ಇವರೇ ನೋಡಿ ಕನ್ನಡ ಬಿಗ್‌ಬಾಸ್‌ಗೆ ವೈಲ್ಡ್‌ ಕಾರ್ಡ್ ಎಂಟ್ರಿ, ಒಬ್ಬಾಕೆ ಹಾಟ್‌ ಸುಂದರಿ ಮತ್ತೊಬ್ಬರು ಸ್ಟೈಲಿಶ್ ಹಂಕ್

First Published | Nov 27, 2023, 11:19 AM IST

ಕಿರುತೆರೆ ಇತಿಹಾಸದಲ್ಲೇ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಬರೋಬ್ಬರಿ 50 ದಿನಗಳನ್ನು ಪೂರೈಸಿದೆ. ಇದೀಗ ಬಿಗ್‌ಬಾಸ್‌ ಕನ್ನಡಕ್ಕೆ ಎರಡು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.

ಬಿಗ್‌ಬಾಸ್‌ ಮನೆಗೆ ಇಬ್ಬರು ಸ್ಪರ್ಧಿಗಳು ಎಂಟ್ರಿಯಾಗುತ್ತಿರುವ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ. ಒಬ್ಬರು ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದು, ಮತ್ತೊಬ್ಬರು ಮನೆಯೊಳಗಿನಿಂದ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಗೆ ಎರಡು ವೈಲ್ಡ್ ಕಾರ್ಡ್ ಎಂಟ್ರಿಯಾಗುತ್ತಿದ್ದಂತೆಯೇ ಮನೆಮಂದಿ ಶಾಕ್‌ ಆಗಿದ್ದಾರೆ. ಮನೆ ಚಿಕ್ಕದಾಗುತ್ತಿಲ್ಲ ಮನೆ ದೊಡ್ಡದಾಗುತ್ತಿದೆ, ಬಿಸಿ ಕಾವು ಏರುತ್ತಿದೆ ಎಂದು ವಿನಯ್ ಹೇಳುತ್ತಿರುವುದು ಕಂಡುಬಂದಿದೆ.
 

Tap to resize

ಇನ್ನು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿದೆ.

ಸುರತ್ಕಲ್ ಮೂಲದ ಅವಿನಾಶ್ ಅವರು  ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ದಂಪತಿಯ ಪುತ್ರ. ಅಧ್ಯಯನದಲ್ಲಿ ಕಡಿಮೆ ಆಸಕ್ತಿ ಹೊಂದಿದ್ದ ಅವರು ಮನರಂಜನಾ ಚಟುವಟಿಕೆಗಳತ್ತ ಹೆಚ್ಚು ಒಲವು ಹೊಂದಿದ್ದರು. 

ಅವಿನಾಶ್ 2006ರಲ್ಲಿ ಕೋಕ್‌ ಮತ್ತು 2009ರಲ್ಲಿ  MRF ಟೈಯರ್‌ ಜಾಹೀರಾತಿಗೆ ಎಂಟ್ರಿ ಕೊಟ್ಟು ಗ್ಲಾಮರ್ ಜಗತ್ತನ್ನು ಪ್ರವೇಶಿಸಿದರು.

ಅವಿನಾಶ್  2007 ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿಯನ್ನು ಗೆದ್ದಿರುವುದು ಫ್ಯಾಷನ್ ಜಗತ್ತಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ಈ ಸ್ಟೈಲಿಶ್ ಹಂಕ್ 2012 ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯನ್ನು ಕೂಡ ಗೆದ್ದರು. 
 

ಚೆನ್ನೈನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಪ್ರಶಸ್ತಿಯನ್ನು ಕೂಡ ಗೆದ್ದಿದ್ದು, ಅವರ ಪ್ರತಿಭೆಯನ್ನು ನೋಡಿದ ನಿರ್ಮಾಪಕ ಸುದೇಶ್ ಶೆಟ್ಟಿ ಸಾಯಿಕೃಷ್ಣ ನಿರ್ದೇಶನದ ಅವರ ಕನ್ನಡ ಚಲನಚಿತ್ರ 'ಚಲ್ಲ ಪಿಲ್ಲಿ'ಯಲ್ಲಿ ನಟಿಸಲು ಅವಕಾಶ ಕೊಟ್ಟರು. ಬದ್ಮಾಶ್ ಚಿತ್ರದಲ್ಲೂ ನಟಿಸಿದ್ದಾರೆ.
 

ಪವಿ ಪೂವಪ್ಪ ಕೊಡಗು ಮೂಲದ  ರೂಪದರ್ಶಿ.   ಉನ್ನತ ಬ್ರಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿದ್ದಾರೆ.   ಅವರು ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ "ಸೊಪ್ಪನ ಸುಂದರಿ" ಯ ಸ್ಪರ್ಧಿಗಳಲ್ಲಿ ಒಬ್ಬರು.  
 

ಇವರ ಇನ್ನೊಂದು ಹೆಸರು ಪವಿತ್ರ ಪೂವಪ್ಪ. ತನ್ನ ಹಾಟ್‌ ಮಾಡೆಲಿಂಗ್ ಫೋಟೋವನ್ನು ಶೇರ್‌ ಮಾಡುವ ಈಕೆಗೆ ಇನ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಇನ್ನು ಬಿಬಿಕೆಯಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಬಳಿಕ ಏನೆಲ್ಲ ಬದಲಾವಣೆ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಸದ್ಯ ಮನೆಯಲ್ಲಿ ಮೈಕಲ್‌ ಈ ವಾರ ಕ್ಯಾಪ್ಟನ್‌ ಆಗಿದ್ದಾರೆ. ನೀತು ಎಲಿಮಿನೇಟ್‌ ಆಗಿ ಹೋದಾಗ ತನ್ನ ಕ್ಯಾಪ್ಟನ್ ಜವಾಬ್ದಾರಿಯನ್ನು ಮೈಕಲ್‌ ಅವರಿಗೆ ಹಸ್ತಾಂತರಿಸಿ ಹೋಗಿದ್ದರು.
 

Latest Videos

click me!