Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?

Published : Feb 27, 2026, 11:29 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಹುಣ್ಣಿಮೆಯೊಳಗೆ ಭಾಗ್ಯಳ ಮದುವೆಯಾಗಬೇಕೆಂಬ ಜ್ಯೋತಿಷಿಯ ಭವಿಷ್ಯ ಕಥೆಗೆ ತಿರುವು ನೀಡಿದೆ. ಒಂದೆಡೆ ತಾಂಡವ್​ ಪ್ರೀತಿಯ ಬಲೆ ನೇಯುತ್ತಿದ್ದರೆ, ಇನ್ನೊಂದೆಡೆ ಆದಿಯನ್ನೇ ಮದುವೆಯಾಗಬೇಕೆಂಬ ಒತ್ತಡವಿದೆ.

PREV
16
ಕುತೂಹಲದ ಹಂತ

ಭಾಗ್ಯಲಕ್ಷ್ಮಿ ಸೀರಿಯಲ್​ ಇದೀಗ ಕುತೂಹಲದ ಹಂತ ತಲುಪಿದೆ. ಅತ್ತ ಆದಿ ಇನ್ನೂ ಮದುವೆಯ ವಿಷಯವನ್ನು ಭಾಗ್ಯಳ ಬಳಿ ಹೇಳಿಕೊಳ್ಳದಿದ್ದರೆ, ಇತ್ತ ತಾಂಡವ್​ಗೆ ಭಾಗ್ಯಳ ಮೇಲೆ ಲವ್​ ಮೂಡಲು ಶುರುವಾಗಿದೆ.

26
ತಾಂಡವ್​ ಜೊತೆ ಹೋಗಲ್ಲ

ಯಾವುದೇ ಕಾರಣಕ್ಕೂ ತಾಂಡವ್​ ಜೊತೆ ತಾನು ಹೋಗಲ್ಲ ಎಂದು ಭಾಗ್ಯ ಪಟ್ಟು ಹಿಡಿದು ಕುಳಿತಿದ್ದಾಳೆ. ಆದರೆ, ಅಮ್ಮ ಸುನಂದ ಮತ್ತು ಮಗಳು ತನ್ವಿ ಮಾತ್ರ ತಾಂಡವ್​ ಪರ ಇದ್ದಾರೆ.

36
ನಂಬಬೇಡ

ಅದೇ ಇನ್ನೊಂದೆಡೆ, ತಾಂಡವ್​ನನ್ನು ನಂಬಬೇಡ, ಆದಿಯನ್ನೇ ಮದುವೆಯಾಗು ಎನ್ನುವುದು ಅತ್ತೆ ಕುಸುಮಾ ಮಾತು, ಜೊತೆಗೆ ವೀಕ್ಷಕರದ್ದು ಕೂಡ.

46
ಕಣಿ ನುಡಿದ

ಆದರೂ ಇದರ ನಡುವೆಯೇ, ಜ್ಯೋತಿಷಿಯೊಬ್ಬ ಕಣಿ ನುಡಿದಿದ್ದಾರೆ. ಬರುವ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು. ಇಲ್ಲದಿದ್ದರೆ ತಾಳಿಭಾಗ್ಯ ಇಲ್ಲ ಎಂದಿದ್ದಾನೆ.

56
ಹುಣ್ಣಿಮೆಯೊಳಗೆ ತಾಳಿಭಾಗ್ಯ

ಹಾಗಿದ್ದರೆ ಹುಣ್ಣಿಮೆಯ ಒಳಗೆ ಭಾಗ್ಯಳಿಗೆ ತಾಳಿ ಕಟ್ಟುವವರು ಆದಿನೋ, ತಾಂಡವ್​ನೋ ಎನ್ನುವ ಕುತೂಹಲ ಸದ್ಯಕ್ಕಿದೆ. ಭಾಗ್ಯ ಅಂತೂ ತಾಂಡವ್​ನನ್ನು ಒಪ್ಪಿಕೊಳ್ಳದಿದ್ದರೂ, ಆಕೆ ತೋರುವ ಕಾಳಜಿಯಿಂದ ತಾಂಡವ್​ ಕರಗುತ್ತಿದ್ದಾನೆ.

66
ಮುಂದೇನಾಗತ್ತೆ?

ಅದೇ ಇನ್ನೊಂದೆಡೆ, ಶ್ರೇಷ್ಠಾ ಆತ್ಮ*ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಶ್ರೇಷ್ಠಾಳಿಗೆ ಬುದ್ಧಿ ಬಂದು ತಾಂಡವ್​ ಜೊತೆ ಸಂಸಾರ ಮಾಡುತ್ತಾಳೆ, ಆದಿ ಮತ್ತು ಭಾಗ್ಯ ಒಂದಾಗುತ್ತಾರೆ ಎನ್ನುವುದು ಸದ್ಯಕ್ಕಿರುವ ಅನಿಸಿಕೆ. ಒಟ್ಟಿನಲ್ಲಿ ಹುಣ್ಣಿಮೆ ಬರಲು ಸೀರಿಯಲ್​ ಪ್ರೇಮಿಗಳು ಇನ್ನೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories