Amruthdhaare Serial Latest Episode: ಅಂತೂ ಬಚ್ಚಿಟ್ಟ ಪ್ರೀತಿ ಮಾತು ಹೊರಬಂತು, ಈಗಲಾದರೂ ಅಮೃತಧಾರೆ ಹರಿಯತ್ತಾ?

Published : Nov 07, 2025, 08:27 AM IST

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ದಿನವನ್ನು ಇನ್ನಷ್ಟು ವಿಶೇಷ ಮಾಡೋಣ ಎಂದು ಮಲ್ಲಿ, ಲಕ್ಷ್ಮೀಕಾಂತ್‌, ಆನಂದ್‌ ಸೇರಿಕೊಂಡು ಪ್ಲ್ಯಾನ್‌ ಮಾಡಿದ್ದರು. ಅದೀಗ ಫಲ ಕೊಡುವಂತೆ ಕಾಣುತ್ತಿದೆ. 

PREV
15
ಹೋಟೆಲ್‌ಗೆ ಬಂದ ದಂಪತಿ

ಗೌತಮ್‌ ಹಾಗೂ ಭೂಮಿಕಾ ಹೋಟೆಲ್‌ಗೆ ಬಂದಿದ್ದಾರೆ. ಗೌತಮ್‌ ಕೊಟ್ಟ ಮಲ್ಲಿಗೆ ಹೂವನ್ನು ಮುಡಿದುಕೊಂಡು, ಹಳೇ ಭೂಮಿಕಾ ಆಗಿ ರೆಡಿಯಾಗಿದ್ದಾಳೆ. ಅಂದಹಾಗೆ ಮಿಂಚು ಕೂಡ ಗೌತಮ್‌ ಜೊತೆ ಹೋಟೆಲ್‌ಗೆ ಬಂದಿದ್ದಾಳೆ. ಈಗ ಇವರಿಬ್ಬರ ಮಧ್ಯೆ ಮಾತುಕತೆ ನಡೆದಿದೆ. 

25
ಮುಖಾಮುಖಿಯಾದ ದಂಪತಿ

ಹೋಟೆಲ್‌ನಲ್ಲಿ ಸರಿಗಮಪ ಖ್ಯಾತಿಯ ಗಾಯಕ ಕಂಬದರಂಗಯ್ಯ ಅವರು ಹಾಡು ಹಾಡಿದ್ದರು. ಈ ಹಾಡು ಈ ದಂಪತಿಯ ಮನಸ್ಸು ಬಿಚ್ಚುವಂತೆ ಮಾಡಿದೆ. ಇವರಿಬ್ಬರು ಮುಖಾಮುಖಿಯಾಗಿದ್ದು, ಗೌತಮ್‌ ಮನಸ್ಸು ಬಿಚ್ಚಿ ಮಾತನಾಡಿದ್ದಾನೆ.

35
ವಿಶ್‌ ಯು ಹ್ಯಾಪಿ ಆನಿವರ್ಸರಿ

ನನ್ನನ್ನು ತುಂಬ ಪ್ರೀತಿ ಮಾಡುವ ಭೂಮಿಕಾ, ಮಗಳು ಹುಟ್ಟಿರೋದು, ಕಿಡ್ನ್ಯಾಪ್‌ ಆಗಿರುವ ವಿಷಯ ಗೊತ್ತಾಗಿ ದೂರ ಆದಳು ಎಂದು ಗೌತಮ್‌ ಅಂದುಕೊಂಡಿದ್ದಾನೆ. ಈಗ ಅವನು ಭೂಮಿ ಬಳಿ, “ಭೂಮಿಕಾ, ನನ್ನ ನಿಮ್ಮ ಭೇಟಿ ಆಗಿದ್ದು ಹೀಗೆಯೇ. ನಾನು ಹಿಡಿ ಪ್ರೀತಿಗೋಸ್ಕರ ಹಂಬಲಿಸುತ್ತಿದ್ದೆ. ಈಗ ನನಗೆ ಸಿಕ್ಕ ಪ್ರೀತಿಯನ್ನು ಕಳೆದುಕೊಂಡು ನಿಂತಿದ್ದೇನೆ. ವಿಶ್‌ ಯು ಹ್ಯಾಪಿ ಆನಿವರ್ಸರಿ” ಎಂದು ಹೇಳಿದ್ದಾನೆ.

45
ಹ್ಯಾಪಿ ಆನಿವರ್ಸರಿ ಗೌತಮ್‌ ಅವರೇ

ಅತ್ತ ಭೂಮಿಕಾ ಕೂಡ, “ಹ್ಯಾಪಿ ಆನಿವರ್ಸರಿ ಗೌತಮ್‌ ಅವರೇ” ಎಂದು ಕಣ್ಣೀರು ಹಾಕಿಕೊಂಡು ಹೇಳಿದ್ದಾಳೆ. ಇದು ಬಹುಶಃ ಗೌತಮ್‌ಗೆ ಕೇಳಿಸಿಲ್ಲ ಎಂದು ಕಾಣುತ್ತದೆ. ಒಟ್ಟಿನಲ್ಲಿ ಸದ್ಯಕ್ಕಂತೂ ಈ ಜೋಡಿ ಒಂದಾಗುವ ಹಾಗೆ ಕಾಣುತ್ತಿಲ್ಲ. ಮುಂದೆ ಏನೇಮು ಟ್ವಿಸ್ಟ್‌ ಕಾದಿದೆಯೋ ಏನೋ!

55
ಮುಂದಿರುವ ಸವಾಲು ಏನು?

ಗೌತಮ್‌ ಹಾಗೂ ಭೂಮಿಕಾ, ಮಲ್ಲಿಯನ್ನು ಹುಡುಕಬೇಕು, ಅವರಿಂದ ಸಹಿ ತಗೋಬೇಕು ಎಂದು ಜಯದೇವ್‌ ಯೋಚನೆ ಮಾಡುತ್ತಿದ್ದಾನೆ. ಇದಕ್ಕಾಗಿ ಅವನು ತುಂಬ ಸರ್ಕಸ್‌ ಮಾಡುತ್ತಿದ್ದಾನೆ. ಹಾಗಾದರೆ ಮುಂದೆ ಏನಾಗುವುದು? 

Read more Photos on
click me!

Recommended Stories