Ankita Lokhande Birthday: ಲವ್, ಬ್ರೇಕಪ್, ನೋವು ದಾಟಿ ಬಂದ ಅಂಕಿತಾ, ಈಗ ಲಕ್ಷಗಟ್ಟಲೆ ಸಂಭಾವನೆ

Published : Dec 19, 2021, 06:10 PM ISTUpdated : Dec 19, 2021, 06:18 PM IST

ಪವಿತ್ರ ರಿಷ್ತಾ (Pavitra Rista) ಟಿವಿ ಶೋ ಮೂಲಕ ಮನೆಮಾತಾಗಿರುವ ಅರ್ಚನಾ ಅಂದರೆ ಅಂಕಿತಾ ಲೋಖಂಡೆ (Ankita Lokhande) ಅವರಿಗೆ 37 ವರ್ಷ ತುಂಬಿದೆ. ಅವರು ಡಿಸೆಂಬರ್ 19, 1984 ರಂದು ಇಂದೋರ್‌ನಲ್ಲಿ ಜನಿಸಿದ ಅಂಕಿತಾ ಅವರ ನಿಜವಾದ ಹೆಸರು ತನುಜಾ . ಆದರೆ ಮನೆಯಲ್ಲಿ ಎಲ್ಲರೂ ಅವರನ್ನು ಅಂಕಿತಾ ಎಂದು ಪ್ರೀತಿಯಿಂದ ಕರೆಯುತ್ತಾರೆ.  ಸದ್ಯ, ಅಂಕಿತಾ ಉದ್ಯಮಿ ವಿವೇಕ್ ಜೈನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಅದ್ಧೂರಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆಯ ನಂತರ ಅಂಕಿತಾ ಅವರ ಮೊದಲ ಹುಟ್ಟುಹಬ್ಬ ಇದಾಗಿದೆ.  ಮಧ್ಯರಾತ್ರಿ ಪತ್ನಿಗಾಗಿ ಆಕೆಯ ಪತಿ ಗ್ರ್ಯಾಂಡ್‌ ಸೆಲೆಬ್ರೆಷನ್‌ ಮಾಡಿದ್ದರು. ಅಂಕಿತಾ ಅವರ ನಟನಾ ಜರ್ನಿ  ಸುಲಭವಾಗಿರಲಿಲ್ಲ ಇಲ್ಲಿಗೆ ತಲುಪಲು ಅವರು ಸಾಕಷ್ಟು ಕಷ್ಟಪಡಬೇಕಾಯಿತು.

PREV
110
Ankita Lokhande Birthday: ಲವ್, ಬ್ರೇಕಪ್, ನೋವು ದಾಟಿ ಬಂದ ಅಂಕಿತಾ, ಈಗ ಲಕ್ಷಗಟ್ಟಲೆ ಸಂಭಾವನೆ

ಅಂಕಿತಾ ಲೋಖಂಡೆ ಬಾಲ್ಯದಿಂದಲೂ ನಟಿಯಾಗಬೇಕೆಂದು ಕನಸು ಕಂಡಿದ್ದರು, ಆದರೆ ಕಾರಣಾಂತರಗಳಿಂದ ಅವರು ಈ ಕನಸಿನಿಂದ ದೂರವಾಗಬೇಕಾಯಿತು. ಅವರು ಏರ್ ಹೋಸ್ಟೆಸ್ ಆಗಲು ಫ್ರಾಂಕ್‌ಫಿನ್ ಅಕಾಡೆಮಿಗೆ ಸೇರಲು ಹೊರಟಿದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಆಯ್ಕೆ ಜೀ ಸಿನಿ ಸೂಪರ್‌ಸ್ಟಾರ್‌ ಹಂಟ್‌ನಲ್ಲಿ ಆಯಿತು.

210

ಆದರೆ, ಅಂಕಿತಾ ಲೋಖಂಡೆ ಅವರಿಗೂ ಈ ಪಯಣ ಸುಲಭವಾಗಿರಲಿಲ್ಲ. ನಟನೆಯನ್ನು ವೃತ್ತಿಯಾಗಿಸುವ ತಮ್ಮ ಮಗಳ ನಿರ್ಧಾರ ಆಕೆಯ ಪೋಷಕರಿಗೆ ಇಷ್ಟವಿರಲಿಲ್ಲ. ಆದರೆ ಆಕೆ ತನ್ನ ಕುಟುಂಬದ ಮನವೊಲಿಸಿದರು. ನಂತರ ಅವರ ಹೆತ್ತವರು ಸಹ ಅವರನ್ನು ಬೆಂಬಲಿಸಿದರು. ಅವರು 2005 ರಲ್ಲಿ ಮುಂಬೈಗೆ ಸ್ಥಳಾಂತರಗೊಂಡರು.

310

ಮುಂಬೈಗೆ ಬಂದ ನಂತರ ಅಂಕಿತಾ 2006 ರಲ್ಲಿ Zee ಸಿನಿ ಸೂಪರ್ಸ್ಟಾರ್ ಹಂಟ್‌ನಲ್ಲಿ ಭಾಗವಹಿಸಿದರು. ಆದರೆ ಅಂತಿಮ ಹಂತ ತಲುಪಿ ಸ್ಪರ್ಧೆಯಿಂದ ಹೊರಬಿದ್ದರು. ಆದರೆ ಈ ಕಾರ್ಯಕ್ರಮದಿಂದ ಅವರು ಬರಿಗೈಯಲ್ಲಿ ಹಿಂತಿರುಗಲಿಲ್ಲ, ಆಕೆಗೆ ಅತ್ಯುತ್ತಮ ನೃತ್ಯಗಾರ್ತಿ ಎಂಬ ಬಿರುದು ಸಿಕ್ಕಿತು. ಇದರ ನಂತರ ಅವರು ಮಾಡೆಲಿಂಗ್‌ನಲ್ಲಿ ತಮ್ಮ ಆದೃಷ್ಟ ಪ್ರಯತ್ನಿಸಿದರು.


 

410

ಅಂಕಿತಾ ಲೋಖಂಡೆ ನಾಲ್ಕು ವರ್ಷಗಳ ಕಾಲ ಕಷ್ಟಪಡಬೇಕಾಯಿತು. ನಂತರ ಅವರಿಗೆ ಬಾಲಿ ಉಮರ್ ಎಂಬ ಟಿವಿ ಶೋನಲ್ಲಿ ಅವಕಾಶ ಸಿಕ್ಕಿತು, ಆದರೆ ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಾಧ್ಯವಾಗಲಿಲ್ಲ. ಇದರ ನಂತರ ಅವರು ಏಕ್ತಾ ಕಪೂರ್ ಅವರ ಧಾರಾವಾಹಿ ಪವಿತ್ರ ರಿಶ್ತಾದಿಂದ ಅವರು ದೊಡ್ಡ ಬ್ರೇಕ್ ಪಡೆದರು. 

510

ಅಂಕಿತಾ ಲೋಖಂಡೆ ಕಿರುತೆರೆ ಲೋಕದಲ್ಲಿ ಹೆಸರು ಮಾಡಲು ಸಾಕಷ್ಟು ಶ್ರಮಿಸಿದ್ದಾರೆ. ಸುದ್ದಿ ಪ್ರಕಾರ, ಅಂಕಿತಾ ಟಿವಿ ಶೋಗಾಗಿ ದಿನಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಟಿವಿ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು.

610

ಟಿವಿಯ ನಂತರ ಅಂಕಿತಾ ಲೋಖಂಡೆ ಸಿನಿಮಾದಲ್ಲಿ ಕೂಡ ಕೆಲಸ ಮಾಡಿದರು. ಅವರು ಮಂಕರ್ಣಿಕಾ ಮತ್ತು ಭಾಗಿ 3 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ , ಮಣಿಕರ್ಣಿಕಾ ಚಿತ್ರಕ್ಕಾಗಿ ಅವರು 2-3 ಕೋಟಿ ರೂಪಾಯಿಗಳ ಸಂಭಾವನೆ  ಪಡೆದಿದ್ದರು. 

710

ವರದಿಗಳ ಪ್ರಕಾರ, ಅವರು 1.1 ಕೋಟಿ ರೂಪಾಯಿ ಮೌಲ್ಯದ ಜಾಗ್ವಾರ್ ಎಕ್ಸ್‌ಜೆ ಮತ್ತು 1.74 ಕೋಟಿ ರೂಪಾಯಿ ಮೌಲ್ಯದ ಪೋರ್ಷೆ 911 ಕಾರು ಹೊಂದಿದ್ದಾರೆ. ಅವರ ಆಸ್ತಿ 30 ಕೋಟಿಗೂ ಹೆಚ್ಚು.

810

ಪವಿತ್ರ ರಿಶ್ತಾ ಟಿವಿ ಶೋನಲ್ಲಿ ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ ಅಫೇರ್ ಹೊಂದಿದ್ದರು. ಆದರೆ ಸುಶಾಂತ್ ಬಾಲಿವುಡ್‌ಗೆ ಎಂಟ್ರಿಯಾದ ನಂತರ ಕ್ರಮೇಣ ಎಲ್ಲವೂ ಬದಲಾಯಿತು. ವರ್ಷಗಳ ಸಂಬಂಧದ ನಂತರ, ಇಬ್ಬರೂ 2016 ರಲ್ಲಿ ಬೇರೆಯಾದರು.

910

ಸಂದರ್ಶನವೊಂದರಲ್ಲಿ, ಅಂಕಿತಾ ಲೋಖಂಡೆ 'ನಾನು ಸುಶಾಂತ್ ಅವರನ್ನು ತೊರೆದಿದ್ದೇನೆ ಎಂದು ಜನರು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಸುಶಾಂತ್ ವೃತ್ತಿಯನ್ನು ಆರಿಸಿಕೊಂಡು ಮುಂದೆ ಹೋಗಿದ್ದರು. ನಾನು ಅದನ್ನು ಮಾಡುವುದನ್ನು ತಡೆಯಲಿಲ್ಲ, ಆದರೆ ನನಗೆ ಎಲ್ಲವೂ ಮುಗಿದಿದೆ' ಎಂದು ಹೇಳಿದ್ದರು.

1010

'ಎರಡೂವರೆ ವರ್ಷಗಳಿಂದ ನನಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ, ಆದರೆ ಈ ಸಮಯದಲ್ಲಿ ನನ್ನ ಪೋಷಕರು ಯಾವಾಗಲೂ ನನ್ನೊಂದಿಗೆ ನಿಂತರು. ಅವರು ನನಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಪೂರ್ಣ ಸಮಯವನ್ನೂ ನೀಡಿದ್ದಾರೆ. ಈ ಎರಡೂವರೆ ವರ್ಷ ಅನನು ಕಳೆದು ಹೋಗಿದ್ದು ಮಾತ್ರವಲ್ಲ ದುಡಿಯುವ ಸ್ಥಿತಿಯಲ್ಲಿ ಸಹ ಇರಲಿಲ್ಲ' ಎಂದು ತಿಳಿಸಿದರು

Read more Photos on
click me!

Recommended Stories