ಅನುಪಮಾ ಗೌಡ ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಮತ್ತು ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು.
28
ಬ್ಲ್ಯಾಕ್ ಕಲರ್ ಉದ್ದದ ಗೌನ್‌ನಲ್ಲಿ ಅನುಪಮಾ ಗೌಡ ಮಿರ ಮಿರ ಮಿಂಚಿದ್ದು, ಅವರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
38
ಇನ್ನು ಕೆಲವು ನೆಟ್ಟಿಗರು ಅನುಪಮಾ ಗೌಡ ಫೋಟೋಗಳನ್ನು ನೋಡಿ ಫೋಟೋ ತುಂಬಾ ಚೆನ್ನಾಗಿವೆ. ಬೆಳದಿಂಗಳ ಬಾಲೆಯಂತೆ, ಸುಂದರಿ ರೀತಿ ಇದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ.
48
ಮಾತಿನ ಮೂಲಕವೇ ಸಾವಿರ ಹೃದಯಗಳನ್ನು ಖೆಡ್ಡಾಗಿ ಕೆಡವುವ ತಾಕತ್ತು ಅನುಪಮಾ ಗೌಡರಿಗಿದೆ. ರಿಯಾಲಿಟಿ ಶೋಗಳಲ್ಲಿ ಅದನ್ನು ಸಾಬೀತೂ ಪಡಿಸಿದ್ದಾರೆ.
58
ಗುಳಿಕೆನ್ನೆಯ ಮೇಲಿನ ನಗು ಮತ್ತು ತುಟಿ ಚಲನೆಗಳ ಮೂಲಕ ಮಾತಿಗೆ ಬೇರೆಯೇ ಶಕ್ತಿ ನೀಡುವ ಈ ಸುಂದರಿಯು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಸೈ ಅನಿಸಿಕೊಂಡವರು.
68
ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.
78
ಅನುಪಮಾಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.
88
ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.