‘ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋನ 6ನೇ ವಾರದ ಎಲಿಮಿನೇಷನ್‌ನಲ್ಲಿ ಹಲವರ ಮೆಚ್ಚಿನ ಸ್ಪರ್ಧಿಯಾಗಿದ್ದ ಕಾವ್ಯಾ ಗೌಡ ಹೊರಕ್ಕೆ ಬಂದಿದ್ದಾರೆ. ಅವರು ಮತ್ತೊಮ್ಮೆ ಎಂಟ್ರಿ ಕೊಡ್ತಾರಾ? ಅವರ ಪ್ರಕಾರ ವಿನ್ನರ್ ಯಾರಾಗಬೇಕು? ಇವೆಲ್ಲವುಗಳ ಕುರಿತು ನಟಿ ಹೇಳಿದ್ದೇನು?
‘ಬಿಗ್ ಬಾಸ್ ಕನ್ನಡ ಸೀಸನ್-13’ರ ಶೋನ 6ನೇ ವಾರದ ಎಲಿಮಿನೇಷನ್‌ನಲ್ಲಿ ಹಲವರ ಮೆಚ್ಚಿನ ಸ್ಪರ್ಧಿಯಾಗಿದ್ದ ಕಾವ್ಯಾ ಗೌಡ ಹೊರಕ್ಕೆ ಬಂದಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ನ ಶ್ರೇಷ್ಠ ಕ್ಯಾರೆಕ್ಟರ್ ಮೂಲಕ ಎಲ್ಲರ ಮನ ಗೆದ್ದಿದ್ದ ನಟಿ ಹೊರಕ್ಕೆ ಬಂದದ್ದು ಹಲವರಿಗೆ ತುಂಬಾ ನೋವಾಗಿದೆ.
26
ಕಾವ್ಯಾ ಗೌಡ ಅನಿಸಿಕೆ
ಇದೀಗ ಕಾವ್ಯಾ ಗೌಡ ಅವರು, ವಿವಿಧ ಮಾಧ್ಯಮಗಳ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಕಾವ್ಯಾ ಗೌಡ ಇಷ್ಟು ಬೇಗ ಹೊರಕ್ಕೆ ಬರುತ್ತಾರೆ ಎಂದು ಅವರ ಅಭಿಮಾನಿಗಳು ಎಣಿಸಿರಲಿಲ್ಲ. ಆದ್ದರಿಂದ ಅವರು ಮತ್ತೊಮ್ಮೆ ಬಿಗ್ಬಾಸ್ ಮನೆಯೊಳಕ್ಕೆ ಹೋಗಬೇಕು ಎನ್ನುವುದು ಅವರ ಫ್ಯಾನ್ಸ್ ಆಸೆ.
36
ಮತ್ತೆ ಹೋಗ್ತಾರಾ ನಟಿ?
ಮತ್ತೊಮ್ಮೆ ಹೋಗುವ ಅವಕಾಶ ಸಿಕ್ಕರೆ, ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ನಟಿ ಕಾವ್ಯಾ ಗೌಡ (Kavya Gowda), ಹಾಗೊಮ್ಮೆ ಅವಕಾಶ ಸಿಕ್ಕರೆ, ನಾನು ಹಿಂದೆ ಮಾಡಿರುವ ತಪ್ಪುಗಳನ್ನೆಲ್ಲಾ ಮತ್ತೆ ಮಾಡದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಮನೆಗೆ ಎಂಟ್ರಿ ಕೊಡುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅವರಿಗೆ ಈಗ ವಿನ್ನರ್ ಯಾರಾಗಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ, ನಾನು ಇದ್ದುದು ಕೇವಲ ಆರು ವಾರವಷ್ಟೇ. ಈಗಷ್ಟೇ ಹೊರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಯಾರು ಹೇಗೆ ಆಡಿದ್ದಾರೆ ಎಂದು ತಿಳಿದಿಲ್ಲ. ಆದ್ದರಿಂದ ಯಾರು ಗೆಲ್ಲಬೇಕು ಎಂದು ಈಗಲೇ ಹೇಳುವುದು ಕಷ್ಟ ಎಂದಿದ್ದಾರೆ.
56
ಯಾರು ಅರ್ಹರೋ, ಅವರು ಗೆಲ್ಲಲಿ
ಯಾರು ಡಿಸರ್ವ್ ಇದ್ದಾರೋ, ಯಾರು ಚೆನ್ನಾಗಿ ಆಡುತ್ತಿದ್ದಾರೆಯೋ ಅವರು ಗೆಲ್ಲಲಿ ಎಂದು ಹಾರೈಸುತ್ತೇನೆ. ಸದ್ಯ ಯಾರು ಹೇಗೆ ಆಡುತ್ತಿದ್ದಾರೆ ಎನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.
66
ವೀಕ್ಷಕರ ವೋಟ್
ಅಷ್ಟಕ್ಕೂ ಅದು ವೀಕ್ಷಕರು ನೀಡುವ ವೋಟ್ ಮೇಲೆ ಹೋಗುತ್ತದೆ. ಯಾರನ್ನು ಇಲ್ಲಿಯವರೆಗೆ ವೀಕ್ಷಕರು ಇಷ್ಟಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಅರ್ಹರು ಬಿಗ್ಬಾಸ್ 13 ಗೆಲ್ಲಲಿ ಎನ್ನುವುದು ನನ್ನ ಆಶಯವಷ್ಟೇ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.