ನೀವು ಇಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ: ವಿನಯ್​ ಗೌಡ ಫೋಟೋಗೇ ಬೆಂಕಿ ಇಟ್ಟ Bigg Boss ಆಕಾಂಕ್ಷಿ

Published : Aug 11, 2026, 03:44 PM IST

ಬಿಗ್​ಬಾಸ್​ 13 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಸಾಮಾನ್ಯ ಸ್ಪರ್ಧಿಗಳ ಆಯ್ಕೆಗಾಗಿ 'ಅಗ್ನಿ ಪರೀಕ್ಷೆ' ನಡೆಸಲಾಗಿದೆ. ಶೃತಿ, ಸಂಗೀತಾ, ವಿನಯ್ ಗೌಡ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದು, ಆಕಾಂಕ್ಷಿಯೊಬ್ಬರು ವಿನಯ್​ ಗೌಡ ಫೋಟೋಗೆ ಬೆಂಕಿ ಹಚ್ಚಿದ್ದಾರೆ.

PREV
16
ಬಿಗ್​ಬಾಸ್​​ 13 ಕ್ಕೆ ಕೆಲವೇ ದಿನ ಬಾಕಿ

ಬಿಗ್​ಬಾಸ್​​ 13 (Bigg Boss 13) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಬಿಗ್​ಬಾಸ್​ ವಿಶೇಷತೆ ಎಂದರೆ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಿರುವುದು. ಇದಕ್ಕಾಗಿ ಲಕ್ಷಾಂತರ ಮಂದಿ ಬಿಗ್​ಬಾಸ್​ ಕನಸು ಕಂಡು ವಿಡಿಯೋ ಮಾಡಿ ಕಳುಹಿಸಿದ್ರು. ಅದರಲ್ಲಿ ಫೈನಲ್​ ಆಗಿ ಸೆಲೆಕ್ಟ್​ ಆಗಿದ್ದು 60 ಮಂದಿ ಮಾತ್ರ.

26
60 ಮಂದಿ ಫೈನಲಿಸ್ಟ್​

ಈ 60 ಜನರ ಪೈಕಿ ಯಾರು ಬಿಗ್​ಬಾಸ್​​ ಮನೆಗೆ ಫೈನಲ್​ ಆಗಿ ಹೋಗಲಿದ್ದಾರೆ ಎನ್ನುವ ಬಗ್ಗೆ ಅವರಿಗೆ ಅಗ್ನಿ ಪರೀಕ್ಷೆ ನಡೆದಿದೆ. ಇದರ ಪ್ರೊಮೋ ಅನ್ನು ವಾಹಿನಿ ಶೇರ್​ ಮಾಡಿಕೊಂಡಿದೆ.

36
ನಾಲ್ವರು ತೀರ್ಪುಗಾರರು

ಬಿಗ್​ಬಾಸ್​ ಅಗ್ನಿ ಪರೀಕ್ಷೆಗೆ ತೀರ್ಪುಗಾರರಾಗಿ ಬಿಗ್​ಬಾಸ್​ ವಿನ್ನರ್ಸ್​, ಫೈನಲಿಸ್ಟ್ಸ್​ ಹಾಗೂ ನಟರಾಗಿರುವ ಶೃತಿ, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಚಂದನ್​ ಶೆಟ್ಟಿ ಬಂದಿದ್ದಾರೆ. ಇವರು ಸ್ಪರ್ಧಿಗಳಿಗೆ ಥಹರೇವಾರಿ ಚಾಲೆಂಜಸ್​ ಕೊಟ್ಟಿದ್ದಾರೆ.

46
ತೀರ್ಪುಗಾರರ ಫೋಟೋಗೆ ಬೆಂಕಿ

ಈ ಸಂದರ್ಭದಲ್ಲಿ ಓರ್ವ ಸ್ಪರ್ಧಿ ಚಂದನ್​ ಶೆಟ್ಟಿ ಅವರ ಫೋಟೋಗೆ ಬೆಂಕಿ ಹಚ್ಚಿದ್ರೆ, ಮತ್ತೋರ್ವ ಸ್ಪರ್ಧಿ "ನೀವು ಇಲ್ಲಿ ಇರಲು ಲಾಯಕ್ಕೇ ಇಲ್ಲ" ಎಂದು ವಿನಯ್​ ಗೌಡ ಅವರ ಫೋಟೋಗೆ ಬೆಂಕಿ ಹಚ್ಚಿದ್ದಾರೆ. ಇದರ ಪ್ರೊಮೋಕೂಡ ವಾಹಿನಿ ಶೇರ್​ ಮಾಡಿಕೊಂಡಿದೆ.

56
ವಿವಿಧ ಟಾಸ್ಕ್​

ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ ನೀಡಲಾಗಿದೆ. ಕೆಲವರಿಗೆ ಸೆಗಣಿ ಮೆತ್ತಿಕೊಳ್ಳಲು ಹೇಳಿದ್ರೆ, ಅವರು ಮೆತ್ತಿಕೊಂಡಿದ್ದಾರೆ. ಮತ್ತೊಬ್ಬರಿಗೆ ಅವರಿಗೆ ಸಿಕ್ಕಿರುವ ಗಿನ್ನೆಸ್​ ಅವಾರ್ಡ್​ ಸರ್ಟಿಫಿಕೇಟ್​ ಹರಿಯಲು ಹೇಳಿದ್ರೆ ಅದನ್ನೂ ಮಾಡಿದ್ದಾರೆ. ಮತ್ತೆ ಕೆಲವರಿಗೆ ಇನ್ನೇನೋ ಮಾಡಲು ಹೇಳಿದ್ದಾರೆ. ಇನ್ನೋರ್ವ ಸ್ಪರ್ಧಿಗೆ ನೀವಾಗಿಯೇ ನೀವು ತಲೆ ಬೋಳಿಸಿಕೊಳ್ಳಿ ಎಂದರೆ, ಆ ಸ್ಪರ್ಧಿ ಅದನ್ನೂ ಮಾಡಿದ್ದಾರೆ. ಮತ್ತೊಬ್ಬ ಸ್ಪರ್ಧಿಗೆ ನಿಮಗೆ ಸಂಗೀತಾ ಕಂಡರೆ ಇಷ್ಟ ಎನ್ನಬೇಕು ಎಂದಾಗ, ಆ ಸ್ಪರ್ಧಿ, ನಾನು ಹೀಗೆಯೇ ಇರೋದು, ಹೀಗೆಯೇ ಹೋಗೋದು ಎಂದಿದ್ದಾರೆ. ಆಗ ಅವರಿಗೆ ವಿನಯ್​ ಗೌಡ ಹಾಗಿದ್ರೆ ಇಲ್ಲಿಗೆ ಬಂದದ್ದು ಯಾಕೆ, ಔಟ್​ ಎಂದು ಗದರಿಸಿದ್ದಾರೆ.

66
ಅತ್ತುಕೊಂಡು ಹೋದ ಸ್ಪರ್ಧಿಗಳು

ಕೆಲವರನ್ನು ಅಲ್ಲಿಯೇ ಸೆಲೆಕ್ಟ್​ ಮಾಡಿದ್ರೆ, ಮತ್ತೆ ಕೆಲವರು ಇಲ್ಲಿಯವರೆಗೂ ಬಂದು ಸೆಲೆಕ್ಟ್​ ಆಗಿಲ್ಲ ಎಂದು ಅತ್ತುಕೊಂಡು ಹೋಗಿದ್ದಾರೆ. ಹೀಗೆ ಈ ಪ್ರೊಮೋದಲ್ಲಿ ಸ್ಪರ್ಧಿಗಳಿಗೆ ಕೊಟ್ಟಿರುವ ವಿವಿಧ ಟಾಸ್ಕ್​ಗಳನ್ನು ನೋಡಬಹುದಾಗಿದೆ. ಇವೆಲ್ಲವನ್ನೂ ಬರುವ ಭಾನುವಾರ ರಾತ್ರಿ 9 ಗಂಟೆಗೆ ನೋಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories