ಹಾರರ್ ಚಿತ್ರಗಳಲ್ಲಿ ಸಿನಿ ರಸಿಕರನ್ನು ಬೆಚ್ಚಿ ಬೀಳಿಸಿದ ಆಸ್ಟ್ರೇಲಿಯಾ ನಟಿ ಮೆಗನ್ ಸ್ಕೈ ಬ್ಲಾಂಕೆಡಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಿಕಿನಿ ಮೂಲಕವೇ ಹೆಚ್ಚು ಸದ್ದು ಮಾಡಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ ಹಾಲಿವುಡ್ ನಟಿ ಮೆಗನ್ ಸ್ಕೈ ಬಂಧನ ಭಾರಿ ಸಂಚಲನ ಸೃಷ್ಟಿಸಿತ್ತು. ಅಪ್ರಾಪ್ತ ಬಾಲಕರನ್ನು ಲೈಂಗಿಕ ಕ್ರಿಯೆಗೆ ಬಳಿಸಿಕೊಂಡ ಆರೋಪದಡಿ ಮೆಘನ್ ಸ್ಕೈ ಅರೆಸ್ಟ್ ಆಗಿದ್ದರು.
34 ವರ್ಷದ ನಟಿ ಸೆಕ್ಸ್‌ಗಾಗಿ 16 ವರ್ಷದ ಬಾಲಕನ ಬಳಸಿಕೊಂಡಿದ್ದಾರೆ ಅನ್ನೋ ಗಂಭೀರ ಆರೋಪ ಈಕೆಯ ಮೇಲಿದೆ. ಕೆಲ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ನಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಅರೆಸ್ಟ್ ಬಳಿಕ ನಟಿ ಫೋನ್ ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಅಪ್ರಾಪ್ತ ಬಾಲಕರ ಜೊತೆಗಿನ ಸೆಕ್ಸ್ ಚಾಟ್ ಸೇರಿದಂತೆ ಹಲವು ಫೋಟೋ ಹಾಗೂ ವಿಡಿಯೋಗಳು ಲಭ್ಯವಾಗಿತ್ತು.
ವಿಚಾರಣೆ ಬಳಿಕ ಪೊಲೀಸರು ನಟಿ ಮೇಲೆ ಮಕ್ಕಳ ಮೇಲೆ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ ನಟಿ ಸುದೀರ್ಘ ದಿನಗಳ ಕಾಲ ಜೈಲಿನಲ್ಲೇ ಕಳೆಯಬೇಕಾಗಿ ಬಂದಿತ್ತು.
ಜಾಮೀನು ಮೂಲಕ ಬಿಡುಗಡೆಯಾಗಿರುವ ನಟಿ ಇದೀಗ ಆಡಿಲೇಡ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದಾರೆ. ಆರೋಪದ ಕುರಿತು ಹಲವು ಪ್ರಶ್ನೆಗಳನ್ನು ಎದುರಿಸಿದ್ದಾರೆ.
ಜುಲೈ 2021ರಿಂದ ನವೆಂಬರ್ 2023ರ ವರೆಗೆ ನಟಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಕೋರ್ಟ್ ಮುಂದೆ ಕೆಲ ಸಾಕ್ಷಿಗಳನ್ನು ಪ್ರಸ್ತುತಪಡಿಸಿದ್ದಾರೆ.
ನಟಿ ಮೇಲಿನ ಮಕ್ಕಳ ಲೈಂಗಿಕ ದೌರ್ಜನ್ಯ ಆರೋಪದ ಕುರಿತ ಈ ಪ್ರಕರಣವನ್ನು ಆಡಿಲೇಡ್ ಕೋರ್ಟ್ ಮೇ 1ಕ್ಕೆ ಮುಂದೂಡಿದೆ. ಕೋರ್ಟ್‌ನಿಂದ ಹೊರಬಂದ ನಟಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲ ನಿರಾಕರಿಸಿದ್ದಾರೆ.