ದುಬಾರಿ ಬೆಲೆಯ ಹೊಸ ಹೈಬ್ರಿಡ್ ಕಾರು ಖರೀದಿಸಿದ ಅನುಶ್ರಿ, ಈ ಕಾರಿನಲ್ಲಿದೆ ಹಲವು ವಿಶೇಷತೆ

Published : Jun 15, 2025, 07:26 PM IST

ಆ್ಯಂಕರ್ ಅನುಶ್ರಿ ಹೊಸ ಕಾರು ಖರೀದಿಸಿದ್ದಾರೆ. ಈ ಬಾರಿ ಅನುಶ್ರೀ ಹೊಚ್ಚ ಹೊಸ ಹೈಬ್ರಿಡ್ ಕಾರು ಖರೀದಿಸಿದ್ದಾರೆ. ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಈ ಕಾರಿನ ಬೆಲೆ ಎಷ್ಟು?

PREV
16

ಆ್ಯಂಕರ್ ಅನುಶ್ರೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ರಿಯಾಲಿಟಿ ಶೋ, ಮ್ಯೂಸಿಕ್, ಡ್ಯಾನ್ಸ್ ಸೇರಿದಂತೆ ಬಹುತೇಕ ಕಾರ್ಯಕ್ರಮದ ನಿರೂಪಕಿ ಅನುಶ್ರಿ. ಇನ್ನು ಸಿನಿಮಾ ಲಾಂಚ್ ಸೇರಿದಂತೆ ಇತರ ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನುಶ್ರೀಗೆ ಭಾರಿ ಬೇಡಿಕೆ ಇದೆ. ನಿರೂಪಕಿಯಾಗಿ ಆ್ಯಂಕರ್ ಅನುಶ್ರಿ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಅನುಶ್ರೀಗೆ ಅಭಿಮಾನಿಗಳ ಬಳಗವೂ ದೊಡ್ಡದಿದೆ. ಇದೀಗ ಅನುಶ್ರೀ ಹೊಸ ಕಾರು ಖರೀದಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.

26

ಇತ್ತೀಚೆಗೆ ಆ್ಯಂಕರ್ ಅನುಶ್ರಿ ಮದುವೆ ವಿಚಾರ ಭಾರಿ ಚರ್ಚೆಯಾಗಿತ್ತು. ಇದೀಗ ಅನುಶ್ರೀ ಹೊಸ ಕಾರು ಖರೀದಿ ಭಾರಿ ಸಂಚಲನ ಸೃಷ್ಟಿಸಿದೆ. ಅನುಶ್ರಿ ಇದೀಗ ಹೊಚ್ಚ ಹೊಸ ಟೋಯೋಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿಸಿದ್ದಾರೆ. ಇದು ಹೊಸ ಹೈಕ್ರಾಸ್ ಹೈಬ್ರಿಡ್ ಕಾರು. ಇದರ ಎಕ್ಸ್ ಶೋ ರೂಂ ಆರಂಭಿಕ ಬೆಲೆ 32.58 ಲಕ್ಷ ರೂಪಾಯಿ.

36

ಈ ಕಾರಿನ ಪ್ರಮುಖ ಅಂಶ ಎಂದರೆ ಮೈಲೇಜ್. ಇದು ಹೈಬ್ರಿಡ್ ಕಾರಾಗಿರುವ ಕಾರಣ ಒಂದು ಲೀಟರ್ ಪೆಟ್ರೋಲ್‌ಗೆ 23.24 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಾರು 2 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 185ಪಿಎಸ್ ಪವರ್ ಹಾಗೂ 188 ಎನ್ಎಂ (ಎಂಜಿನ್), 206 ಎನ್ಎಂ( ಎಲೆಕ್ಟ್ರಿಕ್ ಮೋಟಾರ್) ಟಾರ್ಕ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ 2 ಲೀಟರ್ ನ್ಯಾಚುರಲ್ ಆ್ಯಸ್ಪೈರ್ ಪೆಟ್ರೋಲ್ ಎಂಜಿನ್ ಆಯ್ಕೆ ಕೂಡ ಲಭ್ಯವಿದೆ.

46

ಇ ಸಿವಿಟಿ ಟ್ರಾನ್ಸ್‌ಮಿಶನ್ ಹೊಂದಿರುವ ಈ ಕಾರು, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಪೈವರ್ಡ್ ಟೈಲ್‌ಗೇಟ್, ಲೆಥರ್ ಸೀಟ್, ಡ್ಯುಯೆಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ರೀರ್ ಎಸಿ ವೆಂಟ್ಸ್, 10 ಇಂಟಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈಯರ್ಲೆಸ್ ಆ್ಯಪಲ್ ಹಾಗೂ ಆಟೋ ಕಾರ್ ‌ಪ್ಲೇ, 9 ಜೆಬಿಎಲ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

56

ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಈ ಕಾರಿನಲ್ಲಿ 6 ಏರ್‌ಬ್ಯಾಗ್, ಎಬಿಎಸ್ ಬ್ರೇಕ್, ಇಬಿಡಿ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, ಟೊಯೋಟಾ ಸೆಫ್ಟಿ ಸೆನ್ಸ್ ADAS ಸೇರಿದಂತೆ ವಿವಿಧ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ.

66

ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಅತ್ಯಂತ ಆರಾಮಾದಾಯಕ ಪ್ರಯಾಣಕ್ಕೆ ಹೆಸರುವಾಸಿ. ಅದೆಷ್ಟೇ ದೂರ ಪ್ರಯಾಣವಿದ್ದರೂ ಇನ್ನೋವಾ ಕಾರಿನಲ್ಲಿ ಪ್ರಯಾಣ ಸುಲಭ. ಇದೀಗ ಅನುಶ್ರೀ ತಮ್ಮ ಪ್ರಯಾಣಕ್ಕೆ ಇದೇ ಇನ್ನೋವಾ ಕಾರು ಆಯ್ಕೆ ಮಾಡಿಕೊಂಡಿದ್ದಾರೆ.

Read more Photos on
click me!

Recommended Stories