ಕಾರ್ತಿಕ್ ನಮ್ರತಾ ಒಳ್ಳೆ ಜೋಡಿ, ತಮ್ಮನ ಬಗ್ಗೆ ನಟಿ ಸಿರಿ ಹೇಳಿದ್ದೇನು?

Published : Jun 09, 2026, 12:47 PM IST

ಬಿಗ್ ಬಾಸ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಮೇಲೆ ಎಲ್ಲರ ಕಣ್ಣಿದೆ. ಅವರಿಬ್ಬರು ಮದುವೆ ಆಗ್ತಾರೆ, ಲವ್ ನಲ್ಲಿದ್ದಾರೆ ಎನ್ನುವ ಮಾತಿದೆ. ಈ ಬಗ್ಗೆ ನಟಿ ಸಿರಿ ಏನು ಹೇಳ್ತಾರೆ ಗೊತ್ತಾ? 

PREV
14
ಸ್ನೇಹಾನಾ? ಪ್ರೀತಿನಾ?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 10 ರ ವಿನ್ನರ್ ಕಾರ್ತಿಕ್ ಮಹೇಶ್. ಅದೇ ಸೀಸನ್ ನಲ್ಲಿ ಎಲ್ಲರ ಗಮನ ಸೆಳೆದಿದ್ದವರು ನಮ್ರತಾ ಗೌಡ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಜನರು ಇಬ್ಬರ ಮಧ್ಯೆ ಪ್ರೀತಿ ಇದೆ ಅಂತ ಬಲವಾಗಿ ನಂಬಿದ್ದಾರೆ. ಇತ್ತೀಚಿಗಷ್ಟೆ ನಮ್ರತಾ ಬರ್ತ್ ಡೇ ಪಾರ್ಟಿಯಲ್ಲಿ ಕುಟುಂಬ ಸಮೇತ ಕಾಣಿಸಿಕೊಂಡಿದ್ದರು ಕಾರ್ತಿಕ್ ಮಹೇಶ್. ಇಬ್ಬರೂ ಬೆಸ್ಟ್ ಫ್ರೆಂಡ್ ಅಂತಿದ್ರೂ ಅಭಿಮಾನಿಗಳು ನಂಬಲು ಸಿದ್ದ ಇಲ್ಲ.

24
ನಟಿ ಸಿರಿ ಹೇಳೋದೇನು?

ಬಿಗ್ ಬಾಸ್10ರ ಸೀಸನ್ ನಲ್ಲಿ ನಟಿ ಸಿರಿ ಕೂಡ ಸ್ಪರ್ಧಿಯಾಗಿದ್ದರು. ಸಿರಿ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಅವರಿಗೆ ಪ್ರೀತಿಯ ಅಕ್ಕನಾಗಿದ್ರು. ಬಿಗ್ ಬಾಸ್ ಮನೆಯಲ್ಲಿ ಅಕ್ಕ – ತಮ್ಮನ ಬಾಂಡಿಂಗ್ ನೋಡಲು ಸಿಕ್ಕಿತ್ತು. ಈಗ ಅಕ್ಕ ಸಿರಿ, ನಮ್ರತಾ ಗೌಡ ಹಾಗೂ ಕಾರ್ತಿಕ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

34
ಒಳ್ಳೆ ಜೋಡಿ

ನಟಿ ಸಿರಿ ಪ್ರಕಾರ, ನಮ್ರತಾ ಹಾಗೂ ಕಾರ್ತಿಕ್ ಬೆಸ್ಟ್ ಫ್ರೆಂಡ್ಸ್. ನನಗೆ ಅವರಿಬ್ಬರು ಫ್ರೆಂಡ್ಸ್ ಅನ್ನೋದು ಮಾತ್ರ ಗೊತ್ತು. ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಸಾಕಷ್ಟು ಇವೆಂಟ್ಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋದ್ರಿಂದ ಜನ ಅವರನ್ನು ಪ್ರೇಮಿಗಳ ರೀತಿ ನೋಡ್ತಿರಬಹುದು. ಇಬ್ಬರನ್ನು ನೋಡಿದಾಗ ಒಳ್ಳೆ ಫ್ರೆಂಡ್ಸ್ ಅಂತ ಅನ್ನಿಸುತ್ತೆ. ಇಬ್ಬರೂ ಒಳ್ಳೆ ಜೋಡಿ, ಅದ್ರಲ್ಲಿ ಡೌಟ್ ಇಲ್ಲ. ಆದ್ರೆ ಇಬ್ಬರ ಮಧ್ಯೆ ಏನಿದೆ ಗೊತ್ತಿಲ್ಲ. ಇದ್ರೆ ಹೇಳೇ ಹೇಳ್ತಾರೆ ಅಂತ ಸಿರಿ ಹೇಳಿದ್ದಾರೆ.

44
ಬಿಗ್ ಬಾಸ್ ನಂತ್ರ ಸಿರಿ

ನಟಿ ಸಿರಿ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು 2024ರಲ್ಲಿ ಸಿರಿ ಉದ್ಯಮಿ ಪ್ರಭಾಕರ್ ಅವರ ಕೈ ಹಿಡಿದಿದ್ದಾರೆ. ರಂಗೋಲಿ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಅನೇಕ ಸೀರಿಯಲ್, ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸದ್ಯ ಜೀ ಪವರ್‌ ನಲ್ಲಿ ಪ್ರಸಾರ ಆಗ್ತಿರುವ ಗೌರಿ ಸೀರಿಯಲ್‌ ನಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories