Bigg Boss Kannada : ಬಿಗ್ ಬಾಸ್ ಸ್ಪರ್ಧಿಗಳು ಈಗ ಫಿನಾಲೆಗೆ ಸಿದ್ಧತೆ ನಡೆಸ್ತಿದ್ದಾರೆ. ಫಿನಾಲೆ ಸ್ಪರ್ಧಿಗಳಿಗೆ ಹೊರಗಿನಿಂದ ಹೊಸ ಬಟ್ಟೆಗಳು ರವಾನೆ ಆಗ್ತಿವೆ. ಮಲ್ಲಮ್ಮ ಕೂಡ ರಕ್ಷಿತಾಗೆ ಬಟ್ಟೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ ಅವರು ಮಾಡಿದ್ದೇನು ಗೊತ್ತಾ?
ಬಿಗ್ ಬಾಸ್ 12ರ ಕಪ್ ಹಿಡಿಯೋಕೆ ಸ್ಪರ್ಧಿಗಳು ಕಾತರರಾಗಿದ್ದಾರೆ. ಯಾರಿಗೆ ಕಪ್ ಎನ್ನುವ ಪ್ರಶ್ನೆಗೆ ಅತೀ ಶೀಘ್ರದಲ್ಲೇ ಉತ್ತರ ಸಿಗಲಿದೆ. ಬಿಗ್ ಬಾಸ್ ಫಿನಾಲೆಗೆ ಇನ್ನೊಂದೇ ದಿನ ಬಾಕಿ ಇದೆ. ಭಾನುವಾರ ಕಪ್ ಗೆದ್ದ ಸ್ಪರ್ಧಿ ಯಾರು ಎಂಬುದು ಬಹಿರಂಗವಾಗಲಿದೆ.
27
ಸಿಂಪಲ್ ಹುಡುಗಿ ರಕ್ಷಿತಾ
ಬಿಗ್ ಬಾಸ್ ಮನೆಯಲ್ಲಿ ಅತಿ ಸಿಂಪಲ್ ಹುಡುಗಿ ಅಂದ್ರೆ ರಕ್ಷಿತಾ. ಮಂಗಳೂರಿನ ರಕ್ಷಿತಾ ಮೇಕಪ್ ಮಾಡಿದ್ದೇ ಬಹಳ ಅಪರೂಪ. ಸ್ನಾನ ಮಾಡದೆ ಹೇಗ್ ಹೇಗೋ ಇರ್ತಾರೆ ಎನ್ನುವ ಆರೋಪ ಅವರ ಮೇಲಿದೆ. ರಕ್ಷಿತಾ ಅಮ್ಮ ಬಂದು ಹೋದ್ಮೇಲೆ, ಮಗಳಿಗೆ ಬುದ್ದಿ ಹೇಳಿದ್ಮೇಲೆ ರಕ್ಷಿತಾ ಸ್ವಲ್ಪ ಬದಲಾಗಿದ್ದಾರೆ. ರಕ್ಷಿತಾ ಅವರಿಗೆ ಮೇಕಪ್, ಡ್ರೆಸ್ ಮೇಲೆ ಇಂಟರೆಸ್ಟಿಂಗ್ ಬಂದಂಗಿದೆ.
37
ಬದಲಾಯ್ತು ಡ್ರೆಸ್
ರಕ್ಷಿತಾ, 14, 15ನೇ ವಾರಕ್ಕೆ ಕಾಲಿಡುತ್ತಿದ್ದಂಗೆ ಅವರ ಡ್ರೆಸ್ ಕಲೆಕ್ಷನ್ ಕೂಡ ಜಾಸ್ತಿ ಆಗಿದೆ. ಹಿಂದೆ ಅದೇ ಒಂದೋ ಎರಡೋ ಡ್ರೆಸ್ ನಲ್ಲಿ ರಕ್ಷಿತಾ ಕಾಣಿಸಿಕೊಳ್ತಿದ್ದರು. ವೀಕೆಂಡ್ ನಲ್ಲಿ ಮಾತ್ರ ರಕ್ಷಿತಾ ಅವರನ್ನು ಹೊಸ ರೂಪದಲ್ಲಿ ನೋಡ್ಬಹುದಿತ್ತು. ಆದ್ರೆ ಇತ್ತೀಚಿಗೆ ಪ್ರತಿ ದಿನ ರಕ್ಷಿತಾ ಹೊಸ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ.
ರಕ್ಷಿತಾ ಹಾಗೂ ಮಲ್ಲಮ್ಮ ಬಾಡಿಂಗ್ ಬಿಗ್ ಬಾಸ್ ನಲ್ಲಿ ಚೆನ್ನಾಗಿತ್ತು. ಮೊಮ್ಮಗಳು ಅಂತಾನೆ ಮಲ್ಲಮ್ಮ ರಕ್ಷಿತಾ ಅವರನ್ನು ನೋಡ್ತಾರೆ. ಈಗ ರಕ್ಷಿತಾ ಫಿನಾಲೆ ತಲುಪಿರೋದು ಮಲ್ಲಮ್ಮ ಖುಷಿ ಡಬಲ್ ಮಾಡಿದೆ. ಬಿಗ್ ಬಾಸ್ ಮನೆಗೆ ವಾಪಸ್ ಬಂದಿದ್ದ ಮಲ್ಲಮ್ಮ, ರಕ್ಷಿತಾರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಈಗ ಅವರ ಡ್ರೆಸ್ ತಾವೇ ಸೆಲೆಕ್ಟ್ ಮಾಡ್ತಿದ್ದಾರೆ.
57
ರಕ್ಷಿತಾ ಡ್ರೆಸ್ ನಲ್ಲಿ ಮಲ್ಲಮ್ಮ
ಮಲ್ಲಮ್ಮ ಫ್ಯಾಷನ್ ಡಿಸೈನರ್ ಪಲ್ಲವಿ ಜೊತೆ ಕೆಲ್ಸ ಮಾಡ್ತಾರೆ. ಪಲ್ಲವಿಯವರು, ರಕ್ಷಿತಾಗಾಗಿ ಡ್ರೆಸ್ ಡಿಸೈನ್ ಮಾಡಿದ್ದಾರೆ. ರಕ್ಷಿತಾಗೆ ಡ್ರೆಸ್ ಕಳುಹಿಸುವ ಮೊದಲೇ ಮಲ್ಲಮ್ಮ ಅದನ್ನು ಹಾಕಿ ನೋಡಿದ್ದಾರೆ. ಮೊಮ್ಮಗಳಿಗೆ ಡ್ರೆಸ್ ಸರಿಯಾಗುತ್ತಾ ಅನ್ನೋದನ್ನು ನಾನೇ ಪರೀಕ್ಷೆ ಮಾಡ್ತೇನೆ ಅಂತ ಮಲ್ಲಮ್ಮ, ರಕ್ಷಿತಾಗೆ ಸ್ಟಿಚ್ ಮಾಡಿದ್ದ ಡ್ರೆಸ್ ಹಾಕಿದ್ದಾರೆ.
67
ಹೊಸ ಡ್ರೆಸ್ ಧರಿಸಿ ಮಲ್ಲಮ್ಮ ಡಾನ್ಸ್
ಪಲ್ಲವಿ, ಮಲ್ಲಮ್ಮ ಇನ್ಸ್ಟಾಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಕ್ಷಿತಾಗಾಗಿ ಡ್ರೆಸ್ ಸ್ಟಿಚ್ ಮಾಡಿದ್ವಿ. ಆದ್ರೆ ಮಲ್ಲಮ್ಮ ತಾನು ಮೊದಲು ಹಾಕಿ ನೋಡೋದಾಗಿ ಹೇಳಿದ್ರು. ಮಲ್ಲಮ್ಮ ಅವರಿಗೆ ಡ್ರೆಸ್ ಚೆನ್ನಾಗಿ ಕಾಣ್ತಿದೆ. ಅಂದ್ರೆ ರಕ್ಷಿತಾಗೂ ಡ್ರೆಸ್ ಚೆನ್ನಾಗಿ ಕಾಣೋದ್ರಲ್ಲಿ ಅನುಮಾನ ಇಲ್ಲ. ಇನ್ಮುಂದೆ ನಮ್ಮ ಮಾಡೆಲ್ ಮಲ್ಲಮ್ಮ ಅಂತ ಪಲ್ಲವಿ ಹೇಳಿದ್ದಾರೆ. ಡ್ರೆಸ್ ಧರಿಸಿ ಮಲ್ಲಮ್ಮ ಖುಷಿಯಲ್ಲಿ ಕುಣಿಯುತ್ತಿದ್ದಾರೆ.
77
ಅಭಿಮಾನಿಗಳ ಫೈಟ್
ಬಿಗ್ ಬಾಸ್ ಫಿನಾಲೆ ವೀಕ್ ಮಧ್ಯದಲ್ಲಿ ಧ್ರುವಂತ್ ಮನೆಯಿಂದ ಹೊರಗೆ ಹೋಗಿದ್ದಾರೆ. ಧನುಷ್, ರಕ್ಷಿತಾ, ಅಶ್ವಿನಿ, ಗಿಲ್ಲಿ, ರಘು ಹಾಗೂ ಕಾವ್ಯಾ ಫಿನಾಲೆ ತಲುಪಿದ್ದಾರೆ. ಈ ಆರು ಮಂದಿಯಲ್ಲಿ ಯಾರಿಗೆ ಕಪ್ ಎನ್ನುವ ಕುತೂಹಲ ಬಿಗ್ ಬಾಸ್ ಅಭಿಮಾನಿಗಳನ್ನು ಕಾಡ್ತಿದೆ. ಈ ಮಧ್ಯೆ ಅವರು ಗೆದ್ರೆ ಹಾಗೆ ಮಾಡ್ತೇವೆ, ಇವರು ಗೆದ್ರೆ ಹೀಗೆ ಮಾಡ್ತೇವೆ ಎನ್ನುವ ಧಮಕಿಗಳು ಕೇಳಿ ಬರ್ತಿವೆ. ಬಿಗ್ ಬಾಸ್ ಒಂದು ರಿಯಾಲಿಟಿ ಶೋ. ಇಲ್ಲಿ ಯಾರು ಗೆದ್ರೂ ಅದನ್ನು ವೀಕ್ಷಕರು ಸ್ವೀಕರಿಸಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.