Best Movies: ಕಥೆಯೊಳಗಡೆ ಮುಳುಗಿಸಿ, ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಅತ್ಯುತ್ತಮ ಸಿನಿಮಾಗಳಿವು!

Published : Sep 06, 2025, 03:45 PM IST

ವೀಕೆಂಡ್‌ ಬಂದಿದೆ. ನಿಮ್ಮನ್ನು ಬದಲಾಯಿಸುವ, ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಸಿನಿಮಾಗಳಿವು! ಒಟ್ಟಿನಲ್ಲಿ ‘ಕಂಟೆಂಟ್‌ ಕಿಂಗ್’‌ ಎಂದು ಸಾಬೀತುಪಡಿಸುವ ಸಿನಿಮಾಗಳಿವು.

PREV
17
ಅತ್ಯುತ್ತಮ ಸಿನಿಮಾಗಳಿವು

ಒಳ್ಳೆಯ ಕಥೆ ಇಟ್ಟುಕೊಂಡು, ನಮ್ಮನ್ನು ನಾವೇ ವಿಮರ್ಶೆ ಮಾಡಿಕೊಳ್ಳುವ ಟಾಪ್‌ ಸಿನಿಮಾಗಳು ಇಲ್ಲಿವೆ

27
ಕಪೂರ್ & ಸನ್ಸ್ (Kapoor & Sons, 2016)

'ಕಪೂರ್ ಆಂಡ್ ಸನ್ಸ್' ಕುಟುಂಬದ ಸಂಬಂಧಗಳು, ರಹಸ್ಯಗಳು, ಭಾವನೆಗಳ ಬಗ್ಗೆ ಇರುವ ಆಧುನಿಕ ಕಾಲದ ಸಿನಿಮಾ. ಶಕುನ್ ಬತ್ರಾ ನಿರ್ದೇಶನದ ಈ ಸಿನಿಮಾದಲ್ಲಿ ಫವಾದ್ ಖಾನ್, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರ ನಟಿಸಿದ್ದಾರೆ. ಕುಟುಂಬದ ಒಡಕುಗಳು, ಪ್ರೀತಿಯ ಸಂಕೀರ್ಣತೆ, ಸ್ವ ವಿಮರ್ಶೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾ ಹಾಡುಗಳು, ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.

Amazon, Netflix, 

37
ಸಲಾಮ್ ವೆಂಕಿ (Salaam Venky, 2022)

'ಸಲಾಮ್ ವೆಂಕಿ' ಒಂದು ನೈಜ ಘಟನೆಯಿಂದ ಪ್ರೇರಿತವಾದ ಸಿನಿಮಾವಾಗಿದೆ. ಡಕ್ಟೇನ್ ಮಸ್ಕುಲರ್ ಡಿಸ್ಟ್ರಾಫಿಯಿಂದ ಬಳಲುತ್ತಿರುವ ಒಬ್ಬ ಯುವಕನ ಕಥೆ ಇಲ್ಲಿದೆ. ರೇವತಿ ನಿರ್ದೇಶನದ ಈ ಸಿನಿಮಾದಲ್ಲಿ ಕಾಜೋಲ್, ವಿಶಾಲ್ ಜೇಠ್ವಾ ನಟಿಸಿದ್ದಾರೆ. ಓರ್ವ ತಾಯಿಯು, ತನ್ನ ಮಗನ ಕೊನೆ ಆಸೆಯನ್ನು ಈಡೇರಿಸಲು ಏನು ಮಾಡುತ್ತಾಳೆ ಎನ್ನೋದು ಈ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಹಾಡುಗಳು ಹೈಲೈಟ್‌ ಆಗಿವೆ.

zee5 

47
ದಿ ಲಂಚ್‌ಬಾಕ್ಸ್ (The Lunchbox, 2013)

'ದಿ ಲಂಚ್‌ಬಾಕ್ಸ್' ಒಂದು ಅಸಾಧಾರಣ ಪ್ರೀತಿಯ ಕಥೆ ಇದೆ. ಮುಂಬೈನ ಲಂಚ್‌ ಬಾಕ್ಸ್‌ ಎಡವಟ್ಟಿನಿಂದ ಈ ಸಿನಿಮಾ ಕಥೆ ಆರಂಭವಾಗುತ್ತದೆ. ರಿತೇಶ್ ಬತ್ರಾ ನಿರ್ದೇಶನದ ಈ ಸಿನಿಮಾದಲ್ಲಿ ಇರ್ಫಾನ್ ಖಾನ್, ನಿಮ್ರತ್ ಕೌರ್, ನವಾಜುದ್ದೀನ್ ಸಿದ್ದಿಕಿ ನಟಿಸಿದ್ದಾರೆ. ಈ ಸಿನಿಮಾವು ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಮರ್ಶಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿದೆ. ಇದರ ಸೂಕ್ಷ್ಮವಾದ ಕಥಾನಕ, ಭಾವನಾತ್ಮಕ ಅಭಿನಯ, ಮುಂಬೈನ ಜೀವನವನ್ನು ಇಲ್ಲಿ ತೋರಿಸಲಾಗಿದೆ.

Netflix, Prime Video

57
ಕ್ವಾರಿಬ್ ಕ್ವಾರಿಬ್ ಸಿಂಗಲ್ (Qarib Qarib Singlle, 2017)

'ಕ್ವಾರಿಬ್ ಕ್ವಾರಿಬ್ ಸಿಂಗಲ್' ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಇರ್ಫಾನ್ ಖಾನ್, ಪಾರ್ವತಿ ತಿರುವೋತು ಸಿನಿಮಾವಿದು. ಒಂದು ಅನಿರೀಕ್ಷಿತ ಲವ್‌ ಶುರುವಾಗುವುದು. ಒಬ್ಬ ವಿಧವೆ ತನ್ನ ಜೀವನದಲ್ಲಿ ಹೊಸ ಆರಂಭಕ್ಕಾಗಿ ಡೇಟಿಂಗ್ ವೆಬ್‌ಸೈಟ್‌ನಲ್ಲಿ ಓರ್ವ ವಿಚಿತ್ರ ವ್ಯಕ್ತಿಯನ್ನು ಭೇಟಿಯಾಗುತ್ತಾಳೆ. ಆ ಕುರಿತು ಸಿನಿಮಾವಿದೆ. ತನುಜಾ ಚಂದ್ರಾ ನಿರ್ದೇಶನದ ಈ ಸಿನಿಮಾದಲ್ಲಿ ಇರ್ಫಾನ್ ಖಾನ್‌, ಪಾರ್ವತಿಯ ನೈಜ ಅಭಿನಯ ಹೈಲೈಟ್‌ ಆಗಿದೆ.

zee5

67
ಮಸಾನ್ (Masaan, 2015)

'ಮಸಾನ್' ಒಂದು ಸ್ವತಂತ್ರ ಸಿನಿಮಾವಾಗಿದೆ. ವಾರಾಣಸಿಯ ಜೀವನದ ಬಗ್ಗೆ ಈ ಸಿನಿಮಾವಿದೆ. ಪ್ರೀತಿ, ಬ್ರೇಕಪ್‌, ಸಾಮಾಜಿಕ ಕಳಂಕದ ಕಥೆ ಇದೆ. ನೀರಜ್ ಘಾಯ್ವಾನ್ ನಿರ್ದೇಶನದ ಈ ಸಿನಿಮಾದಲ್ಲಿ ರಿಚಾ ಚಡ್ಡಾ, ವಿಕ್ಕಿ ಕೌಶಲ್, ಶ್ವೇತಾ ತ್ರಿಪಾಠಿ ನಟಿಸಿದ್ದಾರೆ. ಈ ಸಿನಿಮಾವು ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಗಂಗಾತೀರದ ಜೀವನದ ಸೊಗಸು, ದುಃಖ ಇಲ್ಲಿದೆ.

JioHotstrar, Amazon 

77
ಯುವರ್ಸ್ ಟ್ರೂಲಿ (Yours Truly, 2018)

'ಯುವರ್ಸ್ ಟ್ರೂಲಿ' ಒಂದು ಎಮೋಶನಲ್‌ ಸಿನಿಮಾ. ಲವ್‌, ಒಂಟಿತನ, ಜೀವನದ ಸರಳ ವಿಷಯಗಳ ಬಗ್ಗೆಯೇ ಇದೆ. ಸೋನಾಲಿ ಬೇಂದ್ರೆ, ಸುಮಿತ್ ವ್ಯಾಸ್ ನಟಿಸಿದ್ದಾರೆ. ಮಧ್ಯವಯಸ್ಕ ಮಹಿಳೆಯ ಕಥೆಯ ಬಗ್ಗೆ ಈ ಸಿನಿಮಾವಿದೆ. ಅವಳು ತನ್ನ ದೈನಂದಿನ ಜೀವನದಲ್ಲಿ ಸಂತೋಷವನ್ನು ಕಾಣುತ್ತಾಳೆ. ಈ ಸಿನಿಮಾದ ಸರಳ ಕಥೆ, ನೈಜ ಅಭಿನಯವು ಎಲ್ಲ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಇದು ಜೀವನದ ಸಣ್ಣ ಸಣ್ಣ ಕ್ಷಣಗಳ ಮಹತ್ವವನ್ನು ಒತ್ತಿಹೇಳುತ್ತದೆ.

Zee5

Read more Photos on
click me!

Recommended Stories