ಗಿಲ್ಲಿ ನಟ - ರಿಷಾ ಗೌಡ ಜಗಳಕ್ಕೆ ಕಾರಣವೇನು? ಕ್ಯಾಪ್ಟನ್ ಮುಂದೆ ಅಸಲಿ ವಿಷಯ ಬಿಚ್ಚಿಟ್ಟ ಕಾವ್ಯಾ

Published : Nov 03, 2025, 10:01 PM IST

ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ಜಗಳಕ್ಕೆ ಬಕೆಟ್ ಬಿಸಿನೀರು ಕಾರಣವಾಗಿದೆ. ರಿಷಾ ಸ್ನಾನಕ್ಕೆ ಹೋದಾಗ ಗಿಲ್ಲಿ ನಟ ಆಕೆಯ ಬಟ್ಟೆಗಳನ್ನು ಬಾತ್‌ರೂಮ್‌ಗೆ ಎಸೆದಿದ್ದು, ಈ ಸಂಪೂರ್ಣ ಘಟನೆಯನ್ನು ಕಾವ್ಯಾ ಅವರು ಕ್ಯಾಪ್ಟನ್ ಧನುಷ್ ಮುಂದೆ ವಿವರಿಸಿದ್ದಾರೆ. 

PREV
15
ಇಬ್ಬರ ಜಗಳಕ್ಕೆ ಕಾರಣ ಏನು?

ಇಡೀ ಸೋಶಿಯಲ್ ಮೀಡಿಯಾದಲ್ಲಿಂದು ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ಜಗಳ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಪ್ರೋಮೋದಲ್ಲಿ ಗಿಲ್ಲಿ ನಟನ ಮೇಲೆ ರಿಷಾ ಹಲ್ಲೆ ನಡೆಸಿರುವ ರೀತಿಯಲ್ಲಿ ತೋರಿಸಲಾಗಿತ್ತು. ಪ್ರೋಮೋ ನೋಡಿದ ನೆಟ್ಟಿಗರು ರಿಷಾ ಗೌಡ ಅವರನ್ನು ಮನೆಯಿಂದ ಹೊರಗೆ ಹಾಕಬೇಕೆಂದು ನೆಟ್ಟಗರು ಕಮೆಂಟ್ ಮಾಡಲು ಆರಂಭಿಸಿದ್ದರು.

25
ವಿಡಿಯೋ ಕ್ಲಿಪ್ ವೈರಲ್

ಗಿಲ್ಲಿ ನಟ ಮತ್ತು ರಿಷಾ ಮಧ್ಯೆ ಜಗಳ ಆಗಿದ್ದೇಕೆ ಎಂಬುದನ್ನು ಕ್ಯಾಪ್ಟನ್ ಧನುಷ್ ಮುಂದೆ ಕಾವ್ಯಾ ವಿವರಿಸಿದ್ದಾರೆ. ಕಾವ್ಯಾ ಮಾತುಗಳಲ್ಲಿ ತಪ್ಪು ಯಾರದ್ದು ಎಂಬ ತೀರ್ಮಾನಕ್ಕೆ ಬರಬಹುದಾಗಿದೆ. ಲೈವ್‌ ಫೂಟೇಜ್‌ನಲ್ಲಿ ಈ ವಿಡಿಯೋ ಸೆರೆಯಾಗಿದೆ. ಸದ್ಯ ಕಾವ್ಯಾ ಹೇಳಿಕೆ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ.

35
ಕಾವ್ಯಾ ಹೇಳಿದ್ದೇನು?

ರಿಷಾ ಗೌಡ ಸ್ನಾನಕ್ಕೆ ಹೋಗುವ ಮುನ್ನ ಗಿಲ್ಲಿ ನಟ ಬಕೆಟ್ ನೀಡಿ ಬಿಸಿನೀರು ಕೇಳಿದರು. ಬಕೆಟ್ ತುಂಬಿದ ಬಳಿಕ ರಿಷಾ ಬಾತ್‌ರೂಮ್ ಡೋರ್ ಹಾಕಿಕೊಂಡರು. ಬಕೆಟ್ ಕೊಡುವಂತೆ ಕೇಳಿದರೂ ಕೊಡದೇ ಸ್ವಲ್ಪ ಸಮಯ ನೀಡುವಂತೆ ಕೇಳುತ್ತಾರೆ. ಇದರಿಂದ ಕೋಪಗೊಂಡ ಗಿಲ್ಲಿ ನಟ ಬೆಡ್‌ರೂಮ್‌ನಲ್ಲಿರುವ ರಿಷಾ ಬಟ್ಟೆಗಳನ್ನು ತೆಗೆದುಕೊಂಡು ಬಾತ್‌ರೂಮ್‌ನಲ್ಲಿ ಹಾಕಿದರು ಎಂದು ಕಾವ್ಯಾ ಹೇಳಿದರು.

45
ಪರಿಸ್ಥಿತಿ ತಿಳಿಗೊಳಿಸಿದ ರಕ್ಷಿತಾ ಶೆಟ್ಟಿ

ಈ ಎಲ್ಲಾ ಘಟನೆ ನಡೆಯುವ ಸಂದರ್ಭದಲ್ಲಿ ಅಲ್ಲಿಯೇ ರಕ್ಷಿತಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಇದ್ದರು. ಗಿಲ್ಲಿ ನಟ ಬಟ್ಟೆಗಳನ್ನು ತಂದಿಡುತ್ತಿದ್ದಂತೆ ಇದನ್ನು ದೊಡ್ಡ ವಿಷಯವನ್ನಾಗಿ ಮಾಡ್ತಾರೆ ಎಂದು ರಕ್ಷಿತಾ ಶೆಟ್ಟಿ ಅಂದಾಜಿಸಿದ್ದರು. ರಿಷಾ ಮತ್ತು ಗಿಲ್ಲಿ ನಟ ಜಗಳ ಹೊಡೆದಾಟಕ್ಕೆ ಮುಂದಾಗುತ್ತಿದ್ದಂತೆ ರಕ್ಷಿತಾ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: Bigg Boss ಆಫರ್​ ರಿಜೆಕ್ಟ್​ ಮಾಡಿದ್ದೇಕೆ ನಟಿ ಜ್ಯೋತಿ ರೈ? ಶಾಕಿಂಗ್​ ಹೇಳಿಕೆ ಕೊಟ್ಟ ಹಾಟ್​ ಬ್ಯೂಟಿ

55
ಮೌನಕ್ಕೆ ಜಾರಿದ ಕ್ಯಾಪ್ಟನ್ ಧನುಷ್

ಮೊದಲೇ ಬಟ್ಟೆ ಇಲ್ಲ ಅಂತ ರಿಷಾ ಚಿಂತೆಯಲ್ಲಿದ್ದಾಳೆ. ಇರೋ ನಾಲ್ಕು ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಾತ್‌ರೂಮ್‌ನಲ್ಲಿಟ್ಟರೆ ಹೇಗೆ ಎಂದು ಜಾನ್ವಿ ಹೇಳುತ್ತಾರೆ. ಇಷ್ಟೆಲ್ಲಾ ತಮ್ಮ ಮುಂದೆಯೇ ನಡೆಯುತ್ತಿದ್ರೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಧನುಷ್ ನಿಂತಿದ್ದರು. ಮತ್ತೊಂದೆಡೆ ಗಿಲ್ಲಿ ನಟ ವರ್ತನೆ ಅತಿಯಾಯ್ತು ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್​ ನಡುವೆಯೇ ಅಚ್ಚರಿಯ ವಿಷಯ ರಿವೀಲ್​ ಮಾಡಿದ ಅಪ್ಪ

Read more Photos on
click me!

Recommended Stories