Bhagyalakshmi Serial: ಎಲ್ಲರ ಅಂದಾಜು ಮೀರಿ ದುಡುಕಿದ ತಾಂಡವ್;‌ ಹೀಗೆ ಮಾಡ್ತಾನೆ ಅಂತ ನಂಬ್ತೀರಾ?

Published : Feb 10, 2026, 05:42 PM IST

ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ ಹಾಗೆ.. ಭಾಗ್ಯಲಕ್ಷ್ಮೀ ಧಾರಾವಾಹಿ ತಾಂಡವ್‌ ಸ್ಥಿತಿ ಆಗಿದೆ. ಅಷ್ಟು ವರ್ಷಗಳ ಕಾಲ ಪತ್ನಿ ಭಾಗ್ಯಗೆ ತೊಂದರೆ ಕೊಟ್ಟು, ಹಿಂಸೆ ಮಾಡಿದ್ದ ತಾಂಡವ್‌, ಈಗ ಅದನ್ನೆಲ್ಲ ಅನುಭವಿಸುತ್ತಿದ್ದಾನೆ. ಶ್ರೇಷ್ಠಳನ್ನು ಬಿಟ್ಟು ಭಾಗ್ಯ ಮನೆಗೆ ಬಂದ ಅವನಿಗೆ ತೊಂದರೆ ಶುರು ಆಗಿದೆ. 

PREV
15
ಭಾಗ್ಯ, ಯಾರ ಮಾತನ್ನು ಕೇಳಲು ರೆಡಿ ಇಲ್ಲ

ನಾನು ಬದಲಾಗಿದ್ದೀನಿ, ದಯವಿಟ್ಟು ಕ್ಷಮಿಸಿ ಎಂದರೂ ಕೂಡ ಭಾಗ್ಯ ಆಗಲೀ, ಅವನ ತಂದೆ-ತಾಯಿ ಆಗಲೀ ನಂಬಲು ರೆಡಿ ಇಲ್ಲ. ಈಗ ತಾಂಡವ್‌ ಸಂಪೂರ್ಣ ಬದಲಾದಂತೆ ಕಾಣುತ್ತಿದೆ. ತನ್ನ ತಂದೆ ರಾತ್ರಿ ಚಳಿಯಲ್ಲಿ ಹೊರಗಡೆ ಮಲಗಿದ್ದಾರೆ, ಅವರಿಗೆ ಊಟ ಇಲ್ಲ ಎಂದು ತನ್ವಿ ಒದ್ದಾಡುತ್ತಿದ್ದರೂ ಕೂಡ ಯಾರೂ ಅವಳ ಮಾತು ಕೇಳಲು ರೆಡಿ ಇಲ್ಲ.

25
ಭಾಗ್ಯಳನ್ನು ಒತ್ತಾಯಿಸುತ್ತಿರೋ ಮಗಳು, ತಾಯಿ

ಒಡೆದು ಹೋಗಿರೋ ಕನ್ನಡಿಯನ್ನು ಜೋಡಿಸೋಕೆ ಆಗೋದಿಲ್ಲ. ಪ್ರತಿ ಬಾರಿ ತಾಂಡವ್‌ ಕೊಟ್ಟ ಹಿಂಸೆಯೇ ನೆನಪಾಗುತ್ತದೆ, ಮತ್ತೆ ನನಗೆ ಅವರ ಜೊತೆ ಬಾಳಲು ಇಷ್ಟ ಇಲ್ಲ. ಮುಖ ನೋಡಿದ ಕೂಡಲೇ ಹಳೇ ಗಾಯಗಳು ನೆನಪಾಗುತ್ತವೆ ಎಂದು ಭಾಗ್ಯ ಖಡಕ್‌ ಆಗಿ ಹೇಳಿದ್ದಾರೆ. ತನ್ವಿ ಹಾಗೂ ಸುನಂದಾ ಮಾತ್ರ ಭಾಗ್ಯಳಿಗೆ ತಾಂಡವ್‌ ಜೊತೆ ಬದುಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

35
ಕೂಗಾಡಿದ ಶ್ರೇಷ್ಠ

ತಾಂಡವ್‌, ಭಾಗ್ಯ ಮನೆಗೆ ಹೋಗಿದ್ದು ಶ್ರೇಷ್ಠಳಿಗೆ ಇಷ್ಟವೇ ಆಗಿಲ್ಲ. ಹೀಗಾಗಿ ಅವಳು ಭಾಗ್ಯ ಮನೆಗೆ ಬಂದು, ಬಾಯಿಗೆ ಬಂದ ಹಾಗೆ ಮಾತಾಡಿದ್ದಾಳೆ. “ನನ್ನ ಗಂಡನನ್ನು ಭಿಕ್ಷುಕ ಎಂದುಕೊಂಡಿದ್ಯಾ? ಯಾಕೆ ಅವನನ್ನು ಆಚೆ ಕೂರಿಸಿದ್ಯಾ? ಇವಳು ಸ್ವಾರ್ಥಿ. ಇನ್ನೊಬ್ಬರ ಗಂಡನ ಮೇಲೆ ಕಣ್ಣು ಹಾಕೋ ನೀತಿಗೆಟ್ಟ ಹೆಂಗಸು” ಎಂದು ಶ್ರೇಷ್ಠಾ ಕೂಗಾಡಿದ್ದಾಳೆ.

45
ಅಚ್ಚರಿ ತಂದ ತಾಂಡವ್‌ ನಡೆ!

ಶ್ರೇಷ್ಠ ಕೂಗಾಡೋದು ನೋಡಿ ತಾಂಡವ್‌ ಸಿಟ್ಟು ನೆತ್ತಿಗೇರಿದೆ. ಅವನು ಶ್ರೇಷ್ಠಾಳಿಗೆ ಹೊಡೆದಿದ್ದಾನೆ. ತಾಂಡವ್‌ ಬದಲಾಗೋದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವನು ಅಂದಾಜು ಮೀರಿ ಹೊಡೆದಿದ್ದಾನೆ. ಇದು ಎಲ್ಲರಿಗೂ ಅಚ್ಚರಿ ತಂದಿದೆ.

55
ಮುಂದೆ ಏನಾಗುವುದು?

ಬದಲಾದ ತಾಂಡವ್‌ನನ್ನು ಭಾಗ್ಯ ಒಪ್ಪಿಕೊಳ್ತಾಳಾ? ಆದಿಯನ್ನು ಮದುವೆ ಆಗ್ತಾಳಾ? ಸಿಂಗಲ್‌ ಆಗಿ ಬದುಕುತ್ತಾಳಾ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories