ರಾಖಿ ಸಾವಂತ್ ಅವರ ಪತಿ ರಿತೇಶ್ ಸಿಂಗ್ ಅವರನ್ನು ಬಿಗ್ ಬಾಸ್ 15 ರ ಮನೆಯಿಂದ ಹೊರಹಾಕಲಾಗಿದೆ. ಅವರು ಅತ್ಯಂತ ಕಡಿಮೆ ಮತಗಳನ್ನು ಪಡೆದಿದ್ದರು. ಪತಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ ರಾಖಿ ಸಾವಂತ್ ಆತಂಕಕ್ಕೆ ಒಳಗಾದರು. ತಾವು ಸಹ ಬಿಗ್ ಬಾಸ್ 15 ರ ಮನೆಯಿಂದ ಹೊರಬರುತ್ತಾರೆ ಎಂದು ಭಯಪಡುತ್ತಿದ್ದಾರೆ.
ರಾಖಿಯ ಪತಿಯನ್ನು ಶೋದಿಂದ ಹೊರಹಾಕಲಾಗಿದೆ ಎಂದು ಸಲ್ಮಾನ್ ಖಾನ್ ಘೋಷಿಸಿದ ನಂತರ ರಾಖಿ ಸಂಪೂರ್ಣ ಆಘಾತಕ್ಕೆ ಒಳಗಾಗಿದ್ದರು. ರಿತೇಶ್, ಆಕೆಯನ್ನು ಶಾಶ್ವತವಾಗಿ ಬಿಟ್ಟು ಹೋಗಿತ್ತಾರೆ ಎಂದು ರಾಖಿಯನ್ನು ಕಾಡಿತು. ರಾಖಿಯ ಭಯ ನೋಡಿದ ಸಲ್ಮಾನ್ ಸಹ ಮಾತನಾಡಿದರು.
ಹೆಚ್ಚು ಮತಗಳು ಬರದ ಕಾರಣ ರಿತೇಶ್ ಅವರನ್ನು ಶೋದಿಂದ ಹೊರಹಾಕಲಾಯಿತು ಎಂದು ಸಲ್ಮಾನ್ ರಾಖಿಗೆ ತಿಳಿಸಿದ್ದಾರೆ. ನಂತರ, ರಾಖಿ ರಿತೇಶ್ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ದೇವೋಲೀನಾ ಭಟ್ಟಾಚಾರ್ಜಿಗೆ
ದೂರು ನೀಡಿದ್ದರು.
ಬಿಗ್ ಬಾಸ್ 15 ಸಾಕಷ್ಟು ಸುದ್ದಿಗಳನ್ನು ಸೃಷ್ಟಿಸುತ್ತಿದೆ. ಈ ಹಿಂದೆ ರಾಖಿ ಸಾವಂತ್ ಅವರ ಪತಿ ರಿತೇಶ್ ಕುಮಾರ್ ಅವರ ಮಾಜಿ ಪತ್ನಿ ಸ್ನಿಗ್ಧಾ ಪ್ರಿಯಾ ಆರೋಪವನ್ನು ಮಾಡಿದ್ದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ರಾಖಿಯನ್ನು ಮದುವೆಯಾಗಿದ್ದಾರೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದೆ ಎಂದಿದ್ದರು.
ರಾಖಿಯಂತಹ ಸೆಲೆಬ್ರಿಟಿಯನ್ನು ಹೇಗೆ ಮದುವೆಯಾಗಲು ಸಾಧ್ಯವಾಯಿತು ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಆಕೆಯ ಪ್ರಕಾರ ಆತ ಅನಿವಾಸಿ ಭಾರತೀಯ ಮತ್ತು ಕಂಪನಿ ಮಾಲೀಕ ಎಂಬುದು ಸುಳ್ಳು ಎಂದಿದ್ದಾರೆ ಮಾಜಿ ಪತ್ನಿ.
ಅವನು ತನ್ನನ್ನು ಮದುವೆಯಾಗಿದ್ದಾನೆ ಮತ್ತು ರಾಖಿಯೊಂದಿಗಿನ ಅವನ ಮದುವೆಯು ಕಾನೂನಿಗೆ ವಿರುದ್ಧವಾಗಿದೆ. ರಿತೇಶ್ ಮೇಲೆ ಕೌಟುಂಬಿಕ ಹಿಂಸೆಯ ಆರೋಪವನ್ನು ಹೊರಿಸಿದರು ಮತ್ತು ಬಿಗ್ ಬಾಸ್ 15 ರಲ್ಲಿ ಜನರು ನೋಡುತ್ತಿರುವ ರಿತೇಶ್ ತನ್ನ ಪತಿ ಎಂಬ ಮಾತನ್ನೇ ಹೇಳಿದ್ದರು.