Bigg Bossನಲ್ಲಿ ನಡುರಾತ್ರಿ ಲೇಡೀಸ್​ ಮಾರಾಮಾರಿ! ರೌದ್ರರೂಪ ತೋರಿದ್ರು, ನಾಗವಲ್ಲಿ ಅವತಾರ ಎತ್ತಿದ್ರು - ಆಗಿದ್ದೇನು?

Published : Oct 17, 2025, 11:39 AM IST

ಬಿಗ್​ಬಾಸ್​ ಸೀಸನ್​ 12ರ ಎಲಿಮಿನೇಷನ್ ಪ್ರಕ್ರಿಯೆಯು ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ, ಜಾಹ್ನವಿ ಮತ್ತು ಅಶ್ವಿನಿ ಗೌಡ ನಡುವೆ ಮಧ್ಯರಾತ್ರಿ ತೀವ್ರ ಜಗಳಕ್ಕೆ ಕಾರಣವಾಗಿದೆ. ಈ ಜಟಾಪಟಿಯು ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿದ್ದು, ಅಶ್ವಿನಿ ಗೌಡ ಅವರ ವರ್ತನೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

PREV
16
ಹೆಣ್ಣುಮಕ್ಕಳ ನಡುವೆ ಮಾರಾಮಾರಿ

ಬಿಗ್​ಬಾಸ್​ ಸೀಸನ್​ 12 (Bigg Boss Season 12)ರಲ್ಲಿ ಎಲಿಮಿನೇಷನ್​ ಶುರುವಾಗುತ್ತಿದ್ದಂತೆಯೇ, ಜಟಾಪಟಿಗಳು ತಾರಕಕ್ಕೇರುತ್ತಿವೆ. ಅವರ ಹೆಸರನ್ನು ಇವರು, ಇವರ ಹೆಸರನ್ನು ಅವರು ಹೇಳುವ ಮೂಲಕ ವೈಮನಸ್ಸಿಗೆ ಕಾರಣವಾಗುವುದು ಸಹಜವೇ ಆಗಿದ್ದರೂ, ಇದೀಗ ಮಿಡ್​ನೈಟ್​ನಲ್ಲಿ ಹೆಣ್ಣುಮಕ್ಕಳ ಮಾರಾಮಾರಿಗೆ ಈ ಸೀಸನ್​ ಕಾರಣವಾಗಿದೆ.

26
ತಾರಕಕ್ಕೇರಿದ ಜಗಳ

‘ಈ ವಾರ ಮಿಡ್​ ಸೀಸನ್ ಫಿನಾಲೆ ನಡೆಯುತ್ತಿದೆ. ಆದ್ದರಿಂದ 6 ಮಂದಿ ಸ್ಪರ್ಧಿಗಳು ಎಲಿಮನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ಕೆಸರೆರೆಚಾಟವೂ ನಡೆಯುತ್ತಿದೆ. ಇದೇ ವಿಷಯವಾಗಿ ಮಿಡ್​ನೈಟ್​ನಲ್ಲಿ ಆರಂಭದಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಮತ್ತು ಜಾಹ್ನವಿ (Bigg Boss Jhanvi) ನಡುವೆ ಶುರುವಾದ ಜಗಳ ತಾರರಕ್ಕೇರಿದೆ.

36
ಎಲಿಮಿನೇಷನ್​ ಗದ್ದಲ

ರಕ್ಷಿತಾ ಶೆಟ್ಟಿ ಅವರು ಮೊದಲಿಗೆ, ಅವರು ನನ್ನ ಹೆಸರು ಹೇಳಿದರು, ಅದಕ್ಕೇ ನಾನು ಅವರ ಹೆಸರು ಹೇಳಿದೆ ಎಂದು ಹೇಳುವ ಮೂಲಕ, ಇಬ್ಬರ ನಡುವೆಯ ಜಗಳದಲ್ಲಿ ಕೊನೆಗೆ ಅಶ್ವಿನಿ ಅವರೂ ಎಂಟ್ರಿ ಕೊಟ್ಟು ಎಲ್ಲರ ನಡುವೆ ಕಾದಾಟ ಹೆಚ್ಚಾಗಿದೆ.

46
ಜಾಹ್ನವಿ-ರಕ್ಷಿತಾ ಗಲಾಟೆ

ಜಾಹ್ನವಿ ನಾನೇನು ಚಿಕ್ಕವಳಾ, ನನಗೇನು ಮೆಚುರಿಟಿ ಇಲ್ವಾ ಎಂದು ಕೇಳಿದಾಗ, ರಕ್ಷಿತಾ ಶೆಟ್ಟಿ ನಾಗವಲ್ಲಿ ನೀವೇ, ಮಧ್ಯರಾತ್ರಿ ಗೆಜ್ಜೆ ಸೌಂಡ್​ ಅಶ್ವಿನಿ ಅವ್ರು ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಿ ಅಶ್ವಿನಿ ಗೌಡ (Ashwini Gowda) ಕಿಡಿಯಾಗಿದ್ದಾರೆ.

56
ಅಶ್ವಿನಿಯಿಂದ ವೈಯಕ್ತಿಕ ನಿಂದನೆ

ಜಾಸ್ತಿ ಮಾತನಾಡಬೇಡ, ಮುಚ್ಕೊಂಡು ಮಗಲು. ಹೋಗಿ ನಿನ್ನ ಡ್ರಾಮಾ ಎಲ್ಲಾ ಬಾತ್​ರೂಮ್​ನಲ್ಲಿ ಮಾಡು ಎಂದಿದ್ದಾರೆ. ಅದಕ್ಕೆ ರಕ್ಷಿತಾ ನಾನು ಎಷ್ಟು ಸಲ ಬೇಕಾದ್ರೂ ಬಾತ್​ರೂಮ್​ಗೆ ಹೋಗ್ತೇನೆ. ನಿಮಗೇನು ಎಂದು ಕೇಳಿದಾಗ, ಅಶ್ವಿನಿ ನೀನು ಎಲ್ಲಿಂದ ಬಂದವಳು ಎಂದು ಗೊತ್ತು, ನಿನ್ನನ್ನು ನೋಡಿದ್ರೆ ಗೊತ್ತಾಗತ್ತೆ ಎನ್ನುವ ಮೂಲಕ ತೀರಾ ವೈಯಕ್ತಿಕವಾಗಿ ನಿಂದಿಸಿದ್ದಾರೆ.

66
ಕಮೆಂಟಿಗರು ಹೇಳೋದೇನು?

ಒಟ್ಟಿನಲ್ಲಿ ಬಿಗ್​ಬಾಸ್​ ಈಗ ಒಂದು ಹಂತಕ್ಕೆ ಬಂದು ಮುಟ್ಟಿದೆ. ತೀರಾ ವೈಯಕ್ತಿಕ ನಿಂದನೆ ಮಾಡಿರುವುದಕ್ಕೆ ಅಶ್ವಿನಿ ಗೌಡ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಮೊದಲು ಅವರನ್ನು ಮನೆಯಿಂದ ಹೊರಕ್ಕೆ ಹಾಕಿ ಎನ್ನುತ್ತಿದ್ದಾರೆ. ಜಾನ್ವಿ ಮತ್ತು ಅಶ್ವಿನಿ ಗೌಡ ಮಾಡ್ತಿರೋದು ಸರಿಯಿಲ್ಲ ಎನ್ನುತ್ತಿದ್ದಾರೆ. 

Read more Photos on
click me!

Recommended Stories