.
ಆರತಿ ಪಡುಬಿದ್ರಿ
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಎಲ್ಲಾ ಕಹಿ ಮರೆತು ಸಿಹಿಯಾದ ಬಾಂಧವ್ಯವನ್ನು ವೃದ್ಧಿಸೋಣ, ಸೂರ್ಯ ಪಥ ಬದಲಿಸುವ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ ಶಾಂತಿ ನೆಮ್ಮದಿ ಹಾಗೂಸಮೃದ್ಧಿ ನೆಲೆಸಲಿ
ಶ್ವೇತಾ ಚೆಂಗಪ್ಪ
ಕಿರುತೆರೆ ನಟಿಯಾಗಿ, ನಿರೂಪಕಿಯಾಗಿ ಖ್ಯಾತಿ ಪಡೆದಿರುವ ಶ್ವೇತಾ ಚೆಂಗಪ್ಪ ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು . ಎಲ್ಲರಿಗು ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.
ಕಾವ್ಯ ಶೈವ
ಕೆಂಡಸಂಪಿಗೆ ಸೀರೆಯಲ್ ಖ್ಯಾತಿಯ ಕಾವ್ಯ ಶೈವ ರ್ಷದ ಮೊದಲ ಹಬ್ಬ ಮಕರ ಸಂಕ್ರಮಣದ ಶುಭಾಶಯಗಳು ಎಂದು ನಾಡಿನ ಸಮಸ್ತ ಜನತೆಗೆ ವಿಶ್ ಮಾಡಿದ್ದಾರೆ.
ಖುಷಿ ರವಿ
ದಿಯಾ ಬೆಡಗಿ ಖುಷಿ ರವಿ ಬೆಂಗಳುರು ಮಾರ್ಕೆಟ್ ನಲ್ಲಿ ಹಬ್ಬದ ಶಾಪಿಂಗ್ ಮಾಡುತ್ತಾ ಇರುವ ಫೋಟೊ ಹಂಚಿಕೊಂಡಿದ್ದು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
ದೀಪಿಕಾ ದಾಸ್
ವಿದೇಶ ಪ್ರಯಾಣ ಮುಗಿಸಿ, ಸದ್ಯ ಕರಾವಳಿಯಲ್ಲಿರುವ ದೀಪಿಕಾ ದಾಸ್ ಇಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ್ದು ಅಲ್ಲಿಂದಲೇ ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯಗಳು.
ತೇಜಸ್ವಿನಿ ಪ್ರಕಾಶ್
ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ, ಸಮೃದ್ಧಿ ಮತ್ತು ಸುಖ - ಶಾಂತಿಯನ್ನು ದಯಪಾಲಿಸಲಿ. ಮಕರ ಸಂಕ್ರಾಂತಿ 2024 ರ ಹಾರ್ದಿಕ ಶುಭಾಶಯಗಳು
ಪವಿತ್ರ ಬಿ ನಾಯ್ಕ್
ಪಾರು ಸೀರಿಯಲ್ ಖ್ಯಾತಿಯ ಜನನಿ ಆಲಿಯಾಸ್ ಪವಿತ್ರ ಬಿ ನಾಯ್ಕ್ ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
ರಂಜನಿ ರಾಘವನ್
ಸೂರ್ಯ ಬೆಳೆ ತಣಿಸಿ, ಬೆಳೆಗಳು ರಾರಾಜಿಸಿ, ಕೃಷಿಕರ ಸಂತೋಷದ ಕೂಗು ಎಲ್ಲೆಲ್ಲೂ ಪಸರಿಸಲಿ, ಸಂಕ್ರಾಂತಿ ನಮ್ಮ ಆತ್ಮಗಳನ್ನು ಬಂಗಾರದ ಫಸಲಿನಿಂದ ಭರಿಸಲಿ
ಶ್ರಮ, ಸೂರ್ಯ ಹಾಗೂ ಹೇಳದ ಕಥೆಗಳ ಸಮ್ಮಿಳನ ನಮ್ಮೀ ಸಂಕ್ರಾಂತಿ. ನನ್ ಈ ಲುಕ್ ಎಲ್ಲಾ ರೈತ ಮಕ್ಕಳಿಗೆ ಅರ್ಪಣೆ ಎಂದು ರೈತ ಮಹಿಳೆಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.