ಯುರೋಪ್ ಸೊಲೋ ಟ್ರಾವೆಲ್ ಮಾಡಿದ ರಾಯಲ್ ಬೆಡಗಿ ಭೂಮಿ ಶೆಟ್ಟಿ

Published : Jul 20, 2024, 04:31 PM ISTUpdated : Jul 20, 2024, 06:08 PM IST

ಕನ್ನಡ ಕಿರುತೆರೆಯ ಕಿನ್ನರಿ, ಬಿಗ್ ಬಾಸ್ ಬೆಡಗಿ ಭೂಮಿ ಶೆಟ್ಟಿ ಏಕಾಂಗಿಯಾಗಿ ಯುರೋಪ್ ಪ್ರವಾಸ ಮಾಡುತ್ತಿದ್ದು, ಅಲ್ಲಿನ ಬೀದಿ ಬೀಡಿಯಲ್ಲಿ ಬಿಂದಾಸ್ ಆಗಿ ಸುತ್ತುತ್ತಾ ಎಂಜಾಯ್ ಮಾಡ್ತಿದ್ದಾರೆ.   

PREV
17
ಯುರೋಪ್ ಸೊಲೋ ಟ್ರಾವೆಲ್ ಮಾಡಿದ ರಾಯಲ್ ಬೆಡಗಿ ಭೂಮಿ ಶೆಟ್ಟಿ

ಕಿನ್ನರಿ ಧಾರಾವಾಹಿ ಮೂಲಕ ಮನೆಮಾತಾಗಿ, ಬಿಗ್ ಬಾಸ್ ಸೀಸನ್ 7ರ (Bigg Boss Season 7) ಮೂಲಕ ಜನಮನ್ನಣೆ ಪಡೆದು, ಸದ್ಯ ಸಿನಿಮಾಗಳಲ್ಲಿ ಮಿಂಚುತ್ತಿರುವ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ ಸದಾ ಒಂದಲ್ಲ ಒಂದು ವಿಷ್ಯದಿಂದ ಸುದ್ದಿಯಲ್ಲಿರ್ತಾರೆ. 
 

27

ತಮ್ಮ ಟ್ರಾವೆಲ್, ಫೋಟೋ ಶೂಟ್, ಬೈಕ್ ರೈಡ್ ನಿಂದಲೇ ಹೆಚ್ಚು ಜನಪ್ರಿಯತೆ ಪಡೆದ ಬೆಡಗಿ ಭೂಮಿ (Bhoomi Shetty). ಇತ್ತಿಚಿನ ದಿನಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

37

ಭೂಮಿ ಶೆಟ್ಟಿ ಸದ್ಯ ತಮ್ಮ ಯುರೋಪ್ ಪ್ರವಾಸದಲ್ಲಿ (Europe trip) ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಯುರೋಪ್ ನಲ್ಲಿ ಎಂಜಾಯ್ ಮಾಡ್ತಿದ್ದ ನಟಿ, ಪ್ಯಾರೀಸ್, ಫ್ರಾನ್ಸ್, ಬ್ರುಸೆಲ್ಸ್ ಮೊದಲಾದ ಸುಂದರ ತಾಣಗಳಲ್ಲೆಲ್ಲಾ ಸುತ್ತಾಡಿ ಅಲ್ಲಿನ ಪ್ರಕೃತಿ ಸೌಂದರ್ಯ, ಇತಿಹಾಸವನ್ನ ಎಂಜಾಯ್ ಮಾಡ್ತಿದ್ದಾರೆ. 
 

47

ಯುರೋಪಿನ ಹಲವು ಪ್ರೇಕ್ಷಣೀಯ ಸ್ಥಳಗಳು, ಮ್ಯೂಸಿಯಂ, ಐಫೆಲ್ ಟವರ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

57

ಫ್ರಾನ್ಸ್ ನಲ್ಲಿ ಒಲಿಂಪಿಕ್ ಕಳೆ ಕಟ್ಟಿದ್ದು, ಇಡೀ ದೇಶ ಪೂರ್ತಿಯಾಗಿ ಒಲಿಂಪಿಕ್ ಕ್ರೀಡಾ ಉತ್ಸವಕ್ಕೆ ಸಜ್ಜಾಗಿ ನಿಂತಿದ್ದು, ಈ ಸಂದರ್ಭದಲ್ಲಿ ಭೂಮಿ ಯುರೋಪ್ ಭೇಟಿ ನೀಡಿದ್ದಾರೆ. ಇದು ಅದ್ಭುತ ಅನುಭವ ನೀಡಿದ್ದು, ಒಲಿಂಪಿಕ್ ಗೆ ತಯಾರಾಗಿ ನಿಂತ ದೇಶವನ್ನು ನೋಡೋದೆ ಚೆಂದ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. 
 

67

ಯಾವಾಗಲೂ ತಮ್ಮ ವಿಭಿನ್ನ ಶೈಲಿಯಿಂದಲೇ ಗುರುತಿಸಿಕೊಂಡಿರುವ ಭೂಮಿ ಶೆಟ್ಟಿ, ಯುರೋಪ್ ಪ್ರವಾಸದಲ್ಲೂ ಮಿನಿ ಡ್ರೆಸ್ ಧರಿಸಿ, ಪ್ರತಿಯೊಂದು ಕ್ಷಣಗಳನ್ನು ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. 
 

77

ಭಾರತದಿಂದ ಸೋಲೊ ಟ್ರಿಪ್ (solo trip) ಮಾಡಿರುವ ಭೂಮಿ ಶೆಟ್ಟಿ, ಅಲ್ಲಿನ ಸ್ಥಳೀಯ ದೇಶಗಳನ್ನು ಸುತ್ತಿ, ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆಯುತ್ತಿದ್ದಾರೆ. ಅಷ್ಟೆ ಅಲ್ಲ ಅಲ್ಲಿನ ಜನ ಜೀವನವನ್ನ ಎಂಜಾಯ್ ಮಾಡಿರುವ ಭೂಮಿ, ಅಲ್ಲಿರುವ ಬೆಟ್ಟ ಗುಡ್ಡ, ನದಿ ಸಮುದ್ರಗಳನ್ನೆಲ್ಲಾ ಅಲೆಯುತ್ತಾ ಜೀವನದ ಪ್ರತಿ ಕ್ಷಣವನ್ನೂ ಅನುಭವಿಸ್ತಿದ್ದಾರೆ. 
 

Read more Photos on
click me!

Recommended Stories