ನಟನೆ ಜೊತೆ ಕಲಿಕೆಯಲ್ಲೂ ಸೂಪರ್, SSLC ಯಲ್ಲಿ ಡಿಸ್ಟಿಂಕ್ಷನ್ ಪಡೆದ ಅಣ್ಣಯ್ಯ ನಟಿ Ankitha Gowda

Published : Apr 24, 2026, 12:12 PM IST

Ankitha Gowda: ಅಣ್ಣಯ್ಯ ಧಾರಾವಾಹಿಯಲ್ಲಿ ರಮ್ಯಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಂಕಿತಾ ಗೌಡ ನಟನೆಯ ಜೊತೆಗೆ ಓದುವುದರಲ್ಲೂ ಮುಂದು. ಇವರು SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದು. ನಟನೆಯಲ್ಲಿ ಬ್ಯುಸಿ ಇದ್ರೂ ಓದೋದ್ರಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸಿದ್ದಾರೆ. 

PREV
16
ಅಂಕಿತಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಜೀ ಕನ್ನಡ ವಾಹಿನಿಯ ‘ಅಣ್ಣಯ್ಯ’ ಧಾರವಾಹಿಯಲ್ಲಿ ಶಿವು ಕೊನೆಯ ತಂಗಿ ರಮ್ಯಾ ಪಾತ್ರದಲ್ಲಿ ನಟಿಸುತ್ತಿರುವ ಬಾಲ ನಟಿ ಅಂಕಿತಾ ಗೌಡ ಅವರು ಇತ್ತೀಚೆಗೆ ನಡೆದ SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.

26
ಅಣ್ಣಯ್ಯ ಧಾರಾವಾಹಿ ನಟಿ

ಅಂಕಿತಾ ಗೌಡ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಣ್ಣಯ್ಯನ ಮುದ್ದಿನ ನಾಲ್ವರು ತಂಗಿಯರಲ್ಲಿ ರಮ್ಯಾ ಕೂಡ ಒಬ್ಬಳು, ಶಿವು, ರತ್ನ, ರಾಣಿ, ಗುಂಡಮ್ಮನ ಮುದ್ದಿನ ಪುಟ್ಟ ತಂಗಿಯಾಗಿ ಅಂಕಿತಾ ಗೌಡ ನಟಿಸುತ್ತಿದ್ದಾರೆ. ಓದಿನ ಜೊತೆಗೆ ನಟನೆ ಕೂಡ ಬ್ಯಾಲೆನ್ಸ್ ಮಾಡುತ್ತಾ ಬಂದು SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾರೆ.

36
ಅಂಕಿತಾ ಗೌಡ ಪಡೆ ಮಾರ್ಕ್ಸ್ ಎಷ್ಟು?

ಅಂಕಿತಾ ಗೌಡ SSLC ಪರೀಕ್ಷೆಯಲ್ಲಿ ಶೇ.86 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಗರಿಷ್ಟ 625 ಅಂಕಗಳಲ್ಲಿ ಒಟ್ಟು 537 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಂಕಿತಾ ಗೌಡ ಮಾರ್ಕ್ಸ್ ಕಾರ್ಡ್ ವೈರಲ್ ಆಗುತ್ತಿದೆ. ಅಣ್ಣಯ್ಯ ವೀಕ್ಷಕರು ಹಾಗೂ ಅಭಿಮಾನಿಗಳು ಅಂಕಿತಾಗೆ ಶುಭ ಕೋರುತ್ತಿದ್ದಾರೆ.

46
ಅಂಕಿತಾ ವಿವಿಧ ಭಾಷೆಗಳಲ್ಲಿ ಪಡೆದ ಮಾರ್ಕ್ ಹೀಗಿದೆ

ಇಂಗ್ಲಿಷ್ 119

ಕನ್ನಡ 81

ಹಿಂದಿ 100

ಗಣಿತ 69

ವಿಜ್ಞಾನ 83

ಸಮಾಜ ವಿಜ್ಞಾನ 85

ಇದರ ಜೊತೆಗೆ ಇತರ ಚಟುವಟಿಕೆಗಳಲ್ಲೂ ಸಹ A+ ಮತ್ತು A ಅಂಕಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿದ್ದಾರೆ.

56
ಮಂಡ್ಯದ ಹುಡುಗಿ ಅಂಕಿತಾ ಗೌಡ

ಮೂಲತ: ಮಂಡ್ಯದವರಾದ ಅಂಕಿತಾ ಗೌಡ ಬಾಲ್ಯದಿಂದಲೇ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲನಟಿಯಾಗಿ ಕನ್ನಡ ಸಿನಿಮಾ, ಸೀರಿಯಲ್ ಹಾಗೂ ವೆಬ್ ಸೀರೀಸ್ ಗಳಲ್ಲೂ ಸಹ ಅಂಕಿತಾ ಗೌಡ ನಟಿಸಿದ್ದಾರೆ. ಇವರ ಅದ್ಭುತ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದಾರೆ.

66
ದರ್ಶನ್ ಸಿನಿಮಾದಲ್ಲಿ ಅಂಕಿತಾ

ದರ್ಶನ್ ತೂಗುದೀಪ ನಟನೆಯ 'ಕ್ರಾಂತಿ' ಸಿನಿಮಾದಲ್ಲಿ ಅಂಕಿತಾ ಗೌಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ಬಾಲ್ಯದ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ತೆಲುಗು ಮತ್ತು ತಮಿಳು ಭಾಷೆಯ ವೆಬ್‌ ಸೀರೀಸ್‌ ‘ಪೋಚಮ್ಮ’ದಲ್ಲಿಯೂ ಅಂಕಿತಾ ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories