ಅಪ್ಪನ ಚಿತೆಯೆದುರು ವಕೀಲಿ ಮಾಡುವುದಿಲ್ಲವೆಂದು ಭಾರ್ಗವಿ ಪ್ರಾಮಿಸ್ ಮಾಡಿದ್ದಾಳೆ. ಆದರೆ, ನ್ಯಾಯ ಒದಗಿಸಲು ಈಗ ಕಾಳಿಯ ಹೊಸ ಅವತಾರದಲ್ಲಿ ಬರುತ್ತಿದ್ದು, ದುಷ್ಟರನ್ನು ಶಿಕ್ಷಿಸಲಿದ್ದಾಳೆ. ನಿಜ ಜೀವನದಲ್ಲಿ, ಭಾರ್ಗವಿ ಪಾತ್ರಧಾರಿ ರಾಧಾ ಭಗವತಿ ಅವರು ನಟ ರಾಣವ್ ಜೊತೆ ಮದುವೆಯಾಗುತ್ತಿದ್ದಾರೆ.
ಭಾರ್ಗವಿ ಎಲ್ಎಲ್ಬಿ (Bhargavi LLb Serial)ಯಲ್ಲಿ ಸದ್ಯ ಅಪ್ಪನ ಸಾವಿನ ಬಳಿಕ ಭಾರ್ಗವಿ ತಾನು ಅಮ್ಮ ಹೇಳುವವರೆಗೂ ಕೋರ್ಟ್ಗೆ ಹೋಗಲ್ಲ, ವಕೀಲಿಕೆ ಪ್ರಾಕ್ಟೀಸ್ ಮಾಡಲ್ಲ ಎಂದು ಅಪ್ಪನ ಚಿತೆಯ ಮುಂದೆ ಪ್ರಾಮಿಸ್ ಮಾಡಿದ್ದಾಳೆ.
26
ಜೈದೇವ್ ಜೊತೆ ರಿಯಲ್ ಲೈಫ್ನಲ್ಲಿ ಮದುವೆ
ಇದು ಸೀರಿಯಲ್ ಸ್ಟೋರಿಯಾದ್ರೆ, ರಿಯಲ್ ಲೈಫ್ನಲ್ಲಿ ಭಾರ್ಗವಿ ಅರ್ಥಾತ್ ನಟಿ ರಾಧಾ ಭಗವತಿ ಅವರು ಅಮೃತಧಾರೆಯಲ್ಲಿ ಮೋಸ ಮಾಡಿರುವ ಜೈದೇವ್ ಅರ್ಥಾತ್ ನಟ ರಾಣವ್ ಜೊತೆ ರಿಯಲ್ ಲೈಫ್ನಲ್ಲಿ ಮದುವೆಯಾಗುತ್ತಿದ್ದಾರೆ. ಇದರ ಬಗ್ಗೆ ಈ ಜೋಡಿ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕನ್ಫರ್ಮ್ ಮಾಡಿದೆ. ರಾಧಾ ಭಗವತಿ ಅವರು ಭಾರ್ಗವಿ ಸೀರಿಯಲ್ನಲ್ಲಿ ಲೀಡ್ ರೋಲ್ ಸಿಕ್ಕ ಕಾರಣ, ಅಮೃತಧಾರೆ (Amruthadhaare) ಸೀರಿಯಲ್ ಬಿಟ್ಟು ಹೋಗಿದ್ದರು. ಆದರೆ ಇದೀಗ ಈ ಜೋಡಿ ಮತ್ತೆ ರಿಯಲ್ ಲೈಫ್ನಲ್ಲಿ ಒಂದಾಗಲಿದೆ.
36
ಇನ್ಸ್ಟಾಗ್ರಾಮ್ ಲೈವ್
ಇದೇ ಹೊತ್ತಿನಲ್ಲಿ ನಟಿ ರಾಧಾ ಭಗವತಿ (Radha Bhagavati) ಅವರು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅವರು ಹೇಳಿದ್ದು ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಬಗ್ಗೆ. ಭಾರ್ಗವಿ ಹೊಸ ರೂಪ ಬರ್ತಾ ಇದ್ದಾಳೆ. ಅದೇ ಕಾಳಿಯ ರೂಪದ ಬಗ್ಗೆ ಎಂದು ಅವರು ಮಾತನಾಡಿದ್ದಾರೆ.
ದುಷ್ಟರ ಅಟ್ಟಹಾಸ ಜಾಸ್ತಿ ಆದಾಗ ದೇವರು ಒಂದಲ್ಲ ಒಂದು ರೂಪದಲ್ಲಿ ಭೂಮಿಗೆ ಬಂದು ದುಷ್ಟರನ್ನು ನಾಶ ಮಾಡಿ, ಒಂದು ನ್ಯಾಯ ಒದಗಿಸಿಕೊಡ್ತಾರೆ, ರಕ್ಷಣೆ ಮಾಡ್ತಾರೆ. ಅದನ್ನೇ ಈಗ ಸೀರಿಯಲ್ನಲ್ಲಿ ತೋರಿಸಲಾಗಿದೆ ಎಂದಿದ್ದಾರೆ ನಟಿ.
56
ಹೊಸ ಅವತಾರದಲ್ಲಿ
ಭಾರ್ಗವಿ ಸೀರಿಯಲ್ನಲ್ಲಿ ಈಗ ಹೊಸ ಅವತಾರದಲ್ಲಿ ಬರುತ್ತಿದ್ದೇನೆ. ಎಲ್ಎಲ್ಬಿ ಓದಿದ್ದೇನೆ. ತಾಯಿ ಹೇಳಿರುವ ಕಾರಣ, ಕೋರ್ಟ್ಗೆ ಮತ್ತೆ ಅವರು ಹೇಳುವವರೆಗೂ ಹೋಗಲ್ಲ. ಆದರೆ ಯಾವುದೇ ಕೇಸ್ನಲ್ಲಿ ನ್ಯಾಯ ಒದಗಿಸಿಕೊಡಲು ಎಲ್ಎಲ್ಬಿ ಮಾಡಲೇಬೇಕು, ಲಾಯರ್ ಆಗಲೇಬೇಕೆಂದೇನೂ ಇಲ್ಲ. ನಾನು ಹೇಗೆ ಇದ್ದರೂ ನನ್ನ ಕೆಲಸವನ್ನು ನಾನು ಜಾರಿಯಲ್ಲಿ ಇಡ್ತೇನೆ ಎನ್ನುವುದನ್ನು ಕಾಳಿ ಮೂಲಕ ಹೇಳ್ತೇನೆ ಎಂದು ಭಾರ್ಗವಿ ಹೇಳಿದ್ದಾರೆ.
66
ನಟಿ ಹೇಳಿದ್ದೇನು?
ಈ ಕಾನ್ಸೆಪ್ಟ್ ನಿಮಗೆ ಇಷ್ಟ ಆಗತ್ತೆ ಎಂದು ಅಂದುಕೊಂಡಿದ್ದೇನೆ ಎಂದ ನಟಿ, ಇಲ್ಲಿಯವರೆಗೆ ಕೊಟ್ಟಿರುವ ಪ್ರೋತ್ಸಾಹದಂತೆಯೇ ಇನ್ನೂ ಮುಂದೆಯು ಕೊಡುವಂತೆ ಕೇಳಿಕೊಂಡಿದ್ದಾರೆ ರಾಧಾ ಭಗವತಿ. ಜೊತೆಗೆ ಹೆಣ್ಣುಮಕ್ಕಳ ಸ್ಟ್ರಾಂಗ್ ಆಗಿ ಇರಬೇಕು, ಯಾವುದೇ ಸ್ಥಿತಿ ಎದುರಾದರೂ ಧೈರ್ಯದಿಂದ ಎದುರಿಸಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.