ಲಕ್ಷ್ಮೀ ಸತ್ತು ದಿನ ಕಳೆದ್ರು ಅಕ್ಕ ಭಾಗ್ಯಂಗೆ ವಿಷ್ಯಾನೆ ಗೊತ್ತಿಲ್ಲ… ಹೀಗೂ ಉಂಟೆ ಅಂತಿದ್ದಾರೆ ವೀಕ್ಷಕರು!

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರ್ತಿದೆ, ಆದ್ರೆ ಒಂದು ವಿಚಾರದ ಬಗ್ಗೆ ಜನ ಇನ್ನೂ ಕನ್’ಫ್ಯೂಸ್ ಆಗಿಯೇ ಇದ್ದಾರೆ. ಯಾಕಂದ್ರೆ ಲಕ್ಷ್ಮೀ ಸತ್ತಿರೋದು ಭಾಗ್ಯಂಗೆ ಗೊತ್ತೆ ಇಲ್ಲ. 
 

Bhagya unaware of Lakshmis death in Lakshmi Baramma pav

ಲಕ್ಷ್ಮೀ ಬಾರಮ್ಮ(Lakshmi Baramma) ಸೀರಿಯಲ್’ನಲ್ಲಿ ಕಥೆ ವಿವಿಧ ರೀತಿಯಲ್ಲಿ ತಿರುವು ಕಾಣುತ್ತಿದೆ. ಕಾವೇರಿಯ ಆಟವಂತೂ ದಿನದಿಂದ ದಿನಕ್ಕೆ ಮುಂದುವರೆಯುತ್ತಲೆ ಇದೆ. ಇದೆಲ್ಲಾ ನೋಡಿ ವೀಕ್ಷಕರು ಏನಾಗ್ತಿದೆ ಇಲ್ಲಿ, ಮುಂದೇನಾಗುತ್ತೆ ಎಂದು ತಲೆ ಚಚ್ಚಿಕೊಳ್ತಾ ಇದ್ದಾರೆ. ಜೊತೆಗೆ ವೀಕ್ಷಕರು ದೊಡ್ಡದಾದ ಸವಾಲನ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡೋರು ಯಾರು? 
 

Bhagya unaware of Lakshmis death in Lakshmi Baramma pav

ವಿಷ್ಯ ಏನಂದ್ರೆ, ವೈಷ್ಣವ್ ಜೊತೆ ಯಾರೇ ಹತ್ತಿರವಾದರೂ ಅದನ್ನು ಸಹಿಸದ ಕಾವೇರಿ, ಎಲ್ಲರನ್ನೂ ವೈಷ್ಣವ್ ನಿಂದ ದೂರ ಮಾಡಿ, ಆತ ತಾನು ಹೇಳಿದಹಾಗೆ ಮಾತ್ರ ಕೇಳಬೇಂದು ಎಂದು ಬಯಸುವ ಸ್ವಾರ್ಥಿ ಕಾವೇರಿ. ಅದಕ್ಕಾಗಿ ಆತನಿಗೆ ಹತ್ತಿರವಾಗಿದ್ದ ಕೀರ್ತಿಯನ್ನು ದೂರ ಮಾಡಿ, ಲಕ್ಷ್ಮೀ ಜೊತೆ ಮದ್ವೆ ಮಾಡಿಸಿದ್ದಳು. 
 


ಲಕ್ಷ್ಮೀ ಜೊತೆ ಮದ್ವೆಯಾದ ನಂತರ ವೈಷ್ಣವ್ ಲಕ್ಷ್ಮೀಗೆ ಹತ್ತಿರವಾಗ್ತಿದ್ದಾನೆ, ಅನ್ನೋದು ಗೊತ್ತಾಗಿ ಲಕ್ಷ್ಮೀಯನ್ನು ದೂರ ಮಾಡೋ ಪ್ಲ್ಯಾನ್ ಕೂಡ ಮಾಡಿದ್ಲು, ಕೊನೆಗೆ ಲಕ್ಷ್ಮೀ- ಕೀರ್ತಿ ಇಬ್ಬರನ್ನೂ ವೈಷ್ಣವ್ ನಿಂದ ದೂರ ಮಾಡೋದಕ್ಕೆ ಇಬ್ಬರ ಕೊಲೆಗೂ ಸಂಚು ರೂಪಿಸಿದ್ದಳು ಕಾವೇರಿ. 
 

ಕಾವೇರಿಯ ಪ್ಲ್ಯಾನ್ ನಂತೆ ಕೀರ್ತಿಯನ್ನು ಬೆಟ್ಟದಿಂದ ನೂಕಿ, ಸಾಯುವಂತೆ ಮಾಡಿದ್ದಾಯಿತು. ಕೀರ್ತಿ ಸಾವಿಗೆ ಪ್ರತಿಕಾರ, ಸತ್ಯವನ್ನು ತಿಳಿಯೋ ಭರದಲ್ಲಿದ್ದ ಲಕ್ಷ್ಮೀಗೆ ಹುಚ್ಚಿಯ ಪಟ್ಟ ಕಟ್ಟಿ ಆಕೆಯನ್ನು ರಿಟ್ರೀಟ್ ಸೆಂಟರ್ ಗೆ ಸೇರುವಂತೆ ಕೂಡ ಮಾಡಿದ್ದಳು. ಕಾವೇರಿ, ಜೊತೆಗೆ ಅಲ್ಲಿಯೇ ಲಕ್ಷ್ಮೀಯನ್ನು ಕೊಲ್ಲಲು ಪ್ಲ್ಯಾನ್ ಮಾಡಿ, ಲಕ್ಷ್ಮಿಯ ಕತೆಯನ್ನೂ ಸಹ ಮುಗಿಸಿದ್ದಾಳೆ. 
 

ರಿಟ್ರೀಟ್ ಸೆಂಟರ್ ನಲ್ಲಿ ನಡೆದ ರಾಮಾಯಣ ನಾಟಕದಲ್ಲಿ ರಾವಣನ ದಹನದ ವೇಳೆ ಲಕ್ಷ್ಮೀ ರಾವಣನ ಪ್ರತಿಕೃತಿ ಒಳಗೆ ಹೋಗುವಂತೆ ಮಾಡಿ,  ಮೊದಲೇ ಪ್ರತಿಕೃತಿ ಒಳಗೆ ಸ್ಫೋಟಕ ಸಾಮಗ್ರಿಗಳನ್ನ ಇಟ್ಟು, ಅದು ಸ್ಪೋಟಗೊಳ್ಳುವಂತೆ ಮಾಡಿದ್ದಳು ಕಾವೇರಿ. ಇದೀಗ ಪ್ರತಿಕೃತಿ ದಹನವಾಗಿದ್ದು, ಅದರ ಜೊತೆಗೆ ಲಕ್ಷ್ಮೀ ಕೂಡ ಸುಟ್ಟು ಭಸ್ಮ ಆಗಿದ್ದಾಳೆ. 
 

ಲಕ್ಷ್ಮೀ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲರೂ ಶೋಕಾಚರಿಸುತ್ತಿದ್ದರೆ, ವೈಷ್ಣವ್ ಲಕ್ಷ್ಮೀ ಸತ್ತಿದ್ದಾಳೆ ಎನ್ನುವ ವಿಷ್ಯವನ್ನೆ ಅರಗಿಸಿಕೊಳ್ಳಲಾಗದೆ, ಮನೆಯಲ್ಲಿ ಪೂಜೆಗೆ ತಯಾರಿ ನಡೆಸುತ್ತಿದ್ದಾನೆ. ಇನ್ನೊಂದೆಡೆ, ಎಲ್ಲವೂ ತಾನು ಅಂದುಕೊಂಡಂತೆ ಆಯಿತು ಎಂದು ಲಕ್ಷ್ಮೀ ಕಥೆಯನ್ನು ಮುಗಿಸಿದ ಕಾವೇರಿ ಬೀಗುತ್ತಿದ್ದಾಳೆ. ಆದರೆ ವಿಷ್ಯ ಏನಂದ್ರೆ ಇಷ್ಟು ದೊಡ್ಡ ಘಟನೆ ಆದ್ರೂ ಭಾಗ್ಯಂಗೆ ಏನೂ ಗೊತ್ತೇ ಇಲ್ಲ. 
 

ಹೌದು, ಲಕ್ಷ್ಮೀ ಸಾವನ್ನಪ್ಪಿ ಈಗಾಗಲೇ ಒಂದು ದಿನ ಕಳೆದಿದೆ. ಆದ್ರೆ ಪ್ರೀತಿಯ ಲಡ್ಡು ಸತ್ತಿದ್ದು ಅಕ್ಕ ಭಾಗ್ಯಂಗೆ ಗೊತ್ತೇ ಇಲ್ಲ, ಅಕ್ಕನ ಗೋಳು ಬೇರೆ ನಡಿತಿದೆ ಅದು ಬೇರೆ ವಿಷ್ಯ, ಆದ್ರೆ, ತಂಗಿಯ ಪ್ರತಿ ನೋವು ನಲಿವಿನಲ್ಲಿ ಜೊತೆಯಾಗೋ ಅಕ್ಕನಿಗೆ ಒಂದು ಮಾತು ಹೇಳದೇ, ಅಷ್ಟೇ ಯಾಕೆ ಲಕ್ಷ್ಮೀ ದೊಡ್ಡಪ್ಪ, ದೊಡ್ಡಮ್ಮನಿಗೆ ವಿಷ್ಯವನ್ನೇ ತಿಳಿಸದೇ ಮನೆಯವರು ಸುಮ್ಮನಿರೋದು ಸರೀನಾ? ಇದು ಏನ್ ಕಥೆ ಅಂತ ಕೇಳ್ತಿದ್ದಾರೆ ವೀಕ್ಷಕರು. 
 

Latest Videos

click me!