ಬಿಗ್ ಬಾಸ್ ಸೀಸನ್ 12 ಜೋರಾಗಿಯೇ ಸದ್ದು ಮಾಡುತ್ತಿದೆ. ಅದರಲ್ಲೂ ಸ್ಪರ್ಧಿಗಳ ಜಗಳ, ಕಲಹ ಎಲ್ಲವೂ ಚರ್ಚೆಯಲ್ಲಿದೆ. ಇನ್ನು ವಾರ ಪೂರ್ತಿ ಇತರ ಸ್ಪರ್ಧಿಗಳಿಗೆ ಟಾಂಗ್ ನೀಡುತ್ತಾ, ವೀಕೆಂಡಲ್ಲಿ ಕಿಚ್ಚ ಸುದೀಪ್ ಎದುರು ಒಳ್ಳೆಯವಳಂತೆ ಪೋಸ್ ಕೊಡುವ ಅಶ್ವಿನಿ ಗೌಡ ವಿರುದ್ಧ ವೀಕ್ಷಕರು ತಿರುಗಿ ಬಿದ್ದಿದ್ದಾರೆ.
ಬಿಗ್ ಬಾಸ್ ಸೀಸನ್ 12ರಲ್ಲಿ ಈ ವಾರ ಮೊದಲ ಫಿನಾಲೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆ ರಣರಂಗವಾಗಿದೆ. ಅದರಲ್ಲೂ ಎಲ್ಲಾ ವಿಷಯದಲ್ಲೂ ಇತರ ಸ್ಪರ್ಧಿಗಳ ಆಟದಲ್ಲಿ ಕಾಲೆಳೆಯುವ ಅಶ್ವಿನಿ ಗೌಡ ವಿರುದ್ಧ ವೀಕ್ಷಕರು ಸಿಡಿದೆದ್ದಿದ್ದಾರೆ.
26
ವೀಕೆಂಡಲ್ಲಿ ಏನಾಗಿತ್ತು?
ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಬಗ್ಗೆ ಕಾಕ್ರೋಚ್ ಸುಧಿ ಮಾತನಾಡುತ್ತ ಈಯಮ್ಮ ಎಂದಿದ್ದರು. ಅದನ್ನು ಮಧ್ಯದಲ್ಲೇ ತಡೆದ ಅಶ್ವಿನಿ ಗೌಡ, ನನಗೆ ಹೆಸರಿದೆ, ಈಯಮ್ಮ ಎಂದೆಲ್ಲಾ ಕರೆಯೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದರು. ಕಿಚ್ಚ ಸುದೀಪ್ ಮುಂದೆ ಒಳ್ಳೆಯವಳಂತೆ ಪೋಸ್ ಕೊಟ್ಟ ಅಶ್ವಿನಿ ಗೌಡ, ಉಳಿದ ಸ್ಪರ್ಧಿಗಳನ್ನು ಅಡ್ಡ ಹೆಸರಲ್ಲಿ ಕರೆಯೋದು ಸರೀನಾ?
36
ರಕ್ಷಿತಾಳನ್ನು ಕಾರ್ಟೂನ್ ಎಂದಿದ್ದ ಅಶ್ವಿನಿ
ಈ ಹಿಂದೆ ಒಂಟಿಯಾಗಿದ್ದ ರಕ್ಷಿತಾ, ಜಂಟಿಗಳ ಜೊತೆ ಹೋದಾಗ, ಆ ಕಾರ್ಟೂನ್ ಅಲ್ಲಿ ಏನ್ ಮಾಡ್ತಿದೆ ಎಂದು ಹೇಳಿದ್ದರು. ಒಬ್ಬ ಸ್ಪರ್ಧಿಯಾಗಿ, ಮನೆಯ ಹಿರಿಯಳಾಗಿ, ಒಬ್ಬ ಕಿರಿಯ ಸ್ಪರ್ಧಿಗೆ ಕಾರ್ಟೂನ್ ಎಂದು ಕರೆದದ್ದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ. ಇದೇ ವಿಷಯವನ್ನು ಸುದೀಪ್ ವಾರದ ಪಂಚಾಯಿತಿಯಲ್ಲಿ ಕೇಳಿದಾಗ, ತನಗೆ ರಕ್ಷಿತಾ ಕಾರ್ಟೂನ್ ಎಂದು ಅನಿಸೋದೆ ಇಲ್ಲ ಎಂದಿದ್ದರು.
ಅಷ್ಟೇ ಅಲ್ಲ ಇತ್ತೀಚೆಗೆ ಕಾವ್ಯಾ ಶೈವಾಗೆ ಆಕೆ ಫ್ರೀ ಪ್ರಾಡಕ್ಟ್, ಗಿಲ್ಲಿಯಿಂದಾಗಿಯೇ ಆಕೆ ಗುರುತಿಸಿಕೊಂಡಿದ್ದಾಳೆ. ಗಿಲ್ಲಿ ಕಾಮಿಡಿ ಮಾಡಿಕೊಂಡ ಜನಪ್ರಿಯತೆ ಪಡೆದಿದ್ದಾರೆ, ಆದರೆ ಕಾವ್ಯಾ ಏನೂ ಮಾಡದೇ ಗಿಲ್ಲಿಯಿಂದಾಗಿ ಜನಪ್ರಿಯತೆ ಪಡೆಯುತ್ತಿದ್ದಾಳೆ. ಆಕೆ ಫ್ರೀ ಪ್ರಾಡಕ್ಟ್ ಇದ್ದಂತೆ ಎಂದು ಹೇಳಿದ್ದರು.
56
ಮಂಜು ಭಾಷಿಣಿಗೆ ಡುಮ್ಮಿ ಎಂದ ಅಶ್ವಿನಿ
ಇದಿಷ್ಟೇ ಅಲ್ಲ, ಇನ್ನೊಂದು ಸಲ ಮಾತಿನ ಬರದಲ್ಲಿ ಮಂಜು ಭಾಷಿಣಿಗೆ ಡುಮ್ಮಿ ಎಂದು ಕರೆದಿದ್ದರು. ಆದರೆ, ಇದನ್ನೆಲ್ಲಾ ಮರೆತು, ತಮ್ಮನ್ನು ಇನ್ಯಾರೋ ಈಯಮ್ಮ ಎಂದಿದ್ದಕ್ಕೆ ಮಾತ್ರ ಕೋಪ ಮಾಡಿಕೊಂಡು, ಸುದೀಪ್ ಎದುರು ನನ್ನನ್ನು ಹಾಗೆ ಕರೆಯಬಾರದು ಎಂದು ಹೇಳೀರ್ದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ. ಇದು ಯಾವ ನ್ಯಾಯ ಗುರು ಎಂದು ಕೇಳಿದ್ದಾರೆ.
66
ಸುದೀಪ್ ಯಾಕೆ ಕ್ಲಾಸ್ ತೆಗೆದುಕೊಂಡಿಲ್ಲ
ಎಲ್ಲರ ಕಾಲೆಳೆಯುತ್ತಾ, ತಾವೇ ಸರ್ವಾಧಿಕಾರಿ ಎನ್ನುವಂತೆ ಆಡುವ ಅಶ್ವಿನಿ ಗೌಡಗೆ ಸುದೀಪ್ ವೀಕೆಂಡಲ್ಲಿ ಯಾಕೆ ಕ್ಲಾಸ್ ತೆಗೆದುಕೊಂಡಿಲ್ಲ ಎಂದು ಜನ ಕೇಳಿದ್ದಾರೆ. ಈವಾರವಾದರೂ ಸುದೀಪ್ ಅಶ್ವಿನಿ ಮತ್ತು ಜಾಹ್ನವಿಗೆ ಕ್ಲಾಸ್ ತೆಗೆದುಕೊಳ್ಳಲೇ ಬೇಕು. ಇತರ ಸ್ಪರ್ಧಿಗಳನ್ನು ಅವಮಾನ ಮಾಡುವ ಅವರಿಗೆ ಕ್ಲಾಸ್ ತೆಗೆದುಕೊಳ್ಳದಿದ್ದರೆ ಅದು ಸರಿಯಲ್ಲ ಎಂದು ಹೇಳಿದ್ದಾರೆ.