ಮರಾಠಿ ಪದ್ಧತಿಯಂತೆ ಮತ್ತೆ ಮದುವೆ; ಫೋಟೋ ಶೇರ್‌ ಮಾಡಿದ ಅಂಕಿತಾ ಲೋಖಂಡೆ

Suvarna News   | Asianet News
Published : Mar 03, 2022, 08:37 PM IST

ಪವಿತ್ರಾ ರಿಶ್ತಾ (Pavitra Rishta) ಎಂಬ ಟಿವಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ಅಂಕಿತಾ ಲೋಖಂಡೆ (Ankita Lokhande) ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ಬಹು ಕಾಲದ ಗೆಳೆಯ ವಿಕ್ಕಿ ಜೈನ್ (Vicky Jain) ಅವರನ್ನು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ಅಂಕಿತಾ ವಿಕ್ಕಿಯನ್ನು ಮತ್ತೊಮ್ಮೆ ಮದುವೆಯಾದರು. ಡಿಸೆಂಬರ್‌ನಲ್ಲಿ, ಅವರು ಹಿಂದೂ ಸಂಪ್ರದಾಯದ (Hindu Tradition) ಪ್ರಕಾರ ವಿವಾಹವಾದರು, ಆದರೆ ಈಗ ಅವರ ತಾಯಿಯ ಆಜ್ಞೆಯ ಮೇರೆಗೆ, ದಂಪತಿ ಮರಾಠಿ ಪದ್ಧತಿಯಂತೆಯೂ ವಿವಾಹವಾದರು. ಮರಾಠಿ ಪದ್ಧತಿಯ ಪ್ರಕಾರ ಆದ ಮದುವೆಯ ಕೆಲವು ಫೋಟೋಗಳನ್ನು ಅಂಕಿತಾ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

PREV
19
ಮರಾಠಿ ಪದ್ಧತಿಯಂತೆ ಮತ್ತೆ ಮದುವೆ; ಫೋಟೋ ಶೇರ್‌ ಮಾಡಿದ ಅಂಕಿತಾ ಲೋಖಂಡೆ

ಅಂಕಿತಾ ಮದುವೆಯ ನಂತರ ಮನೆಯಲ್ಲಿನ ಆಚರಣೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅಂಕಿತಾ ಕಿತ್ತಳೆ ಬಣ್ಣದ ಗೋಲ್ಡನ್ ಸೀರೆ, ತೆರೆದ ಕೂದಲು ಮತ್ತು ಕೈಯಲ್ಲಿ ಹಸಿರು ಬಳೆಗಳನ್ನು ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ತುಂಬಾ ಉತ್ಸುಕರಾಗಿವುದು ಫೋಟೋಗಳಲ್ಲಿ ಕಾಣಬಹುದು. 

29

ಅಂಕಿತಾ ಲೋಖ್ಡೆ ವಿಕ್ಕಿ ಜೈನ್ ಅವರೊಂದಿಗೆ ಹಂಚಿಕೊಂಡ ಫೋಟೋಗಳಲ್ಲಿ, ಅವರು ನೀಲಿ ಮತ್ತು ಕೆಂಪು ಬಣ್ಣದ ಮಹಾರಾಷ್ಟ್ರದ ಸೀರೆಯನ್ನು ಧರಿಸಿದ್ದರು ಮತ್ತು ಅದರೊಂದಿಗೆ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು.

39

ಅದೇ ಸಮಯದಲ್ಲಿ, ಅಂಕಿತಾ ಲೋಖಂಡೆ ಅವರ ಪತಿ ವಿಕ್ಕಿ ಜೈನ್ ಅವರು ಬಿಳಿ ಪೈಜಾಮ-ಕುರ್ತಾ ಮತ್ತು ಬ್ರೈಟ್‌ ಬ್ಲ್ಯೂ ದುಪಟ್ಟಾದಲ್ಲಿ ಹ್ಯಾಂಡ್‌ಸಮ್‌ ಆಗಿ ಕಾಣುತ್ತಿದ್ದರು. ಇಬ್ಬರೂ ಸಾಕಷ್ಟು ರೋಮ್ಯಾಂಟಿಕ್ ಆಗಿರುವುದು ಫೋಟೋಗಳಲ್ಲಿ ಕಾಣಬಹುದು.


 

49

ಅಂಕಿತಾ ಅವರು ವಿಕ್ಕಿಯೊಂದಿಗೆ ಮದುವೆಯ ನಂತರದ ಆಚರಣೆಗಳ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಇಬ್ಬರೂ ತಟ್ಟೆಯಲ್ಲಿ ಉಂಗುರವನ್ನು ಹುಡುಕುತ್ತಿದ್ದಾರೆ. ಇಬ್ಬರೂ ಸಾಕಷ್ಟು ರೋಮ್ಯಾಂಟಿಕ್ ಆಗಿರುವುದು ಫೋಟೋಗಳಲ್ಲಿ ಕಾಣಬಹುದು.


 

 

59

ಅಂಕಿತಾ ಮತ್ತು ವಿಕ್ಕಿ ಈಗ ಡ್ಯಾನ್ಸ್ ರಿಯಾಲಿಟಿ ಶೋ (Dance Reality Show) ಸ್ಮಾರ್ಟ್ ಜೋಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಇದರೊಂದಿಗೆ ಇಬ್ಬರೂ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ.


 

69

ಇತ್ತೀಚೆಗೆ ದಂಪತಿ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ. ಅವರು ತಮ್ಮ ಕಾರಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. ಹೊರಬಿದ್ದ ಫೋಟೋದಲ್ಲಿ, ಅಂಕಿತಾ ಹೊಸ ಕಾರಿನೊಂದಿಗೆತುಂಬಾ ಸಂತೋಷದಿಂದ ಕಾಣುತ್ತಿದ್ದಾರೆ.

79

ಅಂಕಿತಾ ಡಿಸೆಂಬರ್ 14, 2021 ರಂದು ವಿಕ್ಕಿ ಜೈನ್ ಅವರೊಂದಿಗೆ ಏಳು ಸುತ್ತುಗಳನ್ನು ತೆಗೆದುಕೊಂಡರು.ಇದಕ್ಕೂ ಮೊದಲು  ಅಂಕಿತಾ ಲೋಖಂಡೆ ಅವರು ಸುಶಾಂತ್ ಸಿಂಗ್ ರಜಪೂತ್ ರಿಲೆಷನ್‌ಶಿಪ್‌ನಲ್ಲಿದ್ದರು. ಸುಶಾಂತ್ ಸಾವಿನ ನಂತರ ಅಂಕಿತಾ ತುಂಬಾ ಡಿಸ್ಟರ್ಬ್‌ ಆಗಿದ್ದರು. 


 

89

ಸುಶಾಂತ್ ಬಾಲಿವುಡ್ ಕಡೆಗೆ ಮುಖ ಮಾಡಿದ ನಂತರ ಅಂಕಿತಾರಿಂದ ದೂರವಾದೂರ. ಆದರೆ, ಮಂದಿ ಅಂಕಿತಾರನ್ನೇ ದೂಷಿಯನ್ನಾಗಿ ಮಾಡಿದ್ದರು. ಈ ಬಗ್ಗೆ ಅವರು ನೀಡಿದ ಸಂದರ್ಶನವೊಂದರಲ್ಲಿ ಸುಶಾಂತ್ ಜೊತೆಗಿನ ಸಂಬಂಧ, ಬೇರೆಯಾಗಿದ್ದು, ನಂತರ ಅವರು ಅನುಭವಿಸಿದ ಯಾತನೆ ಬಗ್ಗೆ ಸವಿವಿವರವಾಗಿ ಹೇಳಿ ಕೊಂಡಿದ್ದರು.

99

ನಾನು ಕೊನೆಯ ಬಾರಿಗೆ ಸುಶಾಂತ್ ಅವರನ್ನು ನೋಡಲು ಬಯಸಿದ್ದೆ. ಆದರೆ ಹಾಗೆ ಮಾಡಲು ಧೈರ್ಯ ಬರಲಿಲ್ಲ. ಸುಶಾಂತ್‌ಗೆ ನನ್ನ ಕೊನೆಯ ವಿದಾಯ ಹೇಳಲು ನಾನು ಬಯಸಿದರೂ ಹೋಗಲಾಗಲಿಲ್ಲ. ಸುಶಾಂತ್‌ನನ್ನು ಆ ಸ್ಥಿತಿಯಲ್ಲಿ ನೋಡಿದ್ದರೆ, ಆ ಕ್ಷಣವನ್ನು ಜೀವನ ಪರ್ಯಂತ ಮರೆಯುತ್ತಿರಲಿಲ್ಲ. ಎಂದೂ ಅಂಕಿತಾ ತಮ್ಮ ನೋವನ್ನು ತೋಡಿಕೊಂಡಿದ್ದರು.

Read more Photos on
click me!

Recommended Stories