ಕೆಂಪು ಸೀರೇಲಿ ಚಾರು, ಈಕೆಯನ್ನ ನೋಡಿ ನನ್ನ ಕನಸಿನ ಹುಡುಗಿ ಎಂದ ಅಭಿಮಾನಿ!

Published : Jul 19, 2024, 05:33 PM IST

ರಾಮಾಚಾರಿ ಧಾರಾವಾಹಿಯ ಚೆಲುವೆ ಮೌನ ಗುಡ್ಡೆಮನೆ ಕೆಂಪು ಸೀರೆಯಲ್ಲಿ ಸುರ ಸುಂದರಿಯಂತೆ ಕಾಣಿಸ್ತಿದ್ದಾರೆ. ಇಲ್ಲಿದೆ ನೋಡಿ ಮುದ್ದಾದ ಫೋಟೋಗಳು.   

PREV
16
ಕೆಂಪು ಸೀರೇಲಿ ಚಾರು, ಈಕೆಯನ್ನ ನೋಡಿ ನನ್ನ ಕನಸಿನ ಹುಡುಗಿ ಎಂದ ಅಭಿಮಾನಿ!

ರಾಮಾಚಾರಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಬೆಡಗಿ ಮೌನ ಗುಡ್ಡೆಮನೆ (Mouna Guddemane). ಆರಂಭದಲ್ಲಿ ರಗಡ್ ಲುಕ್ಕಲ್ಲಿ  ಎಂಟ್ರಿ ಕೊಟ್ಟ ಚಾರು, ಈಗಂತೂ ಆಚಾರ್ಯರ ಮನೆಗೆ ಹೇಳಿ ಮಾಡಿಸಿದ ಸೊಸೆಯಾಗಿದ್ದಾಳೆ. ಮನೆಗೆ ಯಾವಾಗ್ಲೂ ಒಳ್ಳೇದು ಬಯಸುವ ಗೃಹಿಣಿಯಾಗಿದ್ದಾಳೆ. 
 

26

ಸೀರಿಯಲ್ಲಲ್ಲಿ ಯಾವಾಗ್ಲೂ ಸೀರೆಯಲ್ಲಿ ಕಾಣಿಸಿಕೊಳ್ಳುವ ಮೌನ, ಸೋಶಿಯಲ್ ಮೀಡಿಯಾದಲ್ಲೂ (social media) ಹೆಚ್ಚಾಗಿ ಸೀರೆಯುಟ್ಟೇ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೆಂಪು ಸೀರೆಯುಟ್ಟು ಚಾರು ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

36

ತನ್ನ ನಟನೆಯಿಂದ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ಮೌನ ಗುಡ್ಡೆಮನೆಯ ಅಂದಕ್ಕೂ ತುಂಬಾ ಜನ ಮನಸೋತಿದ್ದಾರೆ. ಮೌನ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕೊಂಡ್ರೆ ಸಾಕು ಸಾಲು ಸಾಲು ಕಾಮೆಂಟ್ಸ್, ಸಾವಿರಗಟ್ಟಲೆ ಲೈಕ್ಸ್ ಬಂದು ಬಿಡುತ್ತವೆ. 
 

46

ಮಾಯಾ ಡಿಸೈನರ್ ವೇರ್ ಅವರ ಸುಂದರ ಕೆಂಪು ಸೀರೆ ಮತ್ತು ಅದಕ್ಕೆ ಮ್ಯಾಚ್ ಆಗುವ ವರ್ಕ್ ಇರೋ ಬ್ಲೌಸ್ ಧರಿಸಿರುವ ಮೌನಾ, ಸಿಂಪಲ್ ಲುಕ್‌ನಲ್ಲೇ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಯೊಬ್ಬ ನನ್ನ ಕನಸಿನ ಹುಡುಗಿ ಮೌನ ಎಂದು ಸಹ ಹೇಳಿದ್ದಾರೆ. 
 

56

ಅಷ್ಟೇ ಅಲ್ಲ ನಿಮ್ಮಿಂದಲೇ ಈ ಸೀರೆಯ ಅಂದ ಹೆಚ್ಚಾಗಿದೆ, ಜನ ಮೆಚ್ಚಿದ ಜೋಡಿ ನಮ್ಮೆಲ್ಲರ ಮನಮೆಚ್ಚಿದ ಜೋಡಿ ಚಾರು -ಚಾರಿ ನೋಡೋದೇ ಒಂತರ ಚಂದ. ಎಷ್ಟು ಮುದ್ದಾಗಿದ್ದೀರಾ ಇಬ್ಬರು ಯಾರ ದೃಷ್ಟಿ ತಾಗ್ದೆ ಇರ್ಲಿ ಅಂತಾನೂ ಚಾರು ಚಾರಿ ಜೋಡಿ ಫೊಟೋ ನೋಡಿ ಜನ ಕಾಮೆಂಟ್ ಮಾಡಿದ್ದಾರೆ. 
 

66

ಇನ್ನು ರಾಮಾಚಾರಿ (Ramachari) ಸೀರಿಯಲ್ ಕಥೆ ಬಗ್ಗೆ ಹೇಳೊದಾದ್ರೆ ಇತ್ತೀಚಿನ ಪ್ರೊಮೋದಲ್ಲಿ ತೋರಿಸಿರೋವಂತೆ ಮನೆಯವರ ಎಲ್ಲರ ಸಮ್ಮುಖದಲ್ಲಿಯೇ ವೈಶಾಖಳ ಗುಟ್ಟನ್ನು ಚಾರು ಬಯಲು ಮಾಡಿದ್ದಾಳೆ, ಆಕೆ ಗರ್ಭಿಣಿ ಅಲ್ಲ ಎನ್ನುವ ಸತ್ಯವನ್ನು ಎಲ್ಲರೆದುರು ತಿಳಿಸಿದ್ದಾಳೆ. ಆದರೆ ಇದು ವೈಶಾಖಗೆ ಬಿದ್ದ ಕನಸೋ ಅಥವಾ ಚಾರು ಹೇಳಿದ್ರೂ ಯಾರೂ ನಂಬೋದಿಲ್ವೋ? ಮುಂದೇನಾಗುತ್ತೋ ಅಂತ ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories