ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಮುಂಬೈ ಮತ್ತು ಮಂಗಳೂರಿನಲ್ಲಿ ಸಮುದ್ರ ನೋಡಿ ಬೆಳೆದಿದ್ದು, ಬೆಂಗಳೂರಿನಲ್ಲಿ ಸಮುದ್ರ ಇಲ್ಲದಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಬೇಸರವಾದಾಗ ಬೆಂಗಳೂರಿನ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ (Bigg Boss Rakshita Shetty) ಸದ್ಯ ಸಕತ್ ಬಿಜಿಯಾಗಿದ್ದಾರೆ. ಬಿಗ್ಬಾಸ್ ಮುಗಿದು ಕೆಲ ವಾರ ಆಗಿದ್ರೂ ಇವರಿಗೆ ಸಕತ್ ಡಿಮಾಂಡ್ ಇದೆ.
26
ಕರಾವಳಿ ಪುಟ್ಟಿಯ ಪ್ರಶ್ನೆ
ಓದಿ, ಬೆಳೆದದ್ದು ಎಲ್ಲಾ ಮುಂಬೈನಲ್ಲೇ ಆಗಿ, ಇದೀಗ ಕರಾವಳಿಯ ಪುಟ್ಟಿ ಎನ್ನಿಸಿಕೊಂಡಿರೋ ರಕ್ಷಿತಾ ಶೆಟ್ಟಿ, ಮುಂಬೈನಲ್ಲೂ ಸಮುದ್ರ ನೋಡಿದಾಕೆ, ಮಂಗಳೂರಿನಲ್ಲೂ ನೋಡಿದಾಕೆ. ಅದಕ್ಕಾಗಿಯೇ ಎಲ್ಲಾ ಊರುಗಳಲ್ಲಿಯೂ ಸಮುದ್ರ ಇದೇ ಎಂದೇ ಅಂದುಕೊಂಡಿದ್ದರಂತೆ!
36
ಸಮುದ್ರನೇ ಇಲ್ವಲ್ಲಾ ಇಲ್ಲಿ?
'ಬಿಗ್ಬಾಸ್ಗೆಂದು ಬೆಂಗಳೂರಿಗೆ ಬಂದಾಗಲೇ ಗೊತ್ತಾಯ್ತು, ಇಲ್ಲಿ ಸಮುದ್ರ ಇಲ್ಲ ಎಂದು. ಕೇಳಿ ತುಂಬಾ ಆಶ್ಚರ್ಯ ಆಯ್ತು' ಎಂದಿದ್ದಾರೆ ರಕ್ಷಿತಾ.
ನಾನು ಊರಲ್ಲಿ ತುಂಬಾ ಬೇಜಾರು ಆದಾಗ, ಒಬ್ಬಳೇ ಇದ್ದಾಗ ಸಮುದ್ರದ ಹತ್ತಿರ ಹೋಗ್ತೇನೆ. ಬೆಂಗಳೂರು ಮಂದಿ ನೀವು ಬೇಜಾರು ಆದಾಗ ಎಲ್ಲಿಗೆ ಹೋಗ್ತೀರಿ, ಸಮುದ್ರನೇ ಇಲ್ವಲ್ಲಾ ಎಂದು ಪ್ರಶ್ನಿಸಿದ್ದಾರೆ ರಕ್ಷಿತಾ!
56
ಅಯ್ಯೋ ಪಾಪ ಎಂದ ರಕ್ಷಿತಾ
ಈ ಮೂಲಕ, ಬೆಂಗಳೂರಿಗರ ಬಗ್ಗೆ ರಕ್ಷಿತಾ ಶೆಟ್ಟಿಗೆ ತುಂಬಾ ನೋವಾಗ್ತಿದೆ ಎನ್ನಿಸುವಂತೆ ಕಾಣುತ್ತಿದೆ. ಸಮುದ್ರ ಇರೋದೇ ಒಂಟಿತನ ಕಳೆಯಲು ಎಂದು ಅವರು ಭಾವಿಸಿದ್ದು, ಬೆಂಗಳೂರಿಗರು ಪಾಪ ಏನ್ ಮಾಡ್ತಾರೆ ಎನ್ನುವುದು ಅವರ ಚಿಂತೆ!
66
ನೆಟ್ಟಿಗರು ಏನಂದ್ರು?
ಅವರ ಈ ಪ್ರಶ್ನೆಗೆ ಕೆಲವರು ಗೋವಾಕ್ಕೆ ಹೋಗ್ತೇವೆ ಎಂದರೆ, ಮತ್ತೆ ಕೆಲವರು ಬೆಂಗಳೂರಿನಲ್ಲಿ ಇರುವ ಹಲಸೂರು ಕೆರೆ, ಸ್ಯಾಂಕಿ ಟ್ಯಾಂಕ್ ಹೆಸರು ಹೇಳಿದ್ದಾರೆ. ಮತ್ತೆ ಕೆಲವರು ಕಮೆಂಟ್ನಲ್ಲಿ ಬಾರ್ಗೆ ಎಂದು ತಮಾಷೆಯ ಉತ್ತರ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.