ಒಂದೊಂದು ದಿನ ಒಂದೊಂದು ಕಥೆಯ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿರುವ ಶಾಂತಂ ಪಾಪಂ ತಂಡಕ್ಕೆ ಉತ್ತಮ ಜನ ಜಾಗೃತಿ ಸರಣಿ ಪ್ರಶಸ್ತಿ ಲಭ್ಯವಾಗಿದೆ.
ಮನೆ ಮೆಚ್ಚಿದ ಸಹೋದರಿ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವಿಧಿ ಮತ್ತು ಪುಣ್ಯವತಿ ಧಾರಾವಾಹಿಯ ಪೂರ್ವಿ ಈ ಪ್ರಶಸ್ತಿ ಪಡೆದಿದ್ದಾರೆ.
ಸೊಸೆಯನ್ನು ಓದಿಸುವ ಅತ್ತೆಯಂತಹ ವಿಭಿನ್ನ ಕಥೆಯನ್ನು ಹೊಂದಿರುವ ಜನಮೆಚ್ಚುಗೆಗೆ ಪಾತ್ರವಾದ ಭಾಗ್ಯಲಕ್ಷ್ಮಿ ಧಾರಾವಾಹಿಯ ಉತ್ತಮ ನಿರ್ದೇಶನಕ್ಕಾಗಿ ದರ್ಶನ್ ಅವರಿಗೆ ಸಹ ಪ್ರಶಸ್ತಿ ಲಭಿಸಿದೆ.
ತಮ್ಮ ಮುದ್ದು ಮುದ್ದಾದ ತುಂಟಾಟ, ಸೀರಿಯಸ್ ಪಾತ್ರಗಳಿಂದ ಖ್ಯಾತರಾಗಿರುವ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಪಾತ್ರ ನಿರ್ವಹಿಸುತ್ತಿರುವ ಮೌನ ಗುಡ್ಡೆ ಮನೆ ಮತ್ತು ರಿತ್ವಿಕ್ ಗೆ ಜನ ಮೆಚ್ಚಿದ ಜೋಡಿ ಅವಾರ್ಡ್ ಲಭಿಸಿದೆ.
ಉತ್ತಮ ಕಥೆಯನ್ನು ಹೊಂದಿರುವ ಕೆಂಡ ಸಂಪಿಗೆ ಧಾರಾವಾಹಿ ನಿರ್ದೇಶನಕ್ಕಾಗಿ ಸುಭಾಷ್‌ಗೆ ಉತ್ತಮ ನಿರ್ದೇಶನ ಅವಾರ್ಡ್ ನೀಡಲಾಯಿತು.
ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಧನ್‌ರಾಜ್, ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ರಾಜ್ಯದ್ಯಂತ ಪರಿಚಿತರಾದರು. ಅವರಿಗೆ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿ ನೀಡಲಾಗಿದೆ.
ಉತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಅಂತರಪಟ ಸೀರಿಯಲ್ ನಲ್ಲಿ ಛಾಯಾಗ್ರಾಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಕುಮಾರ್ ಅವರಿಗೆ ಲಭ್ಯವಾಗಿದೆ.
ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಗಂಡ ಹೆಂಡ್ತಿ ಧಾರಾವಾಹಿಯ ಶಾಶ್ವತ್‌ಗೆ ಮನೆ ಮೆಚ್ಚಿದ ಸಹೋದರ ಪ್ರಶಸ್ತಿಯನ್ನು ಪಡೆದಿದ್ದಾರೆ. ದಿನಕರ್ ಗೌಡ ಅವರು ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಸೂರ್ಯವಂಶಿಯಾಗಿ ಅತ್ಯುತ್ತಮ ಅಭಿನಯ ನೀಡುತ್ತಿರುವ ಸುದರ್ಶನ್ ರಂಗಪ್ರಸಾದ್ ಅವರಿಗೆ ಜನ ಮೆಚ್ಚಿದ ಶಕುನಿ ಪ್ರಶಸ್ತಿ ಲಭಿಸಿದೆ.
ಕಾಮಿಡಿ ಮೂಲಕ ಜನರನ್ನು ನಕ್ಕು ನಗಿಸುವ ಗಿಚ್ಚಿ ಗಿಲಿಗಿಲಿ ತಂಡಕ್ಕೆ ಬೆಸ್ಟ್ ರೇಟೆಡ್ ನಾನ್ ಫಿಕ್ಷನ್ ಅವಾರ್ಡ್ ಲಭ್ಯವಾಗಿದೆ. ಜನರನ್ನು ಮನರಂಜಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ.