ನಟಿಯರ ಎದೆ ಮೇಲೆ ಸುಮ್ನೆ ಕೈ ಇಡಲ್ಲ: ಒಂದು ಫೋಟೋಗೆ ಸಿಗುತ್ತಂತೆ ಓರಿಗೆ 20 ರಿಂದ 30 ಲಕ್ಷ

First Published | Nov 27, 2023, 11:54 AM IST

ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಲೇ ಫೇಮಸ್ ಆಗಿರುವ ಓರಿ ಈಗ ಹಿಂದಿ ಬಿಗ್‌ಬಾಸ್ 18ಕ್ಕೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ದು, ಜನರ ಹಲವು ಕುತೂಹಲಗಳಿಗೆ ಉತ್ತರ ನೀಡಿದ್ದಾರೆ,

ಓರಿಯನ್ನು ಸ್ವಾಗತಿಸುವ ವೇಳೆ ಹಿಂದಿ ಬಿಗ್‌ಬಾಸ್ 18 ನಡೆಸಿಕೊಡುವ ಬಾಲಿವುಡ್ ನಟ ಸಲ್ಮಾನ್ ಖಾನ್, ಓರಿ ಅಲಿಯಾಸ್‌ ಓರ್ಹನ್ ಅವತ್ರಮಣಿ ಬಳಿ ಅವರ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಹಲವು ದಿನಗಳಿಂದ ನೆಟ್ಟಿಗರನ್ನು ಕಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ. 

ಓರಿ ಫೋಟೋಗೆ ಫೋಸ್ ನೀಡುವ ಸ್ಟೈಲೇ ಒಂಥರಾ ವಿಚಿತ್ರ, ಬಹುತೇಕ ಫೋಟೋಗಳಲ್ಲಿ ಆತ ನಟಿಯರ ಎದೆ ಮೇಲೆ ಕೈ ಇಡುತ್ತಾನೆ ಅಥವಾ ತೊಡೆ ಮೇಲೆ ಕೈ ಇಡುತ್ತಾನೆ. ಈ ವಿಚಾರದ ಬಗ್ಗೆಯೇ ಈಗ ಸಲ್ಮಾನ್ ಖಾನ್ ಓರಿ ಬಳಿ, ಇದೇಕೆ ಈ ರೀತಿ ಇಡಬಾರದಲೆಲ್ಲಾ ಕೈ ಇಟ್ಟು ಹೆಣ್ಣು ಮಕ್ಕಳೊಂದಿಗೆ ಫೋಟೋ ತೆಗೆಸಿಕೊಳ್ಳುವಿರಿ ಇದರಿಂದ ನಿಮಗೇನು ಸಿಗುತ್ತಿದೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಓರಿಯ ಉತ್ತರ ಕೇಳಿ ಬರೀ ಸಲ್ಮಾನ್ ಖಾನ್ ಮಾತ್ರವಲ್ಲ ಹಿಂದಿ ಬಿಗ್ಬಾಸ್ ಶೋ ನೋಡುವ ಬಹುತೇಕರು ಶಾಕ್ ಆಗಿದ್ದಾರೆ.

Tap to resize

ಓರಿ ಹೇಳಿದ್ದೇನು?

ಓರಿಗೆ ಶ್ರೀಮಂತರ ಪಾರ್ಟಿಗಳಿಗೆ ಮದುವೆಗಳಿಗೆ ಹೋಗುವುದರಿಂದ ಹಣ ಸಿಗುತ್ತದೆಯಂತೆ, ಅನೇಕ ಶ್ರೀಮಂತ ಜನರು ಆತನನ್ನು ತಮ್ಮ ಮನೆಯ ಶುಭ ಸಮಾರಂಭಗಳಿಗೆ ಕರೆಸಿಕೊಳ್ಳುತ್ತಾರಂತೆ,

ನಮ್ಮ ಮನೆಗೆ ಬನ್ನಿ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ನಮ್ಮ ಮದುವೆಗೆ ಬನ್ನಿ ಎಂದು ಕರೆಯುವ ಶ್ರೀಮಂತ ಜನರು ತಮ್ಮ ಜೊತೆ ಫೋಟೋಗೆ ಫೋಸ್ ನೀಡುವಂತೆ ಓರಿ ಬಳಿ ಕೇಳಿಕೊಳ್ಳುತ್ತಾರಂತೆ. ಅಲ್ಲದೇ ಕೆಲವರು ತಮ್ಮ ಜೊತೆ ಹೀಗೆಯೇ ಕೈ ಇಟ್ಟು ಪೋಸ್ ನೀಡಬೇಕು ಎಂದು ಓರಿ ಬಳಿ ಮನವಿ ಮಾಡುತ್ತಾರಂತೆ. 

ಒಂದು ಫೋಟೋಗೆ ಕೊಡ್ತಾರಂತೆ 20 ರಿಂದ 30 ಲಕ್ಷ

ತಮ್ಮ ಜೊತೆ ಹೀಗೆ ಫೋಸ್ ನೀಡಿ, ತಮ್ಮ ಹೆಂಡ್ತಿ ಮೇಲೆ ಹೀಗೆ ಕೈ ಇಟ್ಟು ಫೋಸ್ ನೀಡಿ ತಮ್ಮ ಮಕ್ಕಳ ಮೇಲೆಯೂ ಹೀಗೆ ಕೈ ಇಟ್ಟು ಫೋಸ್ ನೀಡಿ ಎಂದು ಅವರೇ ನನ್ನನ್ನು ಕರೆಯುತ್ತಾರೆ. ಹೀಗೆ ಆಹ್ವಾನದ ಮೇರೆಗೆ  ಹೋಗುವ ನನಗೆ ಒಂದು ಫೋಟೋಗೆ ಅವರು 20 ರಿಂದ 30 ಲಕ್ಷ ನೀಡುತ್ತಾರೆ ಒಂದು ರಾತ್ರಿಗೆ ಇಷ್ಟು ಹಣ ನೀಡುತ್ತಾರೆ ಎಂದು ಹೇಳಿದ್ದಾನೆ ಓರಿ. 

ಓರಿ ಮಾತು ಕೇಳಿ ಸ್ವತಃ ಸಲ್ಮಾನ್ ಖಾನ್ ಕೂಡ ಶಾಕ್‌ಗೆ ಒಳಗಾಗಿದ್ದು, ಹೋ ದೇವರೆ ಕಾಲ ಎಲ್ಲಿಗೆ ಬಂತಪ್ಪಾ ಕಾಲ ನೀನು ಕಲಿತುಕೋ ಸಲ್ಮಾನ್‌, ನಿಮಗೆ ಬರೀ ಸೆಲ್ಫಿಯಿಂದ ಇಷ್ಟೊಂದು ಹಣ ಬರುತ್ತದೆ ಎಂದಾದರೆ ನಾನೇಕೆ ಇದೆಲ್ಲವನ್ನು ಮಾಡುತ್ತಿರುವೆ ಎಂದು ತಮಗೆ ತಾವೇ ಉದ್ಘರಿಸಿಕೊಂಡಿದ್ದಾರೆ. 

ಓರಿಯ ಒಂದು ಟಚ್‌ನಿಂದ ಕಡಿಮೆಯಾಗುತ್ತದೆಯಂತೆ ವಯಸ್ಸು!

ಅಷ್ಟೇ ಅಲ್ಲದೇ ಓರಿಯ ಈ ಮಾತು ಕೇಳಿದ ಸಲ್ಮಾನ್ ಖಾನ್ ಅಚ್ಚರಿಯ ಜೊತೆ ಕುತೂಹಲದಿಂದ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ಏಕಾಗಿ ನಿಮ್ಮನ್ನು ಅವರು ಪಾರ್ಟಿಗಳಿಗೆ ಕರೆಸಿಕೊಳ್ಳುತ್ತಾರೆ ಅವರಿಗೇನು ಲಾಭ ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಓರಿ, ನನ್ನ ಒಂದು ಟಚ್‌ನಿಂದ ಅವರು ತಮ್ಮ ಪ್ರಾಯಕ್ಕಿಂತ ಕಡಿಮೆ ವಯಸ್ಸಿನವರಂತೆ ಕಾಣುತ್ತಾರೆ. 28 ವಯಸ್ಸಿನವರು 22 ವಯಸ್ಸಿನವರಂತೆ ಕಾಣುತ್ತಾರೆ. 38 ವಯಸ್ಸಿನವರು 38 ವಯಸ್ಸಿವರಂತೆ ಕಾಣುತ್ತಾರೆ ಎಂದು ಉತ್ತರಿಸಿದ್ದಾರೆ ಓರಿ. 

ಓರಿಯ ಉತ್ತರ ಬರೀ ವೋಳೋ

ಓರಿಯ ಉತ್ತರ ಬರೀ ವೋಳೋ ಅಥವಾ ನಿಜವೋ ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಈತನ ಈ ಸ್ಟೇಟ್‌ಮೆಂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆ ಜೊತೆಗೆ ಓರಿಯನ್ನು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.

ಇದು ಕೂಡ ಜನರ ಭಾರೀ ಕುತೂಹಲದ ಪ್ರಶ್ನೆಯೇ ಆಗಿದ್ದು, ಓರಿ ಜೀವನಕ್ಕಾಗಿ ಏನು ಮಾಡುತ್ತಾರೆ ಎಂಬುದು. ಇದಕ್ಕೆ ಓರಿ ಮಾತ್ರ ಸ್ಪಷ್ಟವಾಗಿ ಉತ್ತರಿಸಿಲ್ಲ, ಇಡೀ ಪ್ರಪಂಚವೇ ಈ ವಿಚಾರ ತಿಳಿದುಕೊಳ್ಳಲು ನನ್ನ ಹಿಂದೆ ಏಕೆ ಬಿದ್ದಿದೆ ಎಂಬುದು ತಿಳಿಯುತ್ತಿಲ್ಲ, ಎಲ್ಲಿ ಹೋದರೂ ಎಲ್ಲರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ. 


ನಾನು ಹಲವು ರೀತಿಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೇನೆ, ಬೆಳಗ್ಗೆ ಸೂರ್ಯನೊಂದಿಗೆ ಏಳುವ ನಾನು ರಾತ್ರಿ ಚಂದ್ರನೊಂದಿಗೆ ಮಲಗುತ್ತೇನೆ. ಇದರ ನಡುವೆ ಹಲವು ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾನೆ. ಆದರೆ ಮೂಲಗಳ ಪ್ರಕಾರ ಈ ಓರಿ ರಿಲಯನ್ಸ್ ಇಂಡಸ್ಟ್ರಿಯಲ್ಲಿ ಮ್ಯಾನೇಜರ್ ಆಗಿದ್ದಾನೆ. 
 

Orry,

ಓರಿಯ ವಿಚಿತ್ರ ಫೋಟೋ ಫೋಸ್‌ನಿಂದಾಗಿ ಇತ್ತೀಚೆಗೆ ಅನೇಕರು ಓರಿಯನ್ನು ಹಿಜಿಡಾ, ಕಿನ್ನರ್ ಸಲಿಂಗಿ, ಟ್ರಾನ್ಸ್‌ಜಂಡರ್ ಎಂದೆಲ್ಲಾ ಹೀಯಾಳಿಸಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಓರಿ ತಾನೊಬ್ಬ ಪುರುಷ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ ಓರಿ ಬಿಗ್‌ಬಾಸ್ ಹೊರಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಹಾಗಿದ್ದರೆ ಒಂದೇ ದಿನಕ್ಕೆ ಓರಿ ಬಿಗ್ಬಾಸ್ ಮನೆಯಿಂದ ಬಂದನೇ? ಒಂದೇ ದಿನಕ್ಕೆ ಆತನನ್ನು ಮನೆಯಿಂದ ಹೊರ ಹಾಕಿದರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

Latest Videos

click me!