ಡಾಕ್ಟರ್, ಇಂಜಿನಿಯರ್ ಅಲ್ವೇ ಅಲ್ಲ, ಮಗಳನ್ನು ಈ ಜಾಗದಲ್ಲಿ ನೋಡ ಬಯಸಿದ್ದಾರೆ ಕಾಮಿಡಿ ಕಿಲಾಡಿ ನಟಿ ನಯನಾ

Published : Apr 23, 2026, 03:26 PM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಕೆಲ್ಸದ ಜೊತೆ ಅಮ್ಮನಾಗಿ ಎಲ್ಲ ಜವಾಬ್ದಾರಿ ನಿಭಾಯಿಸ್ತಿದ್ದಾರೆ. 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಯನಾ, ಮಗಳು ಅವಿನ್ಯಾ ದೊಡ್ಡವರಾದ್ಮೇಲೆ ತಮ್ಮ ಕನಸೇನು ಎಂಬುದನ್ನು ಹೇಳಿದ್ದಾರೆ. 

PREV
16
ನಯನಾಗೆ ಸೂಪರ್ ಸ್ಟಾರ್ ಮಗಳು

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಶರತ್ ಯಾರಿಗೆ ಗೊತ್ತಿಲ್ಲ. ಹಾಸ್ಯದ ಮೂಲಕ ಕನ್ನಡಿಗರನ್ನು ಹೊಟ್ಟೆ ಹುಣಾಣಗಿಸುವಂತೆ ನಗಿಸುವ ನಯನಾ, ಅಧ್ಬುತ ಕಲಾವಿದೆ. ಅನೇಕರಿಗೆ ಸೂಪರ್ ಸ್ಟಾರ್ ಆಗಿರುವ ನಯನಾಗೆ ಅವರ ಮಗಳು ಸೂಪರ್ ಸ್ಟಾರ್. ಈ ಹಿಂದೆ ಶೋ ಒಂದರಲ್ಲಿ ನಯನಾ, ಮಗಳು ಸೂಪರ್ ಸ್ಟಾರ್ ಎಂದಿದ್ದರು. ಸಾಯ್ಬೇಕು ಎನ್ನುವ ನಿರ್ಧಾರ ತೆಗೆದುಕೊಂಡಾಗ ಮತ್ತೆ ಜೀವಕ್ಕೆ ಬೆಳಕು ನೀಡಿದ್ದು ಮಗಳು. ಒಂಟಿತನದ ನೋವಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ನಯನಾಗೆ ಮಗಳೆಂದ್ರೆ ಪ್ರಾಣ. ಕನ್ನಡ ರಾಜ್ಯೋತ್ಸವದ ದಿನ ನಯನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅವರ ಮುದ್ದು ಮಗಳಿಗೆ ಈಗ 3 ವರ್ಷ.

26
ಮಗಳು ಮುಂದೆ ಏನಾಗ್ಬೇಕು?

ಸಾಮಾನ್ಯವಾಗಿ ಮಕ್ಕಳು ಹುಟ್ಟುತ್ತಿದ್ದಂತೆ ಪಾಲಕರ ಕನಸು ಶುರುವಾಗುತ್ತೆ. ಮಕ್ಕಳು ದೊಡ್ಡವರಾದ್ಮೇಲೆ ಇಂಜಿನಿಯರ್ ಆಗ್ಬೇಕು, ಡಾಕ್ಟರ್ ಆಗ್ಬೇಕು ಎನ್ನುವ ಕನಸು ಕಾಣ್ತಾರೆ. ಆದ್ರೆ ನಯನಾ ಕನಸು ಸ್ವಲ್ಫ ಭಿನ್ನವಾಗಿದೆ. ಮಗಳನ್ನು ಆರ್ಮಿಯಲ್ಲಿ ನೋಡಲು ನಯನಾ ಬಯಸ್ತಿದ್ದಾರೆ. ಮಗಳನ್ನು ಆರ್ಮಿಯ ಯಾವುದಾದ್ರೂ ಒಂದು ಹುದ್ದೆಯಲ್ಲಿ ನೋಡುವ ಆಸೆ ಇದೆ ಅಂತ ನಯನಾ ಹೇಳಿದ್ದಾರೆ. ಆದ್ರೆ ಕೊನೆ ನಿರ್ಧಾರ ಮಗಳದ್ದು, ಅವಳ ಮೇಲೆ ಯಾವುದೇ ಒತ್ತಡ ಇಲ್ಲ ಅಂತಾರೆ ನಯನಾ.

36
ಶೂಟಿಂಗ್ ಕ್ಯಾನ್ಸಲ್

ಮಗಳ ಮುಂದೆ ನಟಿ ನಯನಾ ಪ್ರಪಂಚವನ್ನು ಮರೆಯುತ್ತಾರೆ. ಮಗಳ ಮುದ್ದು ಮಾತಿಗೆ ಕರಗುವ ಅವರು, ಮಗಳ ಜೊತೆ ಹೆಚ್ಚು ಸಮಯ ಕಳೆಯಲು ಬಯಸ್ತಾರೆ. ಆದ್ರೆ ಕೆಲ್ಸದ ಒತ್ತಡ ಅವರನ್ನು ಬಿಡ್ತಿಲ್ಲ. ನಯನಾಗೆ ಮಾತೃತ್ವವನ್ನು ಎಂಜಾಯ್ ಮಾಡೋಕೆ ಆಗ್ಲಿಲ್ಲ. ಶೂಟಿಂಗ್, ಪ್ರೋಗ್ರಾಂ ಗಲಾಟೆಯಲ್ಲಿ ಮಗಳ ಜೊತೆ ಕಳೆಯಲು ಸಮಯ ಸಿಗೋದಿಲ್ಲವಂತೆ. ಹಾಗಾಗಿ ಅನೇಕ ಬಾರಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರಂತೆ.

46
ಆಟಂಬಾಂಬ್ ಮಗಳು

ನಯನಾ ಪ್ರಕಾರ ಅವರ ಮಗಳ ಬಹಳ ತುಂಟಿ. ಹಾಗೆ ಕಿಲಾಡಿ ಕೂಡ. ಬಾಲ್ಯದಲ್ಲಿ ನಯನಾ ಇದ್ದಂತೆ ಈಗ ನಯನಾ ಮಗಳಿದ್ದಾರಂತೆ. ನನ್ನ ಪ್ರತಿಬಿಂಬ ನನ್ನ ಮಗಳು, ಆಟಂಬಾಂಬ್ ಅಂತಾರೆ ನಯನಾ. ಅಜ್ಜಿ ಜೊತೆ ಹೆಚ್ಚು ಸಮಯ ಕಳೆಯುವ ಅವಿನ್ಯಾಗೆ ಅಮ್ಮನಿಗಿಂತ ಅಜ್ಜಿ ಮೇಲೆ ಪ್ರೀತಿ ಜಾಸ್ತಿ.

56
ನಯನಾಗೆ ಏನು ಇಷ್ಟವಾಗ್ತಿಲ್ಲ

ಕಲಾವಿದರು ಅಂದ್ಮೇಲೆ ಅಭಿಮಾನಿಗಳು ಇದ್ದೇ ಇರ್ತಾರೆ. ಆದ್ರೆ ಅಭಿಮಾನಿಗಳ ಅತಿರೇಕ ನಯನಾಗೆ ಇಷ್ಟವಿಲ್ಲ. ದೇವಸ್ಥಾನಕ್ಕೆ ಹೋದಾಗ ಎಳೆದು ಸೆಲ್ಫಿ ಕೇಳೋದು ಸೂಕ್ತವಲ್ಲ ಎನ್ನುವ ನಯನಾ, ತಮಗೂ ಸ್ವಲ್ಪ ವೈಯಕ್ತಿಕ ಬದುಕಿದೆ ಅದನ್ನು ಬದುಕೋಕೆ ಅವಕಾಶ ನೀಡಿ ಎಂದಿದ್ದಾರೆ.

66
ಕಾಮಿಡಿ ಕಿಲಾಡಿ ನಯನಾ

ಕಾಮಿಡಿ ಕಿಲಾಡಿ ಶೋ ಮೂಲಕವೇ ನಯನಾ ಪ್ರಸಿದ್ಧಿಗೆ ಬಂದಿದ್ದು. ಹುಬ್ಬಳ್ಳಿ ಹುಡುಗಿ ಸಖತ್ ಟ್ಯಾಲೆಂಟೆಡ್. ತಕ್ಷಣ ತಮಾಷೆ ಡೈಲಾಗ್ ಹೇಳಿ ನಗಿಸುವ ನಯನಾ, 2018ರಲ್ಲಿ ಶರತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2023ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ನಯನಾ, ಅನಂತು ವರ್ಸಸ್ ನುಸ್ರುತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories