'ಏನ್​ ಬ್ರೋ' ಅಂತೀರಾ? Bro ಅರ್ಥ ತಿಳಿದ್ರೆ ಅಪ್ಪಿತಪ್ಪಿಯೂ ನೀವೂ ಹೇಳಲ್ಲ ಎಂದ ನಟಿ ಅನು ಜನಾರ್ದನ!

Published : Jan 10, 2026, 04:28 PM IST

'ಸತ್ಯ' ಸೀರಿಯಲ್ ಖ್ಯಾತಿಯ ನಟಿ ಅನು ಜನಾರ್ದನ್ ಅವರು 'ಬ್ರೋ' ಪದದ ಬಳಕೆಯನ್ನು ಏಕೆ ನಿಲ್ಲಿಸಿದರು ಎಂಬುದನ್ನು ವಿವರಿಸಿದ್ದಾರೆ. ಸಹನಟ ಒಬ್ಬರು 'ಬ್ರೋ' ಶಬ್ದದ ಅರ್ಥ ಹೇಳಿದ ಮೇಲೆ ಅಲ್ಲಿಂದ ಎಂದಿಗೂ ಬಳಲಿಲ್ಲ ಎಂದಿದ್ದಾರೆ. ಹಾಗಿದ್ರೆ ಏನದು ಅರ್ಥ? 

PREV
16
ಅರ್ಥವೇ ಇಲ್ಲದ ಭಾಷೆಗಳು!

ಈಗಂತೂ ಬಿಡಿ. ಜೆನ್​ ಜೀ ಗಳು ಮಾತನಾಡುವ ಇಂಗ್ಲಿಷ್​ ಭಾಷೆಗೆ ಅರ್ಥನೇ ಇರಲ್ಲ. ಅದರಲ್ಲಿಯೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಅವರು ಆಡುವ ಇಂಗ್ಲಿಷ್​ ಪದಗಳೋ ದೇವರಿಗೇ ಪ್ರೀತಿ. ಕನ್ನಡ ಮಾತನಾಡಲು ಹಿಂಜರಿಕೆ, ಇಂಗ್ಲಿಷೇ ಗ್ರೇಟ್​ ಎನ್ನೋ ನಂಬಿಕೆ. ಇದೇ ಕಾರಣಕ್ಕೆ ಅದೆಷ್ಟೋ ಪದಗಳು ಕನ್ನಡ ಮತ್ತು ಇಂಗ್ಲಿಷ್​ ಅರ್ಥಾತ್ ಕಂಗ್ಲಿಷ್​ ಆಗಿಬಿಟ್ಟಿವೆ. ಇನ್ನು ಕೆಲವು ಪದಗಳಿಗಂತೂ ಹುಡುಕಿದ್ರೂ ಅರ್ಥ ಸಿಗಲ್ಲ.

26
ಹಾಯ್​ ಬ್ರೋ

ಆದರೆ ಅದನ್ನು ಮಾತನಾಡುವವರಿಗೆ ಮಾತ್ರ ಅದು ಗೊತ್ತಿರುತ್ತದೆ. ಬ್ರೋ ಎಂದ್ರೆ ಸಾಮಾನ್ಯವಾಗಿ ಬ್ರದರ್​ ಎನ್ನುವ ಶಬ್ದದ ಷಾರ್ಟ್​ಫಾರ್ಮ್​ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹುಡುಗಿಯರ ನಡುವಿನ ಸಂಭಾಷಣೆಯಲ್ಲಿಯೂ ಬ್ರೋ ನೂರೆಂಟು ಬಾರಿ ಬರತ್ತೆ, ಲವರ್ಸ್​ ನಡುವಿನ ಸಂಭಾಷಣೆಯಲ್ಲೂ ಬರತ್ತೆ. ಹಾಗಿದ್ರೆ ಏನಿ ಬ್ರೋ ಅರ್ಥ? ಇದನ್ನು ಕಿರುತೆರೆಯ ಖ್ಯಾತ ನಟಿ ಅನು ಜನಾರ್ದನ ವಿವರಿಸಿದ್ದಾರೆ. ತಮ್ಮ ಅನುಭವವನ್ನು ಅವರು ಹೀಗೆ ಹೇಳಿದ್ದಾರೆ!

36
ಸತ್ಯ ಸೀರಿಯಲ್​ ಕೀರ್ತನಾ

ಅಂದಹಾಗೆ ಅನು ಜನಾರ್ದನ ಅವರು ಇದಾಗಲೇ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಸತ್ಯ ಸೀರಿಯಲ್​ ನೆಗೆಟಿವ್​ ಶೇಡ್​ನಲ್ಲಿ ಸಕತ್​ ಮಿಂಚಿದ್ದರು. ಕೀರ್ತನಾ ಎಂದೇ ಫೇಮಸ್​ ಆಗಿದ್ದರು. ಸದ್ಯ ನಟನೆಯಿಂದ ದೂರ ಸರಿದಂತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಹಳೆಯ ವಿಡಿಯೋ ಒಂದು ಮತ್ತೆ ವೈರಲ್​ ಆಗ್ತಿದೆ.

46
ಬ್ರೋ ಶಬ್ದದ ಅರ್ಥ

ಇದರಲ್ಲಿ ಅವರು ಬ್ರೋ ಶಬ್ದದ ಬಗ್ಗೆ ತಮಗೆ ಆಗಿರುವ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು ಕೂಡ ಇಂದಿನ ಹೆಚ್ಚಿನವರಂತೆ ಎಲ್ಲರಿಗೂ ಬ್ರೋ ಎಂದೇ ಕರೆಯುತ್ತಿದ್ದೆ. ಇದು ಸತ್ಯ ಸೀರಿಯಲ್​ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆ. ಒಂದು ದಿನ ನಟ ಸೀರುಂಡೆ ರಘು ಅವರು ( ಸತ್ಯ ಧಾರಾವಾಹಿಯಲ್ಲಿಯ ಮೈದುನನ ಪಾತ್ರ ಮಾಡಿದ್ದಾರೆ) ಬ್ರೋ ಅನ್ನೋ ಶಬ್ದದ ಅರ್ಥ ಹೇಳಿದ್ಮೇಲೆ ತಾವು ಹಾಗೆ ಕರೆಯೋದನ್ನೇ ಬಿಟ್​ಬಿಟ್ಟೆ ಎಂದಿದ್ದಾರೆ ಅನು.

56
ಬಾರೋ ರಾಜಾ...

ಅಷ್ಟಕ್ಕೂ ಸೀರುಂಡೆ ರಘು ಅವರು ಹೇಳಿದ ಅರ್ಥ ಏನೆಂದರೆ ಬ್ರೋ ಎಂದರೆ, 'ಬಾರೋ ರಾಜಾ... ಓಡಿ ಹೋಗೋಣ' (BROh) ಅಂತ ಹೇಳಿದ್ದರಂತೆ. ಇದನ್ನು ಕೇಳಿ ನನಗೆ ಶಾಕ್​ ಆಗಿ ಆವತ್ತಿನಿಂದ ಯಾರಿಗೂ ಬ್ರೋ ಅಂತ ಕರೆಯಲ್ಲ ಎಂದು ಹೇಳಿದ್ದರು ಅನು.

66
ಜೆನ್​ ಜಿಗಳು ಕೇಳ್ತಾರಾ

ಬ್ರೋ ಶಬ್ದದ ಅರ್ಥ ಕೇಳಿದ್ಮೇಲೆ ಬಹುಶಃ ಯಾರೂ ಹಾಗೆ ಮಾತನಾಡಲಿಕ್ಕಿಲ್ಲ ಎನ್ನುವುದು ಅನು ಅವರ ಅಭಿಮತ. ಹಾಗೆಂದು ಜೆನ್​ ಜಿಗಳು ಇದನ್ನೆಲ್ಲಾ ಕೇಳಿಸಿಕೊಳ್ತಾರಾ? ಅವರಾಯ್ತು, ಅವರ ಮಾತಾಯ್ತು. ಶಬ್ದ ಏನಾದರೇನಂತೆ. ಎದುರಿಗೆ ಇದ್ದವರಿಗೆ ತಿಳಿದರೆ ಸಾಕಲ್ವಾ ಎನ್ನೋದು ಅವರ ಮಾತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories