Bhagyalakshmi Serial Update: ಭಾಗ್ಯಳಿಗೆ ಮರಳಿ ಹುಟ್ಟಿತು ಪ್ರೀತಿ, ಆದ್ರೆ ಯಾರ​ ಮೇಲೆ? ಇಲ್ಲಿದೆ ಭಾರಿ ಟ್ವಿಸ್ಟು!

Published : Mar 03, 2026, 12:34 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ತಾಂಡವ್ ಮತ್ತು ಆದಿಯ ನಡುವಿನ ಗೊಂದಲಕ್ಕೆ ಭಾಗ್ಯ ತೆರೆ ಎಳೆದಿದ್ದಾಳೆ. ಕುಟುಂಬದವರ ವಿಭಿನ್ನ ಅಭಿಪ್ರಾಯಗಳ ನಡುವೆ ಕೊನೆಗೂ ಆದಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಆದರೆ, ಆದಿಯ ತಂದೆಯ ಹೊಸ ಯೋಜನೆಯಿಂದ ಕಥೆಗೆ ಮತ್ತೊಂದು ತಿರುವು ಸಿಕ್ಕಿದೆ.

PREV
16
ರೋಚಕ ಹಂತ

ಭಾಗ್ಯಲಕ್ಷ್ಮಿ (Bhagyalakshmi Serial) ಸೀರಿಯಲ್​ ಇದೀಗ ರೋಚಕ ಹಂತವನ್ನು ತಲುಪಿದೆ. ವರ್ಷಗಳಿಂದ ವೀಕ್ಷಕರು ಕಾಯ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ.

26
ದೇವರೇ ಕಾಪಾಡ್ಬೇಕು

ಅತ್ತ ಆದಿಯ ಪ್ರೀತಿ, ಇತ್ತ ಬದಲಾದ ತಾಂಡವ್​ ಇವರಿಬ್ಬರ ನಡುವೆ ತೊಳಲಾಡ್ತಿದ್ದ ಭಾಗ್ಯಳನ್ನು ದೇವರೇ ಕಾಪಾಡ್ಬೇಕು ಎನ್ನುತ್ತಿದ್ದರು ವೀಕ್ಷಕರು.

36
ತೊಳಲಾಟದಲ್ಲಿ ಭಾಗ್ಯ

ಗಂಡ ಹೇಗೇ ಇದ್ದರೂ ಅದನ್ನು ಹೆಂಡತಿಯಾದವಳು ಸಹಿಸಿಕೊಂಡು ಹೋಗಬೇಕು ಎನ್ನುವ ಭಾಗ್ಯಳ ಅಮ್ಮ, ಅಪ್ಪ ಬದಲಾಗಿದ್ದಾನೆ- ಅವನನ್ನು ಒಪ್ಪಿಕೋ ಎನ್ನುವ ಭಾಗ್ಯಳ ಮಗಳು, ಈ ನೀಚಬುದ್ಧಿಯವ ಯಾವತ್ತೂ ಬದಲಾಗಲ್ಲ, ನೀನು ಆದಿಯನ್ನೇ ಮದುವೆಯಾಗು ಎನ್ನುವ ಅತ್ತೆ, ಅಪ್ಪ ಸರಿಯಲ್ಲ- ಅವನು ಒಳ್ಳೆಯವನ್ನ ಎನ್ನುವ ಮಗ, ಎಲ್ಲದ್ದಕ್ಕೂ ತಟಸ್ಥನಾಗಿ ನಿಂತವ ಭಾಗ್ಯಳ ಮಾವ... ಇವೆಲ್ಲರ ನಡುವಿನ ತೊಳಲಾಟದಿಂದ ಭಾಗ್ಯಳಿಗೆ ಈಗ ಮುಕ್ತಿ ಸಿಕ್ಕಿದೆ.

46
ಆದಿಯ ಆಯ್ಕೆ

ಕೊನೆಗೂ ಆದಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ ಭಾಗ್ಯ. ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಭಾಗ್ಯಳ ನಿರ್ಧಾರ ಕೇಳಿ ಆದಿ ನಾಚಿ ನೀರಾಗಿದ್ದಾನೆ.

56
ಆದಿ ಅಪ್ಪನದ್ದು ಬೇರೆ ಪ್ಲ್ಯಾನ್​

ಆದರೆ, ಅದೇ ಇನ್ನೊಂದೆಡೆ ಆದಿಯ ಅಪ್ಪ ಹೇಗಾದರೂ ಮಾಡಿ ಆದಿ ಮತ್ತು ಭಾಗ್ಯಳನ್ನು ದೂರ ಮಾಡಲು ನೋಡುತ್ತಿದ್ದಾನೆ. ಆದಿಗೆ ಬೇರೊಂದು ಮದುವೆ ಮಾಡಿಸುವುದು ಆತನ ಪ್ಲ್ಯಾನ್​.

66
ಸೀರಿಯಲ್​ ಮುಗಿಯಲ್ಲ

ಇವೆಲ್ಲವುಗಳ ನಡುವೆ ಇನ್ನೇನು ಆಗುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಸೀರಿಯಲ್​ ಮುಗಿಯಲ್ಲ ಎಂದು ನಟಿಯೇ ಹೇಳಿರುವ ಕಾರಣ, ಬೇರೆ ಬೇರೆ ಆ್ಯಂಗಲ್​ಗಳು ಸೀರಿಯಲ್​ ಕಾಣಸಿಗಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories