ಬೆನ್ನ ಹಿಂದೆ ಅಗಲಿದ ಅಪ್ಪನ ಟ್ಯಾಟೂ ಹಾಕಿಸಿಕೊಂಡ ಅನುಪಮಾ ಗೌಡ; ಫೋಟೋ ವೈರಲ್
ವೈರಲ್ ಆಯ್ತು ನಟಿ ಅನುಪಮಾ ಗೌಡ ಟ್ಯಾಟೂ ಫೋಟೋ. ಏನೋ ಹಾಕಿಸಲು ಹೋಗಿ ಏನೋ ಹಾಕಿಸಿದೆ ಎಂದ ನಟಿ....
ವೈರಲ್ ಆಯ್ತು ನಟಿ ಅನುಪಮಾ ಗೌಡ ಟ್ಯಾಟೂ ಫೋಟೋ. ಏನೋ ಹಾಕಿಸಲು ಹೋಗಿ ಏನೋ ಹಾಕಿಸಿದೆ ಎಂದ ನಟಿ....
ಕನ್ನಡ ಕಿರುತೆರೆಯ ಅಕ್ಕ, ಬಿಗ್ ಬಾಸ್ ಸ್ಪರ್ಧಿ, ರಿಯಾಲಿಟಿ ಶೋಗಳ ನಿರೂಪಕಿ ಅನುಪಮಾ ಗೌಡ ಈಗ ಹೊಸ ಟ್ಯಾಟ್ಯೂ ಹಾಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
'ಅಪ್ಪ. ನನ್ನ ಜೊತೆ ದೈಹಿಕವಾಗಿ ಇಲ್ಲದಿದ್ದರೂ ನನ್ನ ಬೆನ್ನ ಹಿಂದೆ ಸದಾ ಇರುತ್ತಾರೆ. ನನ್ನ ಟ್ಯಾಟ್ಯೂ ಅದ್ಭುತವಾಗಿ ಮೂಡಿ ಬಂದಿದೆ. ನನ್ನ ಜೀವನ ಪೂರ್ತಿ ಈ ಟ್ಯಾಟೂ ಜೊತೆಯಾಗಿ ಇರುತ್ತದೆ' ಎಂದು ಅನುಪಮಾ ಗೌಡ ಬರೆದುಕೊಂಡಿದ್ದಾರೆ.
ತಮ್ಮ ತಂದೆಯ ಜೊತೆ ಬಾಲ್ಯದಲ್ಲಿ ಕ್ಲಿಕ್ ಮಾಡಿಕೊಂಡಿರುವ ಫೋಟೋದ ಔಟ್‌ಲೈನ್‌ನ ತಮ್ಮ ಬೆನ್ನ ಹಿಂದೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ತುಂಬಾ ಸರಳವಾಗಿದ್ದರು, ಅದ್ಭುತವಾಗಿದೆ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.
ಏನೇ ಟ್ಯಾಟೂ ಹಾಕಿಸಲು ಹೋಗಿ ಏನೇ ಟ್ಯಾಟೂ ಹಾಕಿಸಿಕೊಂಡು ಬಂದಿರುವೆ. ಯಾರದ್ದೋ ತಂದೆ ತಾಯಿ ಫೋಟೋ ಹಾಕಿಸಿಕೊಳ್ಳಬೇಕಿತ್ತು..ಕೊನೆಯಲ್ಲಿ ನನ್ನ ತಂದೆ ತಾಯಿ ಫೋಟೋ ಹಾಕಿಕೊಂಡೆ ಎಂದು ಅನುಪಮಾ ಹೇಳಿದ್ದಾರೆ..
ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ಬಾಯ್‌ಫ್ರೆಂಡ್ ಅಥವಾ ಹೆಸರಿನ ಸಿಂಬಲ್‌ಗಳ ಫೋಟೋ ಹಾಕಿಸಿಕೊಳ್ಳುತ್ತಾರೆ ಆದರೆ ಅನುಪಮಾ ತಂದೆ ಫೋಟೋ ಹಾಕಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗೆ ಅನುಪಮಾ ಗೌಡ ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ. ನಮ್ಮನೆ ಎಂದು ಹೆಸರಿಟ್ಟಿದ್ದಾರೆ. ಗೃಹಪ್ರವೇಶದ ದಿನ ತಂದೆ ಇಲ್ಲ ಅನ್ನೋ ಭಾವನೆ ಬರಬಾರದು ಎನ್ನುವ ಕಾರಣಕ್ಕೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಅಂತಾರೆ ಫ್ಯಾನ್ಸ್.