ಬಿಗ್ ಬಾಸ್ ಸ್ಪರ್ಧಿ, ಕನ್ನಡ ಕಿರುತೆರೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಪಮಾ ಗೌಡ ಸದ್ಯ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ.
26
ಸದ್ಯ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಟಿವಿಯಲ್ಲಿ ಹಾಗೂ ಫೋಟೋಗಳಲ್ಲಿ ತುಂಬಾ ಸಣ್ಣ ಕಾಣುತ್ತಿದ್ದಾರೆ.
36
ಹೀಗಾಗಿ 'ಮೈ ಕೈ ಮೂಳೆ ಕಾಣುವಂತೆ ಸಣ್ಣಗಾಗ ಬೇಡಿ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಟ್ರಾನ್ಸ್‌ಫಾರ್ಮೆಷನ್ ಬಗ್ಗೆ ಅನುಪಮಾ ಗೌಡ ಪ್ರತಿಕ್ರಿಯೆ ನೀಡಿಲ್ಲ.
46
ಸುಮಾರು 1 ವರ್ಷದಿಂದ ಅನುಪಮಾ ಗೌಡ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಪ್ರತಿ ದಿನ ಜಿಮ್, ಡಯಟ್ ಹಾಗೂ ಕಾರ್ಡಿಯೋ ಮಾಡುತ್ತಾರೆ. ಇದರಿಂದ ತುಂಬಾ ತೂಕ ಕಳೆದುಕೊಂಡಿದ್ದಾರೆ.
56
ಪರ್ಸನಲ್ ಫಿಟ್ನೆಸ್ ಟ್ರೈನರ್ ಪವಿತ್ರಾ ಅವರ ಜಿಮ್‌ನಲ್ಲಿ ಅನುಪಮಾ ವರ್ಕೌಟ್ ಮಾಡುವುದು. ಅಲ್ಲದೆ ದಿನ ಜಿಮ್‌ಗೆ ಹೋದಾಗ ಹಾಕುವ ಅಟೆಂಡೆನ್ಸ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಾರೆ.
66
ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಇರುವ ಅನುಪಮಾ ಗೌಡ ಖಾಸಗಿ ಬ್ರಾಂಡ್ ಪ್ರಮೋಷನ್‌ಗಳನ್ನು ಮಾಡುತ್ತಾರೆ. ಅಲ್ಲದೆ ಇತ್ತೀಚಿಗೆ ತಮ್ಮ ಚಿತ್ರಕ್ಕೆ 2019ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.