ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಇದೀಗ ಒಂದು ವರ್ಷ. 2025ರ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇದೀಗ ಕೀನ್ಯಾದಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಹಾಗೂ ರೋಷನ್ ದಾಂಪತ್ಯ ಜೀವನಕ್ಕೆ ಇದೀಗ ಒಂದು ವರ್ಷ. 2025ರ ಆಗಸ್ಟ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇದೀಗ ಕೀನ್ಯಾದಲ್ಲಿ ವಿಶೇಷವಾಗಿ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಶ್ರೀ ಹಾಗೂ ರೋಷನ್ ಅವರ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಕೀನ್ಯಾದಲ್ಲಿ ಮೊದಲ ವರ್ಷದ ಆನಿವರ್ಸರಿ
ಮದುವೆಯಾಗಿ ಒಂದು ವರ್ಷ ಪೂರೈಸಿರುವ ಖುಷಿಯಲ್ಲಿರುವ ಅನುಶ್ರೀ ಮತ್ತು ರೋಷನ್, ಈ ವಿಶೇಷ ಕ್ಷಣವನ್ನು ಕೀನ್ಯಾದಲ್ಲಿ ಕಳೆಯುತ್ತಿದ್ದಾರೆ. ಪ್ರಕೃತಿಯ ಸೊಬಗಿನ ನಡುವೆ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವ ಕ್ಷಣಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಮೊದಲ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
24
2025ರ ಆಗಸ್ಟ್ 28ರಂದು ಮದುವೆಯಾಗಿದ್ದರು
2025ರ ಆಗಸ್ಟ್ 28ರಂದು ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಇವರ ವಿವಾಹ ನೆರವೇರಿತ್ತು.ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದರು.
ಅಷ್ಟಕ್ಕೂ ಅನುಶ್ರೀ-ರೋಷನ್ ಮೊದಲ ಭೇಟಿ ಹೇಗಿತ್ತು?
ಅನುಶ್ರೀ ಈ ಹಿಂದೆ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡುವಾಗ ರೋಷನ್ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಹಂಚಿಕೊಂಡಿದ್ದರು. ರೋಷನ್ ಮತ್ತು ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಕಾಲೇಜಿನಿಂದಲೂ ಆತ್ಮೀಯ ಸ್ನೇಹಿತರು. ಶ್ರೀದೇವಿ ಮೂಲಕವೇ ಅನುಶ್ರೀ ಅವರಿಗೆ ರೋಷನ್ ಪರಿಚಯವಾಗಿದ್ದರು. ಅವರ ಮೊದಲ ಭೇಟಿ ನಡೆದದ್ದು ಹೊಸಪೇಟೆಯಲ್ಲಿ. ಪುನೀತ ಪರ್ವ ಕಾರ್ಯಕ್ರಮದ ಸಂದರ್ಭ ಇಬ್ಬರ ಪರಿಚಯವಾಗಿತ್ತು. ಆಗ ಇಬ್ಬರ ನಡುವೆ ದೊಡ್ಡ ಮಾತುಕತೆ ಏನೂ ನಡೆದಿರಲಿಲ್ಲ. ಕೇವಲ ಹಾಯ್, ಬಾಯ್ ಅಷ್ಟೇ ಆಗಿತ್ತು. ಆ ಸಂದರ್ಭದಲ್ಲಿ ರೋಷನ್ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದರು. ಫೋಟೋಗಳು ಚೆನ್ನಾಗಿವೆ ಎಂದು ಹೇಳಿದ ಅನುಶ್ರೀ, ಅವುಗಳನ್ನು ಕಳುಹಿಸುವಂತೆ ಕೇಳಿದ್ದರಂತೆ. ರೋಷನ್ ನಂಬರ್ ಕೇಳಿದಾಗ ಅನುಶ್ರೀ, “ಏರ್‌ಡ್ರಾಪ್‌ನಲ್ಲಿ ಕಳಿಸಿ” ಎಂದಿದ್ದರಂತೆ. ಆಗ ರೋಷನ್‌ಗೆ ಐಫೋನ್‌ನ ಏರ್‌ಡ್ರಾಪ್ ಬಗ್ಗೆ ಗೊತ್ತಿರಲಿಲ್ಲವಂತೆ. ಈ ಸಣ್ಣ ಘಟನೆ ಇಬ್ಬರ ಮೊದಲ ಭೇಟಿಯ ನೆನಪಿನಲ್ಲಿ ವಿಶೇಷವಾಗಿ ಉಳಿದಿದೆ.
34
ಎರಡು ವರ್ಷ ಡೇಟಿಂಗ್… ಯಾರಿಗೂ ಗೊತ್ತಾಗಿರಲಿಲ್ಲ
ಅನುಶ್ರೀ ಮತ್ತು ರೋಷನ್ ಸುಮಾರು ಎರಡು ವರ್ಷ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ ಈ ವಿಚಾರ ಬಹುತೇಕ ಯಾರಿಗೂ ತಿಳಿದಿರಲಿಲ್ಲ. ರೋಷನ್ ಅನುಶ್ರೀ ಜೊತೆ ಕಾಣಿಸಿಕೊಂಡಾಗ, ಅವರನ್ನು ಕೆಲವರು ಸ್ನೇಹಿತ ಅಥವಾ ಬಾಡಿಗಾರ್ಡ್ ಎಂದುಕೊಂಡಿದ್ದರಂತೆ. ಹೀಗೆ ಸ್ನೇಹದಿಂದ ಆರಂಭವಾದ ಇವರ ಸಂಬಂಧ ನಿಧಾನವಾಗಿ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಮದುವೆಯಾಗುವ ಬಗ್ಗೆ ಮಾತನಾಡಿಕೊಂಡು, ಕುಟುಂಬದ ಒಪ್ಪಿಗೆಯನ್ನೂ ಪಡೆದುಕೊಂಡರು.
44
ಐಟಿ ಉದ್ಯೋಗಿ ರೋಷನ್
ರೋಷನ್ ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನುಶ್ರೀ ಮಂಗಳೂರಿನವರು, ರೋಷನ್ ಕೊಡಗಿನವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಆರಂಭವಾದ ಇವರ ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಯಾಗಿ, ಕೊನೆಗೆ ಮದುವೆಯಾಗಿ ಬದಲಾಗಿದೆ. ಇದೀಗ ಮದುವೆಯಾಗಿ ಒಂದು ವರ್ಷ ಪೂರೈಸಿರುವ ಈ ಜೋಡಿ, ಕೀನ್ಯಾದಲ್ಲಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಮೊದಲ ಭೇಟಿಯಲ್ಲಿ ನಂಬರ್ ಕೊಡದೇ ಏರ್‌ಡ್ರಾಪ್ ಹೇಳಿದ್ದ ಅನುಶ್ರೀ… ಎರಡು ವರ್ಷ ಯಾರಿಗೂ ಗೊತ್ತಾಗದಂತೆ ಪ್ರೀತಿಸಿ, ಇದೀಗ ಕೀನ್ಯಾದಲ್ಲಿ ಮೊದಲ ಆನಿವರ್ಸರಿ ಆಚರಿಸುತ್ತಿರುವುದು ವಿಶೇಷ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.