Bhagyalakshmi Serial: ಭಾಗ್ಯ ಸಾವಿನೊಂದಿಗೆ ಧಾರಾವಾಹಿ ಮುಗಿಸ್ತಾರಾ? ಜ್ಯೋತಿಷಿ ಹೇಳಿದಂತೆ ನಡೀತಿದೆ!

Published : Mar 02, 2026, 03:34 PM IST

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಹೀಗಿರುವಾಗ ಅವಳ ಪ್ರಾಣಕ್ಕೆ ಅಪಾಯ ಬಂದಿದೆ. ಹೌದು, ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಅವಳನ್ನು ಕೊಲ್ಲಲು ನೋಡುತ್ತಿದ್ದಾಳೆ. 

PREV
15
ತಾಂಡವ್‌ ಬದಲಾಗಿರೋದು ಸತ್ಯ

ತಾಂಡವ್‌ ಬದಲಾಗಿದ್ದಾನೆ, ಸೂರ್ಯವಂಶಿ ಮನೆಯನ್ನು ಅವನು ಭಾಗ್ಯ ಹೆಸರಿಗೆ ಬರೆದಿದ್ದಾನೆ. ಎಷ್ಟೇ ಪರೀಕ್ಷೆ ಮಾಡಿದರೂ ಕೂಡ ಅವನು ಮಾತ್ರ ಕುಸುಮಾ ಕಣ್ಣಲ್ಲಿ ಸೋತಿಲ್ಲ. ಆದರೂ ಕೂಡ ಯಾರಿಗೂ ಅವನ ಮೇಲೆ ನಂಬಿಕೆ ಇಲ್ಲದಂತಾಗಿದೆ.

25
ಸುನಂದಾ, ತನ್ವಿಗೆ ತಾಂಡವ್‌ ಮೇಲೆ ನಂಬಿಕೆ

ಯಾರು ಎಷ್ಟೇ ಟೀಕೆ ಮಾಡಿದರೂ, ವ್ಯಂಗ್ಯ ಮಾಡಿದರೂ ಕೂಡ ಸುನಂದಾ, ತನ್ವಿ ಮಾತ್ರ ತಾಂಡವ್‌ನನ್ನು ಬಿಟ್ಟುಕೊಡ್ತಿಲ್ಲ. ಈ ಮಧ್ಯೆ ಮಗಳ ನಂಬಿಕೆ ಉಳಿಸಿಕೊಳ್ಳಬೇಕು, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು, ಶಿಕ್ಷೆ ಆಗಬೇಕು ಎಂದು ತಾಂಡವ್‌ ಮನಸ್ಸಿನಲ್ಲಿಯೇ ಕೊರಗುತ್ತಿದ್ದಾನೆ.

35
ಶ್ರೇಷ್ಠ ಹಗೆ ಮುಗಿದಿಲ್ಲ

ತಾಂಡವ್‌ ತನ್ನ ಜೊತೆ ಬಂದಿಲ್ಲ, ಅವನು ಭಾಗ್ಯ ಜೊತೆ ಬದುಕ್ತಾನೆ ಅಂತ ಶ್ರೇಷ್ಠ ಸಿಟ್ಟಾಗಿದ್ದಾಳೆ. ಒಮ್ಮೆ ಅವಳು ಆತ್ಮ*ಹತ್ಯೆ ಮಾಡಲು ಯೋಚನೆ ಮಾಡಿದ್ದಳು. ಈಗ ಅವಳು ಭಾಗ್ಯಳನ್ನು ಕೊ*ಲ್ಲಲು ನೋಡುತ್ತಿದ್ದಾಳೆ. ಇದು ತಾಂಡವ್‌ಗೆ ಗೊತ್ತಾಗಿದೆ. ಹೊರಗಡೆ ಹೋದ ಭಾಗ್ಯಳನ್ನು ಅವನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಗ ಅವಳ ಸ್ಕೂಟರ್‌ ಹಾಳಾಗಿರೋದು ನೋಡಿ ಸರಿ ಮಾಡುತ್ತಿದ್ದಾನೆ. ಆಗ ಲಾರಿಯೊಂದು ಗುದ್ದಲು ಬಂದಿದೆ. ಭಾಗ್ಯಳನ್ನು ಬದುಕಿಸಲು ಹೋಗಿ ತಾಂಡವ್‌ಗೆ ಅಪಘಾತ ಆಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

45
ಸೀರಿಯಲ್‌ ಮುಗಿಯತ್ತಾ?

ತಾಂಡವ್‌ಗೆ ಅಪಘಾತ ಆದರೆ, ಭಾಗ್ಯ ಮನಸ್ಸು ಕೂಡ ಬದಲಾಗಬಹುದು, ಅವಳು ತಾಂಡವ್‌ ಜೊತೆ ಬದುಕಲು ನೋಡಬಹುದು, ಭಾಗ್ಯಗೆ ಅಪಘಾತ ಆದರೂ ಆಶ್ಚರ್ಯ ಇಲ್ಲ. ಭಾಗ್ಯ ಸಾವಿನೊಂದಿಗೆ ಈ ಸೀರಿಯಲ್‌ ಅಂತ್ಯ ಆಗತ್ತಾ ಎಂಬ ಪ್ರಶ್ನೆ ಕೂಡ ಇದೆ.

55
ಪಾತ್ರಧಾರಿಗಳು

ಭಾಗ್ಯ- ಸುಷ್ಮಾ ಕೆ ರಾವ್‌

ತಾಂಡವ್-‌ ಸುದರ್ಶನ್‌ ರಂಗಪ್ರಸಾದ್‌

ಆದಿ- ಹರೀಶ್‌ ರಾಜ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories