ಶ್ರೀರಸ್ತು ಶುಭಮಸ್ತು ಸೀರಿಯಲ್‌ನಿಂದ ದೀಪಕ್ ಗೌಡ ಔಟ್, ದರ್ಶಿತ್ ಗೌಡ ಇನ್

First Published | May 25, 2023, 5:49 PM IST

ಟಿಆರ್ ಪಿ ರೇಟ್ ನಲ್ಲಿ ಸದಾ ಮುಂದಿರುವ ಮತ್ತು ಅತ್ಯುತ್ತಮ ನಟರನ್ನು ಒಳಗೊಂಡಿರುವ ಸೀರಿಯಲ್ ಶ್ರೀರಸ್ತು ಶುಭಮಸ್ತು. ಇದೀಗ ಈ ಸೀರಿಯಲ್ ನಿಂದ ಸಮರ್ಥ್ ಪಾತ್ರಧಾರಿ ದೀಪಕ್ ಗೌಡ ಔಟ್ ಆಗಿದ್ದು, ದರ್ಶಿತ್ ಗೌಡ ಇನ್ ಆಗಿದ್ದಾರೆ. 

ಝೀ ಕನ್ನಡದಲ್ಲಿ(Zee Kannada) ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಸಮರ್ಥ್ ಪಾತ್ರ ಮಾಡುತ್ತಿದ್ದ ದೀಪಕ್ ಗೌಡ ಇದೀಗ ಸೀರಿಯಲ್ ತೊರೆದಿದ್ದು, ಅವರ ಜಾಗಕ್ಕೆ ಹೊಸ ನಟನ ಎಂಟ್ರಿಯಾಗಿದೆ. 

ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿಯವರು ಮತ್ತು ಅಜಿತ್ ಹಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ  ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರವಾಹಿ ಅತ್ಯುತ್ತಮವಾಗಿ ಮೂಡಿ ಬರುತ್ತಿದ್ದು, ಪ್ರತಿಯೊಂದು ಪಾತ್ರವೂ ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. 

Tap to resize

ಈ ಸೀರಿಯಲ್ ನಲ್ಲಿ ಸುಧಾರಾಣಿಯವರ ಮಗನ ಪಾತ್ರದಲ್ಲಿ ಈ ಮೊದಲು ದೀಪಕ್ ಗೌಡ ನಟಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಬ್ಯುಸಿನೆಸ್ ಟ್ರಿಪ್ ಹೆಸರಲ್ಲಿ ದೀಪಕ್ ಕಾಣಿಸಿಕೊಳ್ಳಲೇ ಇಲ್ಲ. 

ಸದ್ಯ ದೀಪಕ್ ಗೌಡ ಅವರು ಸೀರಿಯಲ್ ನಿಂದ ಔಟ್ ಆಗಿದ್ದು, ಅವರ ಜಾಗಕ್ಕೆ ಅಂದರೆ ಸಮರ್ಥ್ ಪಾತ್ರಕ್ಕೆ ದರ್ಶಿತ್ ಗೌಡ (Darshith Gowda) ಎಂಟ್ರಿ ನೀಡಿದ್ದಾರೆ. ದೀಪಕ್ ಗೌಡ ಯಾವ ಕಾರಣಕ್ಕೆ ಸೀರಿಯಲ್ ನಿಂದ ಹೊರನಡೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ದರ್ಶಿತ್ ಗೌಡ, ಹೊಸ ಪರಿಚಯವೇನಲ್ಲ. ಇವರು ಈಗಾಗಲೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಸೀರಿಯಲ್ ನಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಇವರು ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು. 

ದರ್ಶಿತ್ ಅವರು ಕಣ್ಸೆಳೆವ ಮಾಯಾವಿ ಎಂಬ ಆಲ್ಬಂ ಸಾಂಗ್ ನಲ್ಲೂ (Album Song) ನಟಿಸಿದ್ದಾರೆ. ಇವರು ಉತ್ತಮ ನಟರಾಗಿದ್ದು, ಶ್ರೀರಸ್ತು ಶುಭಮಸ್ತು ಪ್ರೋಮೋಗೂ ಸಹ ನೆಟ್ಟಿಗರು ಅತ್ಯುತ್ತಮ ನಟನನ್ನೇ ಆಯ್ಕೆ ಮಾಡಿದ್ದೀರಿ. ಈವಾಗ ಜೋಡಿ ಮತ್ತಷ್ಟು ಚೆನ್ನಾಗಿ ಕಾಣ್ಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. 

ಇನ್ನು ಹಳೆ ಸಮರ್ಥ್ ನನ್ನು ಬದಲಾಯಿಸಿರೋದಕ್ಕೆ ನೆಟ್ಟಿಗರು ಕೋಪವನ್ನು ಸಹ ವ್ಯಕ್ತಪಡಿಸಿದ್ದು, ನಾವು ದೀಪಕ್ ಗೋಸ್ಕರಾನೆ ಸೀರಿಯಲ್ ನೋಡ್ತಿದ್ವಿ, ಮತ್ತೆ ಅವರನ್ನೇ ಕರೆಯಿಸಿ ಎಂದು ಒಬ್ರು ಹೇಳಿದ್ರೆ, ಇನ್ನೂ ಕೆಲವರು ದೀಪಕ್ ಗೌಡ ಉತ್ತಮ ನಟ, ಆದ್ರೆ ಈ ಸೀರಿಯಲ್ ನಲ್ಲಿ ಅವರಿಗೆ ಸ್ಕ್ರೀನ್ ಸ್ಪೇಸ್ ಕಡಿಮೇನೆ, ಒಳ್ಳೆದೆ ಆಯ್ತು ಹೊಸ ನಟನ ಆಯ್ಕೆ ಎಂದು ಬರೆದುಕೊಂಡಿದ್ದಾರೆ. 

Latest Videos

click me!