ತಾನೇ SUPREME ಅಂತಾ ಅಂದ್ಕೊಡಿದ್ದಾರಾ ಸಂಗೀತಾ? ಯಾಕೆ ಸಂಗೀತ ಬಗ್ಗೆ ಟ್ರೋಲ್ ಹೆಚ್ಚಾಗ್ತಿದೆ?

ಬಿಗ್ ಬಾಸ್ ಸೀಸನ್ 10 ರಲ್ಲಿ ಸದ್ಯಕ್ಕಂತೂ ಹೆಚ್ಚು ಸುದ್ದಿಯಲ್ಲಿರುವ ಸ್ಪರ್ಧಿ ಸಂಗೀತ ಶೃಂಗೇರಿ. ಸೋಶಿಯಲ್ ಮೀಡಿಯಾದಲ್ಲಿ ಸಂಗೀತ ಬಗ್ಗೆ ಟ್ರೋಲ್ ಹೆಚ್ಚಾಗೋದಿಕ್ಕೆ ಕಾರಣ ಏನು? 

ಬಿಗ್ ಬಾಸ್ ಸೀಸನ್ 10 (BIgg Boss Season 10) ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅದರಲ್ಲೂ ಸಂಗೀತಾ ಬಗ್ಗೆಯಂತೂ ಬಿಗ್ ಬಾಸ್ ಮನೆಯೊಳಗೆ ಮತ್ತು ಮನೆಯ ಹೊರಗೆ ಎರಡೂ ಕಡೆಗಳಲ್ಲೂ ಹೆಚ್ಚು ಸದ್ದು ಕೇಳಿ ಬರುತ್ತಿದೆ. 

ಸಂಗೀತ ಬಗ್ಗೆ ಇಷ್ಟೊಂದು ನೆಗೆಟಿವಿಟಿ (negative trolls) ಹರಡೋದಕ್ಕೆ ಅವರು ತನ್ನನ್ನು ತಾನೇ ಸುಪ್ರೀ ಎಂದು ಅಂದುಕೊಂಡಿರೋದು ಕಾರಣಾನ? ಟ್ರೋಲ್ ಪೇಜ್ ಗಳಂತೂ ಇದನ್ನೆ ಹೌದು ಎನ್ನುತ್ತಿವೆ. 


ಕಳೆದವಾರ ಕಿಚ್ಚ ಸುದೀಪ್ ಆಟದಲ್ಲಿ ಫ್ರೆಂಡ್ ಶಿಪ್ ಇಲ್ಲ ಎಂದಾಗ, ನಟಿ ಅಲ್ಲೂ ಸಹ ತಾನು ಸರಿ ಎನ್ನುವಂತೆ ವಾದ ಮಾಡಿದ್ದರು. ಅವರು ಫ್ರೆಂಡ್ ಆಗಿ, ಇನ್ನೊಬ್ಬ ಫ್ರೆಂಡ್ ತನ್ನನ್ನು ಸೇವ್ ಮಾಡದೇ ಇದ್ದಾಗ ಬೇಸರವಾಗಿ ಈ ರೀತಿ ಹೇಳಿದ್ದರು. 

ಆದರೆ ಹೆಚ್ಚಾಗಿ ಸಂಗೀತ ಶೃಂಗೇರಿ ತನ್ನನ್ನು ತಾನು ಸಮರ್ಥಿಸಿಕೊಂಡು ಬರೋದರಿಂದ ಪ್ರೇಕ್ಷಕರಿಗಂತೂ ಇವರ್ಯಾಕೆ ತಾನು ಹೇಳಿದ್ದೆ ಸರಿ ಎನ್ನುವಂತೆ ಮಾಡ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ನಿಜವಾಗಿ ನೋಡಿದ್ರೆ ಸಂಗೀತ (Sangeetha Sringeri)  ಸ್ಟ್ರೈಟ್ ಫಾರ್ವರ್ಡ್ ಹುಡುಗಿ, ಏನೇ ಇದ್ರು ಎದುರಲ್ಲಿ ಹೇಳಿ ಬಿಡ್ತಾರೆ. ಹಿಂದೆಯಿಂದ ಮಾತನಾಡೋದೆ ಇಲ್ಲ. 

ಕಳೆದ ವಾರದ ಟಾಸ್ಕ್ ನಲ್ಲಿ ವಿನಯ್ ಗುಂಪಿನ ಜೊತೆ ಸೇರಿಕೊಂಡಿರುವ ಸಂಗೀತ, ಕಾರ್ತಿಕ್ ಮತ್ತು ಸಂತೋಷ್ ತುಕಾಲಿಗೆ ಹೆಡ್ ಶೇವ್ ಮಾಡುವಂತೆ ಹೇಳಿದ್ದ ಪ್ರೋಮೊ ಬಿಡುಗಡೆಯಾಗುತ್ತಿದ್ದಂತೆ, ಜನರಿಗೆ ಸಂಗೀತ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದ್ದು, ಇಂತ ಫ್ರೆಂಡ್ ಯಾರಿಗೂ ಬೇಡ ಅಂದಿದ್ದರು. 

ನಿನ್ನೆ ಎಪಿಸೋಡ್ ಗಳಲ್ಲೂ ಅಷ್ಟೇ ಪ್ರೊಮೋದಲ್ಲಿ ಸುದೀಪ್ ಸರ್ ಸಂಗೀತಾಗೆ ಫ್ರೆಂಡ್ ಶಿಪ್ ಬಗ್ಗೆ ಕ್ಲಾಸ್ ತೆಗೋತಿದ್ದಾರೆ ಅನ್ನೋತರ ತೋರ್ಸಿದ್ರೂ ಸಹ, ಸಂಗೀತ ಮಾತ್ರ ತಮ್ಮ ಉತ್ತರಕ್ಕೆ ಬದ್ಧರಾಗಿ ನೇರವಾಗಿ ಉತ್ತರ ಕೊಟ್ಟರು. 

ಸಂಗೀತಳ ನೇರ ನಡೆಗೆ ಮಾತ್ರ ಜನ ಏನೇನೋ ಕಾಮೆಂಟ್ ಮಾಡ್ತಿದ್ದಾರೆ. ಎನ್ ಗುರು ಅವಳು ತಪ್ಪು ಒಪ್ಪೋದೆ ಇಲ್ಲಾ ಅವಳದೇ ಅದ ಕಥೆ ರೆಡಿ ಮಾಡಿರತಾಳೆ ಕಾಮ್ ಆಗಿ ಅಡತಿರೋ ವಿನಯ ಸಂಗೀತಾಗೆ ಕೆಡ್ಡ ತೋಡ್ತಿದ್ದಾನೆ ಎಂದಿದ್ದಾರೆ. 
 

ಮತ್ತೊಬ್ರು ಇವಳು ಅತ್ರ ಉತ್ತರನೇ ಇಲ್ಲಾ . ಸುಮ್ನೆ ಇವಳು ಒಳ್ಳೆಳು ಅಂತ ಹೇಳ್ಕೊಳ್ಳೋಕೆ ವಾದ ಮಾಡ್ತಾಳೆ  ಎಂದು ಹೇಳಿದ್ದಾರೆ, ಮತ್ತೊಬ್ರು ಇವರಿಗೆ ಕೊಬ್ಬು ಜಾಸ್ತಿ ಏನೇ ಮಾಡಿದ್ರು, ತಾನು ಮಾಡಿದ್ದೇ ಸರಿ ಎಂದು ಹೇಳುತ್ತಾಳೆ ಎಂದಿದ್ದಾರೆ. 

Latest Videos

click me!