ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 7ರ ಕಿಶನ್ ಬಿಳಗಲಿ ಹೊಸ ಡ್ಯಾನ್ಸ್ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಳೆಯ ಪ್ರೇಮಗೀತೆಗೆ ಇಬ್ಬರೂ ಜೊತೆಯಾಗಿ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ನನ್ನ ನಿನ್ನ ಸ್ನೇಹ ಬಂಧನವಿದು, ಮರೆಯಲಾಗದು, ಅಳಿಸಲಾಗದೆಂದಿಗೂ ಎಂಬ ಹಾಡಿಗೆ ಮಸ್ತ್ ಆಗಿ ರೀಲ್ಸ್ ಮಾಡಿದ್ದಾರೆ ನಮ್ರತಾ ಹಾಗೂ ಕಿಶನ್. ಎವರ್ಗ್ರೀನ್ ರೊಮ್ಯಾಂಟಿಕ್ ಹಾಡಿಗೆ ಈ ಜೋಡಿಯ ಡ್ಯಾನ್ಸ್ ಸೂಪರ್ ಆಗಿ ಮೂಡಿ ಬಂದಿದೆ. ನಟಿ ಸೀರೆಯುಟ್ಟು ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
ನಮ್ರತಾ ಗೌಡ ಮತ್ತು ಕಿಶನ್ ಬಿಳಗಲಿ ಸಹಭಾಗಿತ್ವದ ಈ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರೂ ತಮ್ಮ ಡ್ಯಾನ್ಸಿಂಗ್ ಸ್ಕಿಲ್ ಮೂಲಕ ಅದ್ಭುತವಾಗಿ, ರೋಮಾಂಚನಕಾರಿಯಾಗಿ ನೃತ್ಯ ಮಾಡಿದ್ದಾರೆ. ಇವರಿಬ್ಬರ ಡ್ಯಾನ್ಸ್ ವಿಡಿಯೋಗೆ ಎಂದಿನಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾಮೆಂಟ್‌ಗಳು ಬಂದಿವೆ.
ನಮ್ರತಾ ಸ್ಲಿವ್ಲೆಸ್ ಬ್ಲೌಸ್ ಹಾಗೂ ಆಕರ್ಷಕವಾದ ಟ್ರಾನ್ಸ್ಪರೆಂಟ್ ಸೀರೆಯುಟ್ಟಿದ್ದು ಮುದ್ದಾಗಿ ಕಾಣಿಸಿದ್ದು, ಸುಂದರವಾದ ಝುಮುಕಿ ಕೂಡಾ ಧರಿಸಿದ್ದರು. ಜೊತೆಗೆ ಹಣೆಗೆ ಪುಟ್ಟ ಬಿಂದಿಯನ್ನು ಇಟ್ಟಿದ್ದರು. ಕಿಶನ್ ಅವರು ವೈಟ್ & ವೈಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇವರಿಬ್ಬರ ಡ್ಯಾನ್ಸ್ ನೋಡಿದ ನೆಟ್ಟಿಗರು, ಅಕ್ಕ ತಮ್ಮನ ಡ್ಯಾನ್ಸ್ ಸೂಪರ್ ಎಂದಿದ್ದಾರೆ. ಸ್ನೇಹ ಇರಲಿ, ಸ್ನೇಹಿತ್ ಎಲ್ಲಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಈ ತರ ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ ಸರ್ ಎಂದಿದ್ದಾರೆ ಇನ್ನೊಬ್ಬರು. ಸ್ನೇಹಿತ್ ಮೂಲೆಯಲ್ಲಿ ಅಳುತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗ.
ಮೊದಲೇ ಗೊತ್ತಿರುವಂತೆ ಕಿಶನ್ ಉತ್ತಮ ಡ್ಯಾನ್ಸರ್. ಅವರ ಸೋಷಿಯಲ್ ಮೀಡಿಯಾದಲ್ಲೂ ಆ ಡ್ಯಾನ್ಸ್ ಗಮ್ಮತ್ತು ಕಾಣಿಸುತ್ತಾ ಇರುತ್ತದೆ. ಒಳ್ಳೊಳ್ಳೆ ಸ್ಟೆಪ್ಸ್ ಹಾಕಿ ಮನರಂಜನೆ ನೀಡುತ್ತಿರುತ್ತಾರೆ. ಇದೀಗ ನಮ್ರತಾ ಜೊತೆಗೆ ಮತ್ತೊಂದು ಡ್ಯಾನ್ಸ್ ಮಾಡಿದ್ದಾರೆ.
ನಟನೆಯ ಜೊತೆ ನಮ್ರತಾ ಗೌಡ ಮಾಡೆಲಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ನಮ್ರತಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.