ಮತ್ಸ್ಯ ಕನ್ಯೆಯಾಗಿ ಬದಲಾದ ಲಕ್ಷ್ಮೀ ಬಾರಮ್ಮ ಕೀರ್ತಿ, ಕಲಿಯುಗದ ಅಪ್ಸರೆ ಎಂದ ಫ್ಯಾನ್ಸ್

Published : Jul 20, 2024, 01:16 PM ISTUpdated : Jul 22, 2024, 11:18 AM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಯಾಗಿ ನಟಿಸುತ್ತಿರುವ ತನ್ವಿ ರಾವ್ ಹೊಸ ಫೋಟೋ ಶೂಟ್ ಸೀರೀಸ್ ಒಂದನ್ನ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ನಟಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.   

PREV
17
ಮತ್ಸ್ಯ ಕನ್ಯೆಯಾಗಿ ಬದಲಾದ ಲಕ್ಷ್ಮೀ ಬಾರಮ್ಮ ಕೀರ್ತಿ, ಕಲಿಯುಗದ ಅಪ್ಸರೆ ಎಂದ ಫ್ಯಾನ್ಸ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಕೀರ್ತಿ ಪಾತ್ರ ಸೀರಿಯಲ್ ವೀಕ್ಷಿಸುವ ಪ್ರತಿಯೊಬ್ಬರಿಗೂ ಇಷ್ಟ. ವಿಲನ್ ಅಲ್ಲದೇ ಇದ್ದರೂ ವಿಲನ್ ಆಗಿ ಗುರುತಿಸಿಕೊಂಡ ಕೀರ್ತಿಯ ನಟನೆಗೆ ಫಿದಾ ಆಗಿರೋರೆ ಹೆಚ್ಚು. 
 

27

ಒಂದು ಸಲ ಲವರ್ ಗರ್ಲ್ ಆಗಿ, ಮತ್ತೊಂದು ಸಲ ಹಠಮಾರಿ ಹುಡುಗಿಯಾಗಿ, ಇನ್ನೊಂದು ಸಲ ತನ್ನ ಪ್ರೀತಿ ಉಳಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗೋದಕ್ಕೆ ರೆಡಿಯಾಗಿರುವ ಪ್ರೇಮಿಯಾಗಿ ಕೀರ್ತಿ ಪಾತ್ರಕ್ಕೆ ನ್ಯಾಯ ಒದಗಿಸುವಂತೆ ನಟಿಸಿದ್ದಾರೆ ತನ್ವಿ ರಾವ್ (Tanvi Rao). 
 

37

ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದರೂ ಸಹ ತನ್ವಿ ರಾವ್ ಗೆ ಹೆಸರು ತಂದು ಕೊಟ್ಟ ಪಾತ್ರ ಅಂದ್ರೆ ಕೀರ್ತಿ. ಜನ ಇವರನ್ನ ತನ್ವಿ ರಾವ್ ಅನ್ನೋದಕ್ಕಿಂತ ಕೀರ್ತಿಯಾಗಿಯೇ ಹೆಚ್ಚು ಇಷ್ಟಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ಪ್ರೋಮೊ ಬಿಟ್ಟರೆ ಸಾಕು, ಕೀರ್ತಿಗೆ ನ್ಯಾಯ ಕೊಡಿಸಿ ಅನ್ನೋರೆ ಹೆಚ್ಚು. 
 

47

ಈಗ ಸೀರಿಯಲ್ ವಿಷ್ಯ ಸೈಡಲ್ಲಿರಲಿ, ತನ್ವಿ ರಾವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಶೂಟ್ ಫೋಟೋಗಳನ್ನ ಶೇರ್ ಮಾಡಿದ್ದು, ತನ್ವಿ ಮತ್ಸ್ಯ ಕನ್ಯೆಯಾಗಿ (mermaid look)ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. ಇವರ ಈ ಲುಕ್ ಸದ್ಯಕ್ಕೆ ವೈರಲ್ ಆಗಿದೆ. 
 

57

ತಿಳಿ ಹಸಿರು ಬಣ್ಣದ ಆಫ್ ಶೋಲ್ಡರ್ ಕ್ರಾಪ್ ಟಾಪ್ ಮತ್ತು ಮರ್ಮೆಡ್ ಸ್ಕರ್ಟ್ ಧರಿಸಿರುವ ಮಂಗಳೂರಿನ ಈ ಬೆಡಗಿ ಅದಕ್ಕೆ ಮ್ಯಾಚ್ ಆಗುವ ಶಾಂಡೇಲಿಯರ್ ಇಯರಿಂಗ್ಸ್ ಮತ್ತು ಮುಂದಾಲೆ ಧರಿಸಿದ್ದು, ರಕ್ಷಿತ್ ಕಾರಂತ್ ಕುಳಾಯಿ ಫೋಟೋಗ್ರಾಫಿಯಲ್ಲಿ ಹುಣ್ಣಿಮೆ ಚಂದ್ರನಂತೆ ಕಾಣಿಸ್ತಿದ್ದಾರೆ. 
 

67

ಮಂಗಳೂರಿನ ತಣ್ಣಿರುಬಾವಿ ಬೀಚಲ್ಲಿ ಮತ್ಸ್ಯಕನ್ಯೆಯೊಂದು ಕಾಣ ಸಿಕ್ಕಿದೆಯಂತೆ ಹೌದಾ ಎಂದು ಪ್ರಶ್ನಿಸಿ ಕ್ಯಾಪ್ಶನ್ ಹಾಕಿದ್ದು, ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಸೋತಿದ್ದಾರೆ. ಕೀರ್ತಿ ಚೆನ್ನಾಗಿ ಕಾಣಿಸ್ತಿದ್ದೀರಾ, ಡಿಫರೆಂಟ್ ಲುಕಲ್ಲಿ ಸೂಪರ್ ಸ್ಟಾರ್ ಥರ ಕಾಣಿಸ್ತಿದ್ದಿರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

77

ಒಬ್ರು ಕಾಮೆಂಟ್ ಮಾಡಿ ನೀವು ಥೇಟ್ ಶ್ರೇಯಾ ಘೋಷಲ್ ತರ ಕಾಣಿಸ್ತಿದ್ದೀರಿ ಎಂದಿದ್ದಾರೆ. ಇನ್ನೂ ಕೆಲವರು ಈ ಹಾಟ್ನೆಸ್ ತಡೆದುಕೊಳ್ಳೋಕೆ ಸಾಧ್ಯ ಆಗ್ತಿಲ್ಲ ಅಂದ್ರೆ, ಮತ್ತೊಬ್ಬರು ಕಲಿಯುಗದ ಅಪ್ಸರೆ, ರವಿವರ್ಮನ ಅದ್ಭುತ ಕಲೆ ನೀವು, ಸುಂದ್ರಿ, ಗಾರ್ಜಿಯಸ್, ಡಾಲ್ ಎಂದೆಲ್ಲಾ ಹಾಡಿ ಹೊಗಳಿದ್ದಾರೆ ಅಭಿಮಾನಿಗಳು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories