ರಿಯಲ್ ಲೈಫಲ್ಲೂ ಸತಿ ಪತಿಗಳಾದ ಗಟ್ಟಿಮೇಳ ಸೀರಿಯಲ್ ಜೋಡಿ ಕಾಂತ -ಮೀನಾಕ್ಷಿ

First Published | Feb 19, 2024, 4:54 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್ ಗಟ್ಟಿಮೇಳದ ಕಾಂತಾ ಖ್ಯಾತಿಯ ರವಿಚಂದ್ರ ಟಾಮಿ ತಮ್ಮ ರೀಲ್ ಜೋಡಿಯೊಂದಿಗೆ ರಿಯಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ(Gattimela) ಸೀರಿಯಲ್ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಸೀರಿಯಲ್ ನ ಎಲ್ಲಾ ಪ್ರಮುಖ ಪಾತ್ರಗಳಿಂದ ಜನರಿಗೆ ಹೆಚ್ಚು ಹಿಡಿಸಿದ, ನಗಿಸಿದ ಪಾತ್ರ ಎಂದರೆ ಕಾಂತಾ ಪಾತ್ರ. 
 

ವೇದಾಂತ್ ವಷಿಷ್ಠ ಪಿಎ ಆಗಿ ತಮ್ಮ ಪೆದ್ದು ಪೆದ್ದು ಮಾತು, ಆಕ್ಷನ್ ಗಳಿಂದ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಜನಪ್ರಿಯ ನಟ ಕಾಂತಾ ಆಲೀಯಾಸ್ ರವಿಚಂದ್ರ ಅವರು ಗಟ್ಟಿಮೇಳದ ಕೊನೆಯ ಎಪಿಸೋಡ್ ನಲ್ಲಿ ಸೀರಿಯಲ್ (serial) ಪೂರ್ತಿ ಮೀನಾಕ್ಷಿ ಮೀನಾಕ್ಷಿ ಎನ್ನುತ್ತಿದ್ದ ತಮ್ಮ ಪ್ರೇಯಸಿ ಜೊತೆ ಮದುವೆಯಾಗಿದ್ದರು. 
 

Tap to resize

ಇದೀಗ ಅದೇ ಮೀನಾಕ್ಷಿ ಜೊತೆ ರಿಯಲ್ ಲೈಫಲ್ಲೂ ಕಾಂತಾ ಫೆಬ್ರುವರಿ 18 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಟ್ಟಿಮೇಳದ ಕೊನೆಯ ಎಪಿಸೋಡ್ ನಲ್ಲಿ ಮೀನಾಕ್ಷಿ ಆಗಿ ನಟಿಸಿದ್ದು, ಬೇರಾರು ಅಲ್ಲ ರವಿಚಂದ್ರ ಅವರ ಗೆಳತಿ ಹರಿಣಿ (Harini Sonu). 
 

ಇದೀಗ ತಮ್ಮ ಬಹುದಿನಗಳ ಗೆಳತಿ, ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಹರಿಣಿ ಸೋನು ಜೊತೆ ನಿನ್ನೆ ನಡೆದ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ಗಟ್ಟಿಮೇಳದ ಸಹನಟರು, ಅಭಿಮಾನಿಗಳು ಶುಭ ಕೋರಿದ್ದಾರೆ. 
 

ಸದ್ಯ ಸೋಶಿಯಲ್ ಮೀಡೀಯಾದಲ್ಲಿ ರವಿಚಂದ್ರ ಅವರ ಮದುವೆಯ ವಿಡೀಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಮದುವೆ ಸಮಾರಂಭಕ್ಕೆ ಗಟ್ಟಿಮೇಳ ಸೀರಿಯಲ್ ನ ಸಹ ನಟರಾಗಿದ್ದ ಅಭಿದಾಸ್, ಶರಣ್ಯ ಶೆಟ್ಟಿ (Sharanya Shetty), ಸನತ್, ಗಿರಿಶ್ ಬೆಟ್ಟಪ್ಪ ಆಗಮಿಸಿ ಶುಭ ಕೋರಿದ್ದರು. 
 

ತಮ್ಮ ಮದುವೆ ಆರತಕ್ಷತೆ ಸಮಾರಂಭದಲ್ಲಿ ಕಾಂತ (Ravichandra) ಕಪ್ಪು ಬಣ್ಣದ ಪ್ಯಾಂಟ್, ಶರ್ಟ್ ಜೊತೆಗೆ, ಬ್ಲ್ಯಾಕ್ ಮೇಲೆ ಸಿಲ್ವರ್ ವರ್ಕ್ ಇರುವ ಅದ್ಧೂರಿ ಓವರ್ ಕೋಟ್, ಬ್ಲೇಜರ್ ಧರಿಸಿದ್ದರೆ, ಅವರ ಸಂಗಾತಿ ಹರಿಣಿ ಗುಲಾಬಿ ಬಣ್ಣದ ಹಾಫ್ ಶೋಲ್ಡರ್ ಲೆಹೆಂಗಾದಲ್ಲಿ ಮಿಂಚುತ್ತಿದ್ದರು. 
 

ಸೀರಿಯಲ್ ನಲ್ಲಿ ವಿಕ್ರಾಂತ್ ಆಗಿ ನಟಿಸಿದ್ದ ಅಭಿದಾಸ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹ್ಯಾಪಿ ಮ್ಯಾರಿಡ್ ಲೈಫ್ ಕಾಂತಾ, ಮೀನಾಕ್ಷಿ ಎಂದು ಬರೆಯುತ್ತಾ, ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿದ, ಹಾರ ಬದಲಾಯಿಸಿದ ವಿಡೀಯೋ ಸೇರಿ, ಮದುವೆ ಸಮಾರಂಭದ ಸುಂದರ ಕ್ಷಣಗಳನ್ನು ಸೆರೆ ಹಿಡಿದು ಹಂಚಿಕೊಂಡಿದ್ದಾರೆ. 
 

Latest Videos

click me!